Home Breaking Entertainment News Kannada Kantara Rishab Shetty : ರಿಷಬ್ ಶೆಟ್ರಿಗೆ ‘ಕ’ ಅಕ್ಷರ ಲಕ್ಕಿನಾ? ಹೌದು…ಹೇಗೆ ಅಂತೀರಾ? ಇಲ್ಲಿದೆ...

Kantara Rishab Shetty : ರಿಷಬ್ ಶೆಟ್ರಿಗೆ ‘ಕ’ ಅಕ್ಷರ ಲಕ್ಕಿನಾ? ಹೌದು…ಹೇಗೆ ಅಂತೀರಾ? ಇಲ್ಲಿದೆ ಅಮೇಜಿಂಗ್ ಕಹಾನಿ

Hindu neighbor gifts plot of land

Hindu neighbour gifts land to Muslim journalist

ಸಿನಿಮಾ ರಂಗದಲ್ಲಿ ಎಲ್ಲ ಸಿನಿಮಾಗಳು ಹಿಟ್ ಆಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿ ನಿರ್ದೇಶಕರು ಸಿನಿಮಾ ಗೆಲ್ಲಬೇಕೆಂಬ ನಿರೀಕ್ಷೆ ಇಟ್ಟು ಹೂಡಿಕೆ ಮಾಡಿರುತ್ತಾರೆ ಆದರೆ, ಕೆಲವೊಮ್ಮೆ ಒಳ್ಳೆ ಸಿನಿಮಾಗಳು (Reach) ರೀಚ್ ಆಗದೇ ಇರಬಹುದು.

ಆ ಕಾರಣಕ್ಕೆ ಆ ಚಿತ್ರಗಳು ಸೋತು ಹೋದ (Example) ಉದಾಹರಣೆಗಳಿವೆ. ಆದರೆ, ಕೆಲ ಸಿನಿಮಾಗಳು ನಿರೀಕ್ಷೆಯ ಎಲ್ಲೆಯನ್ನು ಮೀರಿ ಯಶಸ್ಸು ಗಳಿಸುತ್ತವೆ. ದಿಯಾ, kgf 2, ಹೀಗೆ ಈ ಸಾಲಿಗೆ ಕಾಂತಾರ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಕನ್ನಡದ ಕಾಂತಾರ (Kantara Cinema) ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲಿಯೇ ಡಿವೈನ್ ಹಿಟ್ ಆಗಿ ದಾಖಲೆ ಸೃಷ್ಟಿ ಮಾಡಿದೆ .

ಕೇವಲ ಕರ್ನಾಟಕ ಮಾತ್ರವಲ್ಲದೇ ಹೊರ ದೇಶದಲ್ಲಿಯೂ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಜೊತೆಗೆ kgf ಸಿನಿಮಾದ ದಾಖಲೆಯನ್ನು ಪುಡಿ ಮಾಡಿ ಅಬ್ಬರಿಸಿ ಜನಮಾನಸದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಕಾಂತಾರ’ ಸಿನಿಮಾ ಮೂಲಕ ಅಬ್ಬರಿಸಿದ ರಿಷಬ್ ಶೆಟ್ಟಿ ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಇದರ ನಡುವೆ ವಿಶೇಷ ಹಾಗೂ ಕುತೂಹಲಕರ ವಿಚಾರವೊಂದು ಹರಿದಾಡುತ್ತಿದೆ.

ಕಾಂತಾರ ಸಿನಿಮಾ ಗೆಲ್ಲೋಕೆ “ಕ” ಅಕ್ಷರ ಹೆಲ್ಪ್ ಆಯಿತೇ? ಎಂಬ ಹೊಸ ಪ್ರಶ್ನೆ ಬುಗಿಲೆದ್ದಿದೆ. ರಿಷಬ್ ಶೆಟ್ಟಿಗೆ ಸದ್ಯ ಗಜಕೇಸರಿ ಯೋಗ ಇದ್ದು, ವಿಚಾರವನ್ನು ಅವರ ತಂದೆ ಹೇಳಿಕೊಂಡಿದ್ದಾರೆ. ಇದರಿಂದ ರಿಷಬ್ ಮುಟ್ಟಿದ್ದೆಲ್ಲ ಚಿನ್ನವೇ ಆಗುತ್ತದೆ ಅನ್ನೋ ನಂಬಿಕೆ ಕೂಡ ಇದೆ.

ಇದರ ಹೊರತಾಗಿ ಕಾಂತಾರ ಚಿತ್ರದ ನಾಯಕ-ನಿರ್ದೇಶಕ ರಿಷಬ್ ಶೆಟ್ಟಿಗೆ “ಕ” ಅಕ್ಷರದ ಬಲ ಇತ್ತು ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕ ನಿದರ್ಶನ ಕೂಡ ಇದೆ. ಈ ಚಿತ್ರದ ಟೈಟಲ್ ಕೂಡ “ಕ” ಅಕ್ಷರದಿಂದಲೇ ಶುರು ಆಗಿದ್ದು, ಇಂಗ್ಲೀಷ್ ನಲ್ಲಿ “K” ಅಕ್ಷರದಿಂದಲೇ ಅದು ಹೆಚ್ಚು ಪ್ರಚಲಿತವಾಗಿದೆ.

ಈ ಮೊದಲು ಕಿರಿಕ್ ಪಾರ್ಟಿ ಸಿನಿಮಾ ಕೂಡ ಹೊಸ ತರಂಗಾಂತರ ಸೃಷ್ಟಿ ಮಾಡಿತ್ತು. ರಿಷಬ್ ನಿರ್ದೇಶನದ ಕಿರಿಕ್ ಪಾರ್ಟಿ ಹಿಟ್ ಆಗಿ, ಇದು ಕೂಡ ಸಾಮಾನ್ಯವಾಗಿಯೇ ಶುರು ಆಗಿತ್ತು. ಈ ಚಿತ್ರ ಬಬಿಡುಗಡೆಯಾದಾಗ ಹೊಸ ಅಲೆಯನ್ನೆ ಎಬ್ಬಿಸಿತ್ತು.

ಕಾಂತಾರ ಸಿನಿಮಾ ವಿಚಾರದಲ್ಲಿ ಅದೃಷ್ಟ ಕೈ ಹಿಡಿದಿದೆ. ಕಾಂತಾರ ಅನ್ನೋ ಟೈಟಲ್, ದೊಡ್ಡ ಪ್ರೋಡಕ್ಷನ್ ಹೌಸ್, ಒಳ್ಳೆ ಕತೆ, ಒಳ್ಳೆ ನಿರ್ದೇಶನ ಎಲ್ಲವೂ ಇಲ್ಲಿ ಕೂಡಿ ಬಂದಿವೆ. ಇದರಿಂದ ಕನ್ನಡದ ಕಾಂತಾರ ಸಿನಿಮಾ ದೇಶ-ವಿದೇಶದಲ್ಲೂ ರೀಚ್ ಆಗಿ ಸೂಪರ್ ಹಿಟ್ ಕೂಡ ಆಗಿ ಬಿಟ್ಟಿದೆ.

ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ರಕ್ಷಿತ್ ಶೆಟ್ಟಿಯ ಅಭಿನಯದ ಜೊತೆಗೆ ಕಥಾ ಹಂದರಕ್ಕೆ ಜನ ಮನಸೋತು ಸಿನಿ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.

ರಿಷಬ್ ಶೆಟ್ಟಿ ತಮ್ಮ ಸಿನಿ ಕರಿಯರ್ ನಲ್ಲಿ ಒಬ್ಬ ಅಸಿಸ್ಟಂಟ್ ಡೈರೆಕ್ಟರ್ ಆಗಿಯೇ ಕೆಲಸ ಮಾಡಿರುವುದರಿಂದ ಕಥೆಯನ್ನು ಜನರ ಮುಂದಿಡುವ ಕಲೆಯನ್ನು ಚೆನ್ನಾಗಿ ಅರಿತಿದ್ದಾರೆ. ಇದಕ್ಕೆ ನಿದರ್ಶನ ಕಿರಿಕ್ ಪಾರ್ಟಿ ಸಿನಿಮಾ ಎಂದರೆ ತಪ್ಪಾಗದು.

ಇದರ ಜೊತೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನ ಈ ಚಿತ್ರವೂ ಹೊಸ ಅಲೆ ಎಬ್ಬಿಸಿತ್ತು. ಇಲ್ಲೂ ಒಳ್ಳೆ ಕಥೆಯ ಜೊತೆಗೆ ಒಳ್ಳೆ ಉದ್ದೇಶವೂ ಸಮ್ಮಿಲನಗೊಂಡಿತ್ತು. ಬೆಲ್ ಬಾಟಂ-2 ಸಿನಿಮಾದಲ್ಲಿ ರಿಷಬ್ ಹೀರೋ ಆಗಿಯೇ ಮಿಂಚಿದರು.

ಕಾಂತಾರ ಚಿತ್ರದ ರಿಷಬ್ ಶೆಟ್ಟಿ ಗೆ “ಕ” ಅಕ್ಷರದ ಬಲವಿದೆ ಎಂಬ ಹೊಸ ವಿಚಾರ ಸಂಚಲನ ಮೂಡಿಸಿದೆ. ಹಿಟ್ ಸಿನಿಮಾದ ಬಳಿಕ “ಕ” ಅಕ್ಷರದ ಚಿತ್ರವನ್ನೇ ರಿಷಬ್ ಮಾಡಿದ ಬಳಿಕ ಹೊಸ ಚಿತ್ರಕ್ಕೆ ಕಾಂತಾರ ಅಂತಲೂ ಹೆಸರಿಟ್ಟಿದ್ದರು.

ಈ ಸಿನಿಮಾ ದೇಶ-ವಿದೇಶದಲ್ಲೂ ಹೆಸರು ಮಾಡಿ, ಕನ್ನಡ ಸಿನಿಮಾ ಇಂಡಸ್ಟ್ರೀಯ ಖ್ಯಾತಿಯನ್ನೂ ದೂರದ ದೇಶಕ್ಕೂ ತಲುಪಿಸಿದೆ.

“ಕ” ಅಕ್ಷರದ ಕಾಂತಾರ ಇಡೀ ಕರಾವಳಿಯ ಕಲೆಯ ಸೊಬಗನ್ನು ಜೊತೆಗೆ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಿದೆ. “ಕ” ಅಕ್ಷರದ ಕೆಆರ್​ಜಿ ಸಂಸ್ಥೆನೇ ಈ ಚಿತ್ರವನ್ನ ನಿರ್ಮಿಸಿದೆ. ಇಲ್ಲಿ ಎರಡು ಕೆ ಗಳು ಸೇರಿ ಇಡೀ ಕನ್ನಡ ಇಂಡಸ್ಟ್ರೀಯಲ್ಲಿ ಹೊಸ ಅಲೆ ಮತ್ತು ಹೊಸ ಭರವಸೆಯನ್ನೆ ಮೂಡಿಸಿವೆ.

ರಿಷಬ್ ಮುಂದಿನ ಚಿತ್ರ “ಕ” ಅಕ್ಷರದ್ದೇ ಆಗಿರುತ್ತದೇಯೇ?ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಕೂಡ “ಕ” ಅಕ್ಷರದಿಂದಲೇ ಶುರು ಆಗುತ್ತದೆಯೇ?

ಅಕ್ಷರಗಳ ವಿಚಾರದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ನಂಬಿಕೆಗಳು ಇವೆ. ಅಷ್ಟೇ ಕುತೂಹಲದ ಜೊತೆಗೆ ಲಕ್ಕಿ ಎನ್ನುವ ನಂಬಿಕೆಯಿದೆ. ಒಟ್ಟಾರೆ, ರಿಷಬ್ ಶೆಟ್ಟಿ ನಿರ್ದೇಶನದ ಕ ಅಕ್ಷರದ ಎರಡು ಸಿನಿಮಾ ಸೂಪರ್ ಹಿಟ್ ಆಗಿವೆ.

ಕಿರಿಕ್ ಪಾರ್ಟಿ ಮತ್ತು ಕಾಂತಾರ ಎರಡೂ ರಿಷಬ್ ಹೆಸರನ್ನು ಇತಿಹಾಸ ಪುಟದಲ್ಲಿ ತನ್ನದೇ ಛಾಪು ಮೂಡಿಸಿ ಕನ್ನಡದ ಜನಪ್ರಿಯತೆಯನ್ನು ಹೆಚ್ಚಿಸಿದೆ.