Home Entertainment ಸಹಜ ಸೌಂದರ್ಯ ಬಿಟ್ಟು ಪ್ಲಾಸ್ಟಿಕ್ ಸರ್ಜರಿ ಮಾಡಿದ ಮಹಿಳೆಯ ವ್ಯಥೆ| ನಗಲು,ಕಣ್ಣು ಮಿಟಿಕಿಸಲು ಸಾಧ್ಯವಾಗದ ಪರಿಸ್ಥಿತಿ...

ಸಹಜ ಸೌಂದರ್ಯ ಬಿಟ್ಟು ಪ್ಲಾಸ್ಟಿಕ್ ಸರ್ಜರಿ ಮಾಡಿದ ಮಹಿಳೆಯ ವ್ಯಥೆ| ನಗಲು,ಕಣ್ಣು ಮಿಟಿಕಿಸಲು ಸಾಧ್ಯವಾಗದ ಪರಿಸ್ಥಿತಿ ತಂದುಕೊಂಡ ಬ್ಯೂಟಿ ಕ್ವೀನ್

Hindu neighbor gifts plot of land

Hindu neighbour gifts land to Muslim journalist

ನಾವು ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೇ ಇರೋದಿಲ್ಲ‌ ಹೇಳಿ ?ಎಲ್ಲಾ ಹೆಣ್ಣುಮಕ್ಕಳಿಗೆ ಈ ಆಸೆ ಇದ್ದೇ ಇರುತ್ತದೆ. ಇದು ತುಂಬಾ ಸಾಮಾನ್ಯ. ನಟಿಯರಂತು ತಾವು ಸುಂದರವಾಗಿ ಕಾಣಿಸಿಕೊಳ್ಳಲು ಹಲವಾರು ಸರ್ಜರಿಗಳನ್ನು ಮಾಡುತ್ತಲೇ ಇರುತ್ತಾರೆ. ಈಗ ಜನಸಾಮಾನ್ಯರು ಕೂಡಾ‌ ಸರ್ಜರಿ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ.

ಮುಖಕ್ಕೆ, ಬಾಯಿಗೆ, ತುಟಿಗೆ, ಮೂಗಿಗೆ ಶೇಪ್ ಕೊಡುವುದು ನಾಜೂಕಿನ ಕೆಲಸ. ಹಾಗಾಗಿ ಬಹಳಷ್ಟು ಕೇಸ್ ಗಳಲ್ಲಿ ಇದು ಎಡವಟ್ಟಾಗುವ ಸಂದರ್ಭ ಕೂಡಾ ಇದೆ. ಇದೇ ರೀತಿ ಇಲ್ಲೊಬ್ಬಾಕೆ ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋಗಿ ಮುಗಳ್ನಗುವುದಕ್ಕೂ ಸಾಧ್ಯವಾಗದ ಪರಿಸ್ಥಿಗೆ ಹೋಗಿದ್ದಾಳೆ. ಎಷ್ಟೋ ಸುಂದರವಾಗಿದ್ದ ಈಕೆ ಈಗ ವಿಚಿತ್ರ ರೂಪಕ್ಕೆ ಬದಲಾಗಿದ್ದಾಳೆ‌.

ರಷ್ಯಾದ ಬ್ಯೂಟಿ ಕ್ವೀನ್ ಒಬ್ಬರು ಮೂರು ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಫೇಸ್ ಲಿಫ್ಟ್ ಮಾಡಿಸಿಕೊಂಡ ನಂತರ ವಿಚಿತ್ರ ಯಮಯಾತನೆಯನ್ನು ಅನುಭವಿಸುತ್ತಿದ್ದಾರೆ. ಕಣ್ಣು ಮುಚ್ಚಲು ಅಥವಾ ನಗಲು ಸಾಧ್ಯವಾಗದೇ ಇರುವಷ್ಟು ಯಾತನೆ ಅನುಭವಿಸುತ್ತಿದ್ದಾರೆ.

43 ವರ್ಷದ ಯೂಲಿಯಾ ತಾರಾಸೆವಿಚ್ ಎರಡು ವರ್ಷಗಳ ಹಿಂದೆ ಮಿಸೆಸ್ ರಷ್ಯಾ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ರನ್ನರ್ ಅಪ್ ಗೆದ್ದು ಅನಂತರ ಪ್ಲಾಸ್ಟಿಕ್ ಸರ್ಜರಿ ಮಾಡಲಿಕ್ಕೆ ಹೋಗಿದ್ದಾರೆ.

ಶಸ್ತ್ರಚಿಕಿತ್ಸೆಯಿಂದ ಉಂಟಾದ ನೋವಿನ ಹೊರತಾಗಿಯೂ ಆಕೆ ಅಪರೂಪದ ಅನುವಂಶಿಕ ರೋಗದ ಸ್ಥಿತಿಯನ್ನು ತಲುಪಿದ್ದಾರೆ. ಹಾಗಾಗಿ ಇದು ಶಸ್ತ್ರಚಿಕಿತ್ಸಕರ ತಪ್ಪು ಅಲ್ಲ ಎಂದು ಹೇಳಲಾಗಿದೆ.

ಫೇಸ್ ಲಿಫ್ಟ್ ಶಸ್ತ್ರಚಿಕಿತ್ಸೆ, ಕಣ್ಣು ರೆಪ್ಪೆಗಳ ಬ್ಲೆಫೆರೊಫ್ಲ್ಯಾಸ್ಟಿ ಮತ್ತು ಅವಳ ಕೆನ್ನೆಗಳಲ್ಲಿನ ಕೊಬ್ಬನ್ನು ಕಡಿಮೆ ಮಾಡುವ ಸಮಯದಲ್ಲಿ ಇವರ ಮುಖ ವಿಕಾರವಾಗಿದೆ. ಈಕೆ ಇಬ್ಬರು ಮಕ್ಕಳ ತಾಯಿ. ಶಸ್ತ್ರಚಿಕಿತ್ಸೆಯ ನಂತರ ಈಕೆಯ ಮುಖ ಕೆಟ್ಟದಾಗಿ ಊದಿಕೊಂಡು ಬಿಟ್ಟಿದೆ.