Home Entertainment ಕಿರಿಕ್ ಪಾರ್ಟಿ ತಂಡದವರು ನನ್ನನ್ನು ಸಿನಿಮಾಕ್ಕೆ ಹಾಕಿಕೊಳ್ಳಲು ಹಿಂದೆ ಬಿದ್ದಿದ್ದರು, ನಾನೇ ಅವಾಯ್ಡ್ ಮಾಡುತ್ತಿದ್ದೆ –...

ಕಿರಿಕ್ ಪಾರ್ಟಿ ತಂಡದವರು ನನ್ನನ್ನು ಸಿನಿಮಾಕ್ಕೆ ಹಾಕಿಕೊಳ್ಳಲು ಹಿಂದೆ ಬಿದ್ದಿದ್ದರು, ನಾನೇ ಅವಾಯ್ಡ್ ಮಾಡುತ್ತಿದ್ದೆ – ರಶ್ಮಿಕಾ ಮಂದಣ್ಣ

Hindu neighbor gifts plot of land

Hindu neighbour gifts land to Muslim journalist

ನಟಿ ರಶ್ಮಿಕಾ ಮಂದಣ್ಣ ಬಹು ಬೇಡಿಕೆಯ ನಟಿ. ಈಗಾಗಲೇ ಈಕೆ ಚಥುರ್ಭಾಷಾ ನಟಿ ಎಂಬ ಮಾನ್ಯತೆ ಕೂಡಾ ಪಡೆದಿದ್ದಾಳೆ. ಕನ್ನಡ ಮಾತ್ರವಲ್ಲದೇ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಬಹು ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿಯೇ ಮಲಯಾಳಂ ಇಂಡಸ್ಟ್ರಿಗೂ ಕಾಲಿಡಲಿದ್ದಾರೆ ಈ ನಟಿ.

ಸ್ಯಾಂಡಲ್ ವುಡ್ ನಿಂದ ನಂತರ ಹೆಜ್ಜೆ ಇಟ್ಟದ್ದೇ, ತೆಲುಗು, ತಮಿಳು ಸಿನಿಮಾದಲ್ಲಿ. ಅಲ್ಲಿ ಹಿಟ್ ಆದ ಬಳಿಕ ಇದೀಗ ಬಾಲಿವುಡ್‌ನತ್ತ ಮುಖ ಮಾಡಿರುವ ರಶ್ಮಿಕಾ ಮಂದಣ್ಣ, ಬಾಲಿವುಡ್‌ನಲ್ಲಿಯೇ ನೆಲೆ ನಿಲ್ಲುವ ಯೋಜನೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಖಾಸಗಿ ತರಬೇತುದಾರರನ್ನು ಇರಿಸಿಕೊಂಡು ಹಿಂದಿ ಕಲಿಯುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತೀಚೆಗೆ ಈ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಜನಪ್ರಿಯ ಹಿಂದಿ ಯೂಟ್ಯೂಬ್ ಚಾನೆಲ್ ‘ಮಾಷೆಬಲ್ ಇಂಡಿಯಾ’ಗೆ ಸಂದರ್ಶನ ನೀಡಿದ್ದು, ಇಲ್ಲಿ ನಟಿ ತನಗೆ ಸಿನಿ ರಂಗದಲ್ಲಿ ನೆಲವೂರಲು ಬ್ರೇಕ್ ನೀಡಿದ ಕನ್ನಡ ಸಿನಿಮಾ ‘ಕಿರಿಕ್ ಪಾರ್ಟಿ’ ಬಗ್ಗೆ ಮಾತನಾಡಿದ್ದಾರೆ.

“ಕಿರಿಕ್ ಪಾರ್ಟಿ ತಂಡದವರು ನನ್ನನ್ನು ಸಿನಿಮಾಕ್ಕೆ ಹಾಕಿಕೊಳ್ಳಲು ಹಿಂದೆ ಬಿದ್ದಿದ್ದರು, ನಾನೇ ಅವಾಯ್ಡ್ ಮಾಡುತ್ತಿದ್ದೆ” ಎಂಬರ್ಥದಲ್ಲಿ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ ರಶ್ಮಿಕಾ ಮಂದಣ್ಣ.

‘ಫ್ರೆಶ್ ಫೇಸ್’ ಕಾಂಟೆಸ್ಟ್ ನ್ನು ನಾನು ಆಗ ತಾನೇ ಗೆದ್ದಿದ್ದೆ. ಹಾಗಾಗಿ ನನ್ನ ಒಂದು ಫೋಟೋ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆ ಸಮಯದಲ್ಲಿ ‘ಕಿರಿಕ್ ಪಾರ್ಟಿ’ ತಂಡದವರು ನಾಯಕಿಗಾಗಿ ಹುಡುಕಾಟ ಮಾಡುತ್ತಿದ್ದರು. ಅವರಿಗೆ ಸಣ್ಣ ವಯಸ್ಸಿನ ಆದರೆ ಮೆಚ್ಯೂರ್ಡ್ ಮುಖದ ನಟಿ ಬೇಕಾಗಿತ್ತು. ನನ್ನ ಫೋಟೊ ನೋಡಿ ನನಗೆ ಕರೆ ಮಾಡಿದರು. ಆದರೆ ಅದೊಂದು ಫ್ರಾಂಕ್ ಕಾಲ್ ಎಂದುಕೊಂಡು ನನಗೆ ನಟಿಸುವುದು ಇಷ್ಟವಿಲ್ಲ ಎಂದು ಹೇಳಿ ಕಟ್ ಮಾಡಿ, ಕಾಲ್ ಮಾಡಿದವರ ನಂಬರ್ ನ್ನು ನಾನು ಬ್ಲಾಕ್ ಮಾಡಿಬಿಟ್ಟೆ” ಎಂದು ಹೇಳಿದ್ದಾರೆ.

ನಂತರ ಅವರು ನನ್ನ ಗೆಳೆಯರನ್ನು ಸಂಪರ್ಕಿಸಿ, ಆಕೆಯೊಂದಿಗೆ ಮಾತನಾಡಿಸಿ ಎಂದು ಕೇಳಿದರು. ಕೊನೆಗೆ ಅವರು ನನ್ನ ಟೀಚರ್ ಅನ್ನು ಸಹ ಭೇಟಿ ಮಾಡಿದರು. ನಾವು ರಶ್ಮಿಕಾ ಅನ್ನು ಹುಡುಕಿದ್ದೇವೆ, ಆಕೆ ನಿಮ್ಮದೇ ಕಾಲೇಜಿನ ಹುಡುಗಿ ಎಂಬುದು ಗೊತ್ತು ಆಕೆಗೆ ನಮ್ಮನ್ನು ಒಮ್ಮೆ ಭೇಟಿ ಮಾಡುವಂತೆ ಹೇಳಿ ಎಂದು ಕೇಳಿಕೊಂಡರು ಎಂದಿದ್ದರು. ಆಗ, ಟೀಚರ್ ನನ್ನನ್ನು ಕರೆಸಿ, ಯಾಕೆ ಹೀಗೆ ಅವರನ್ನು ಸತಾಯಿಸುತ್ತೀ? ಒಮ್ಮೆ ಭೇಟಿ ಮಾಡು ಅದರಲ್ಲಿ ಕಳೆದುಕೊಳ್ಳುವುದೇನು? ಎಂದರು. ನಾನೂ ಸಹ ನನ್ನ ಟೀಚರ್ ಮಾತಿನ ಮೇಲಿನ ಗೌರವಕ್ಕೆ ನಿರ್ದೇಶಕರನ್ನು ಹಾಗೂ ನಿರ್ಮಾಪಕರನ್ನು ಭೇಟಿಯಾದೆ” ಎಂದಿದ್ದಾರೆ ರಶ್ಮಿಕಾ.

ಈ ಸಂದರ್ಶನದಲ್ಲಿ ರಶ್ಮಿಕಾ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಹೆಸರನ್ನು ತಗೊಂಡಿಲ್ಲ. ನಿರ್ದೇಶಕ ಹಾಗೂ ನಿರ್ಮಾಪಕ ಎಂದು ಸಂಬೋಧಿಸಿದ್ದಾರೆ.

ಅನಂತರ ನಾನು ನಿರ್ದೇಶಕ ಹಾಗೂ ನಿರ್ಮಾಪಕರನ್ನು ಭೇಟಿಯಾದೆ. ಅವರು ಸಹಜವಾಗಿಯೇ ನನ್ನೊಟ್ಟಿಗೆ ಮಾತನಾಡಿದರು. ಆದರೆ ಅಲ್ಲಿ ಕ್ಯಾಮೆರಾ ಒಂದನ್ನು ಇಟ್ಟಿದ್ದರು. ಮಾತುಕತೆ ಆದ ಮೇಲೆ ಆ ವಿಡಿಯೋವನ್ನು ನೋಡಿ ಈಕೆ ಸರಿಯಾಗಿ ಸೂಟ್ ಆಗುತ್ತಾಳೆ ಎಂದು ಕೊಂಡಿದ್ದಾರೆ. ಬಳಿಕ ಸಿನಿಮಾದ ಡೈಲಾಗ್‌ಗಳನ್ನು ನೀಡಿ ಓದಲು ಹೇಳಿದರು. ಅಂತೆಯೇ ನಾನು ಸಹಜವಾಗಿ ಓದಿದೆ. ಇದೇ ನಮಗೆ ಬೇಕಾಗಿರುವುದು ಎಂದು ಹೇಳಿದರು. ಸರಿ ಎಂದು ನಾನೂ ಸಹ ಒಪ್ಪಿಕೊಂಡೆ. ಹಾಗೆಯೇ ಸಿನಿಮಾ ಶೂಟಿಂಗ್ ಮುಗಿಯಿತು. ಆದರೆ ಸಿನಿಮಾ ಬಿಡುಗಡೆ ಆದಾಗ ಸೂಪರ್ ಡೂಪರ್ ಹಿಟ್ ಆಯಿತು. ಜನ ನನ್ನನ್ನು ಗುರುತಿಸಿದರು. ಇನ್ನೂ ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎಂದು ಕೇಳಿದರು. ಅನಂತರ ನಾನೂ ನಟಿಸುತ್ತಾ ಹೋದೆ” ಎಂದಿದ್ದಾರೆ ರಶ್ಮಿಕಾ.