Home Entertainment ನಟ, ಬಿಗ್ ಬಾಸ್-7 ರ ವಿನ್ನರ್ ಶೈನ್ ಶೆಟ್ಟಿಯಿಂದ ಬಂತು ಮದುವೆಯ ಬಗ್ಗೆ ಸ್ಪಷ್ಟನೆ |...

ನಟ, ಬಿಗ್ ಬಾಸ್-7 ರ ವಿನ್ನರ್ ಶೈನ್ ಶೆಟ್ಟಿಯಿಂದ ಬಂತು ಮದುವೆಯ ಬಗ್ಗೆ ಸ್ಪಷ್ಟನೆ | ಏನಿರಬಹುದು? ಇಲ್ಲಿದೆ ಕುತೂಹಲಕಾರಿ ಉತ್ತರ!

Hindu neighbor gifts plot of land

Hindu neighbour gifts land to Muslim journalist

ಶೈನ್ ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಿರುತೆರೆಯ ನಂಬರ್ ಒನ್ ಶೋ ಎಂದೇ ಹೆಸರುವಾಸಿಯಾಗಿರುವ ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಆಗಿದ್ದ ಶೈನ್ ಶೆಟ್ಟಿ ಮೊನ್ನೆ ಮದುವೆ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ವಿಷಯ ಅದೇ ಮದುವೆಗೆ ಸಂಬಂಧಪಟ್ಟಿದ್ದು. ಸುಕೃತ ನಾಗ್ ಜೊತೆಗಿನ ಮದುವೆಯ ಬಗ್ಗೆ ವಿಚಾರಕ್ಕೆ ಇದೀಗ ಶೈನ್ ಶೆಟ್ಟಿ ಈ ವದಂತಿಗೆಲ್ಲ ಸ್ಪಷ್ಟನೆ ನೀಡಿದ್ದಾರೆ.

ಜೇಮ್ಸ್, ಕಾಂತಾರ ಚಿತ್ರದ ನಂತರ ಮತ್ತೆ ಸಾಕಷ್ಟು ಸಿನಿಮಾಗಳಲ್ಲಿ ಶೈನ್ ಆಕ್ಟೀವ್ ಆಗಿದ್ದಾರೆ. ಇದರ ಮಧ್ಯೆ ಶೈನ್ ಶೆಟ್ಟಿ ಹೆಸರು ಸುಕೃತ ನಾಗ್ ಜೊತೆ ಕೇಳಿ ಬರುತ್ತಿದೆ. `ಲಕ್ಷಣ’ ನಟಿ ಸುಕೃತ ಜೊತೆ ಶೈನ್ ಶೆಟ್ಟಿ ಮದುವೆ ಅಂತಾ ಸಾಕಷ್ಟು ಸಮಯದಿಂದ ಈ ಸುದ್ದಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

“ಕಲಾವಿದರು ಆಗಿರುವ ಕಾರಣ ನನಗೂ ಸುಕೃತ ಅವರಿಗೂ ಪರಿಚಯವಿದೆ ಆದರೆ ಯಾವುದೇ ಕಾನ್‍ಟಾಕ್ಟ್ ಇಲ್ಲ. ನಾವು ಇದುವರೆಗೂ ಭೇಟಿಯಾಗಿಲ್ಲ. ಯಾವುದೇ ಮಾತುಕತೆಯಿಲ್ಲ. ಈ ಮದುವೆ ಸುದ್ದಿ ಎಲ್ಲಾ ಸುಳ್ಳು, ಆ ತರಹ ಏನು ವಿಚಾರವಿಲ್ಲ ಎಂದಿದ್ದಾರೆ. ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ, ಮತ್ತು ಇದನ್ನೂ ಯಾರು ನಂಬಬೇಡಿ” ಎಂದು ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ನಾನು ನನ್ನ ಕೆರಿಯರ್‍ನತ್ತ ಗಮನ ಹರಿಸುತ್ತಿದ್ದೇನೆ. ಮದುವೆಯ ಬಗ್ಗೆ ನಾನು ಆಲೋಚನೆ ಮಾಡಿಲ್ಲ ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ಮಾತನಾಡಿದ್ದಾರೆ. ಈ ಮೂಲಕ ಸುಕೃತ ನಾಗ್ ಜೊತೆಗಿನ ಮದುವೆ ವದಂತಿಗೆ ಶೈನ್ ಬ್ರೇಕ್ ಹಾಕಿದ್ದಾರೆ.

ಅಂತೂ ಈ ವಿಷಯದಿಂದ ಶೈನ್ ಶೆಟ್ಟಿ ಅಭಿಮಾನಿಗಳು ಅದರಲ್ಲೂ ಮಹಿಳಾ‌ ಅಭಿಮಾನಿಗಳಿಗೆ ಖುಷಿಯಾಗಿರುವುದಂತೂ ನಿಜ.