Home Breaking Entertainment News Kannada ರಿಷಬ್ ಶೆಟ್ರ ಕಾಲಿಗೆ ಬಿದ್ದು ಬನ್ನಿ – ಯಾರು ಯಾರಿಗೆ ಹೇಳಿದರು?

ರಿಷಬ್ ಶೆಟ್ರ ಕಾಲಿಗೆ ಬಿದ್ದು ಬನ್ನಿ – ಯಾರು ಯಾರಿಗೆ ಹೇಳಿದರು?

Hindu neighbor gifts plot of land

Hindu neighbour gifts land to Muslim journalist

ಜನರ ಮನರಂಜನೆಯ ಉತ್ತಮ ಸಂದೇಶ ಸಾರುವ ಉದ್ದೇಶದಿಂದ ಅನೇಕ ಚಿತ್ರಗಳು ತೆರೆಕಂಡು ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದರೆ ಮತ್ತೆ ಕೆಲವು ಚಿತ್ರ ತೆರೆ ಕಾಣುವ ಮೊದಲೇ ಕೆಲವೊಂದು ವಿವಾದಕ್ಕೆ ಕಾರಣವಾಗುತ್ತದೆ.

ಇದೀಗ ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ಮಠದ ಹೆಸರಿನಲ್ಲಿ ಸಿನಿಮಾ ಮೂಡಿ ಬಂದಿದ್ದು, ಸಿನೆಮಾದ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ. ರವೀಂದ್ರ ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಮೊದಲ ಮಠ ಸಿನಿಮಾ ಮಾಡಿದ್ದ ಗುರುಪ್ರಸಾದ್, ತಬಲಾ ನಾಣಿ, ಮಂಡ್ಯ ರಮೇಶ್ ರವರ ತಾರಾಗಣ ಚಿತ್ರದಲ್ಲಿದೆ.

ಈ ಸಿನಿಮಾದಲ್ಲಿ ಮಠಗಳಿಗೆ ಮತ್ತು ಸ್ವಾಮೀಜಿಗಳಿಗೆ ಅವಮಾನಿಸಲಾಗಿದೆ ಎನ್ನುವ ಕಾರಣಕ್ಕಾಗಿ ಕಾಳಿಮಠದ ರಿಷಿಕುಮಾರ್ ಸ್ವಾಮೀಜಿ ಫುಲ್ ಗರಂ ಆಗಿದ್ದಾರೆ. ಮಠ ಸಿನಿಮಾದ ಬಗ್ಗೆ ಮಾತನಾಡಿರುವ ರಿಷಿ ಕುಮಾರ್ ಸ್ವಾಮೀಜಿ, ನಿರ್ದೇಶಕರ ಬಗ್ಗೆ ಆಕ್ರೋಶ ಹೊರ ಹಾಕಿದ್ದು, ‘ತಾಕತ್ತು ಇದ್ದರೆ ಹಿಂದೂ ಗುರುಗಳ ಬದಲಿಗೆ ಮೌಲಿಗಳ ಬಗ್ಗೆ ಸಿನಿಮಾ ಮಾಡಿ ನಿರೂಪಿಸಿ. ಅಲ್ಲದೆ, ಚರ್ಚ್, ಫಾದರ್ ಗಳ ಬಗ್ಗೆ ಚಿತ್ರ ಮಾಡುವುದು ಬಿಟ್ಟು ಇವರಿಗೆ ಹಿಂದೂ ಧರ್ಮಗುರುಗಳು ಟಾರ್ಗೆಟ್ ಯಾಕೆ?’ ಎಂದು ಪ್ರಶ್ನಿಸಿದ್ದು ತಮ್ಮ ಮಾತಿನ ಮೂಲಕ ಚಾಟಿ ಬೀಸಿ ಕೋಪವನ್ನು ಹೊರ ಹಾಕಿದ್ದಾರೆ.

ಮೌಲಿಗಳ ಬಗ್ಗೆ ಸಿನಿಮಾ ಮಾಡಲಿ ಚರ್ಚ್ ಫಾದರ್ ಗಳ ಬಗ್ಗೆ ಸಿನಿಮಾ ಮಾಡಲಿ. ಹಿಂದು ಸ್ವಾಮಿಗಳ ಬಗ್ಗೆ ಸಿನಿಮಾ ಮಾಡಿ ಕಾಸು ಮಾಡ್ಬೇಡಿ ಅಲ್ಲದೇ, ಈ ಸಿನಿಮಾ ರಿಲೀಸ್ ಆಗದಂತೆ ನೋಡಿಕೊಳ್ಳಿ ಅಂತ ಸ್ವಾಮಿಜಿಗಳಿಗೆ ರಿಷಿಕುಮಾರ್ ಮನವಿ ಮಾಡಿದ್ದಾರೆ. ಮಠ ಸಿನಿಮಾನ ಸ್ವಾಮಿಜಿಗಳಿಗೆ ತೋರಿಸಿ ಆಮೇಲೆ ರಿಲೀಸ್ ಮಾಡ್ಬೇಕು ಅಂತ ಸಲಹೆ ನೀಡಿದ್ದಾರೆ.

ಹಿಂದು ಮಠ ಹಿಂದು ಸ್ವಾಮಿಜಿಗಳ ಬಗ್ಗೆ ತಾತ್ಸಾರ ಹೆಚ್ಚಾಗುತ್ತಿದ್ದು ಕಲಾವಿದರ ಮೂಲಕ ಮಠಗಳ ಬಗ್ಗೆ ತಪ್ಪು ಹೇಳಿಕೆಗಳನ್ನು ಹೇಳಿಸುತ್ತಿದ್ದಾರೆ ಎಂದಿದ್ದು, ಜೊತೆಗೆ ಕಾಂತಾರ ಸಿನಿಮಾ ನೋಡಿ ರಿಷಬ್ ಕಾಲಿಗೆ ಬಿದ್ದು ಬನ್ನಿ’ ಅಂತ ರಿಷಿಕುಮಾರ್ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.