Home Entertainment BBK9 : ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ | ಸಾನ್ಯಾ ಹೆಸರಿನಲ್ಲಿ ಎರಡೆರಡು ಪ್ಲೇಟ್ ಊಟ...

BBK9 : ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ | ಸಾನ್ಯಾ ಹೆಸರಿನಲ್ಲಿ ಎರಡೆರಡು ಪ್ಲೇಟ್ ಊಟ | ನಕ್ಕು ನಕ್ಕು ಸಾಕಾದ ಮನೆಮಂದಿ!

Hindu neighbor gifts plot of land

Hindu neighbour gifts land to Muslim journalist

ಕನ್ನಡಿಗರಲ್ಲಿ ಮನೆ ಮಾಡಿರುವ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಈಗಾಗಲೇ ನಮಗೆ ಗೊತ್ತೇ ಇದೆ. ಬಿಗ್ ಬಾಸ್ ನ ಸ್ಪರ್ಧಿಗಳಲ್ಲಿ ದಿನೇ ದಿನೇ ಕಳೆದ ಹಾಗೆಯೇ ಕಾಂಪಿಟೇಶನ್​ ಹೆಚ್ಚಾಗ್ತನೇ ಇದೆ. ಒಂದೊಂದು ವಾರನೂ ಒಬ್ಬೊಬ್ಬರು ಮನೆಯಿಂದ ಹೋಗ್ತಾ ಇದ್ದಾರೆ. ಅದರಲ್ಲಿಯೂ ಊಹಿಸಲಾಗದೇ ಇರುವ ಸ್ಪರ್ಧಿಯೇ ಮನೆಯಿಂದ ಹೊರಗೆ ಹೋಗ್ತಾ ಇದ್ದಾರೆ. ಹೌದು ಬಿಗ್ ಬಾಸ್​ನಲ್ಲಿ ಪ್ರತಿ ವಾರದ ನಾಮಿನೇಷನ್ ಹಾಗೂ ಎಲಿಮಿನೇಷನ್ ಪ್ರಕ್ರಿಯೆ ತಪ್ಪುವುದಿಲ್ಲ.

ಅದಲ್ಲದೆ ‘ಬಿಗ್ ಬಾಸ್’ ಮನೆಯಲ್ಲಿ ರೂಪೇಶ್ ಶೆಟ್ಟಿ ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಇನ್ನು ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಒಟಿಟಿಯಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡರು. ನಂತರ ಟಿವಿ ಸೀಸನ್​ಗೂ ಬಂದರು. ಇವರ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಬೆಳೆದಿತ್ತು. ಆದರೆ, ಸಾನ್ಯಾ ಐಯ್ಯರ್ ಅವರು ಕಳೆದ ವಾರ ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ಹೋಗಿದ್ದಾರೆ. ಸಾನ್ಯಾ ಅವರನ್ನು ಕಳೆದುಕೊಂಡು ರೂಪೇಶ್ ಶೆಟ್ಟಿ ತುಂಬಾನೇ ಕುಗ್ಗಿದ್ದಾರೆ .

ರೂಪೇಶ್ ಅವರ ಜತೆ ಆಪ್ತವಾಗಿದ್ದ ಸಾನ್ಯಾ ಐಯ್ಯರ್ ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇದಾದ ನಂತರದಲ್ಲಿ ಅವರು ಬೇಸರಗೊಂಡಿದ್ದರು. ಕಣ್ಣೀರು ಹಾಕುತ್ತಲೇ ಊಟ ಮಾಡಿದ್ದರು. ಸಾನ್ಯಾ ಐಯ್ಯರ್ ಅವರನ್ನು ನೆನಪಿಸಿಕೊಂಡು ರೂಪೇಶ್ ಶೆಟ್ಟಿ ಎರಡೆರಡು ಪ್ಲೇಟ್​​ ಇಟ್ಟುಕೊಂಡು ಊಟ ಮಾಡಿದ್ದರು. ಇನ್ನೂ ಈ ವಿಚಾರಕ್ಕೆ ಕಿಚ್ಚ ಸುದೀಪ್ ಅವರು ಕಾಲೆಳೆದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಐಯ್ಯರ್ ಅವರ ಪಾಲಿಗೆ ಒಂದಷ್ಟು ಮೊಟ್ಟೆ ನೀಡಲಾಗಿತ್ತು. ಈ ಮೊಟ್ಟೆಯನ್ನು ರೂಪೇಶ್​ಗೆ ಕೊಟ್ಟು ಹೋಗಿದ್ದರು. ಅದನ್ನು ರೂಪೇಶ್ ತಿಂದಿದ್ದಾರೆ. ಈ ಎಲ್ಲಾ ವಿಚಾರ ಇಟ್ಟುಕೊಂಡು ಕಿಚ್ಚ ಸುದೀಪ್ ಅವರು ರೂಪೇಶ್ ಅವರ​ ಕಾಲೆಳೆದಿದ್ದಾರೆ.

ರೂಪೇಶ್ ಶೆಟ್ಟಿ ಅವರು ಸಾನ್ಯಾ ಐಯ್ಯರ್ ಬಿಗ್ ಬಾಸ್ ಮನೆಯಲ್ಲಿ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಊಟ ಮಾಡುತ್ತಿರಲಿಲ್ಲ. ಸಾನ್ಯಾ ಹೋದ ನಂತರದಲ್ಲಿ ರೂಪೇಶ್​ಗೆ ಒಂಟಿತನ ಕಾಡಿದೆ. ಈ ಕಾರಣಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಊಟ ಮಾಡುವಾಗ ಸಾನ್ಯಾ ಐಯ್ಯರ್ ಹೆಸರಲ್ಲಿ ಒಂದು ಪ್ಲೇಟ್ ತೆಗೆದುಕೊಂಡು ಬಂದಿದ್ದಾರೆ ರೂಪೇಶ್ ಶೆಟ್ಟಿ. ತಮ್ಮ ಪ್ಲೇಟ್​​ನ ಊಟವನ್ನು ಆ ಪ್ಲೇಟ್​ಗೆ ಹಾಕಿಕೊಂಡು ಊಟ ಮಾಡಿದ್ದಾರೆ. ಸಾನ್ಯಾ ನೆನಪಲ್ಲಿ ಎರಡು ಪ್ಲೇಟ್​ನಲ್ಲಿ ಅವರು ಊಟ ಮಾಡಿದ್ದಾರೆ.

ಈ ಎಲ್ಲಾ ವಿಚಾರ ಇಟ್ಟುಕೊಂಡು ರೂಪೇಶ್ ಅವರನ್ನು ಕಿಚ್ಚ ಸುದೀಪ್ ಅವರು ಒಂದು ಕ್ಷಣ ನಗಿಸಿದ್ದಾರೆ