Home Entertainment BIGG BOSS : ತಪ್ಪು ಮಾಡಿದ್ದೀನಿ, ಆದರೆ ಬದುಕೋಕೆ ಅವಕಾಶ ಕೊಡಿ; ಸೋನು ಗೌಡ

BIGG BOSS : ತಪ್ಪು ಮಾಡಿದ್ದೀನಿ, ಆದರೆ ಬದುಕೋಕೆ ಅವಕಾಶ ಕೊಡಿ; ಸೋನು ಗೌಡ

Hindu neighbor gifts plot of land

Hindu neighbour gifts land to Muslim journalist

ಸೋನು ಶ್ರೀನಿವಾಸ್ ಗೌಡ ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದ ಸ್ಪರ್ಧಿ. ಈಗ ಬಿಗ್ ಬಾಸ್ ಕನ್ನಡ ಓಟಿಟಿ ಸ್ಪರ್ಧಿ. ಸೋನು ಗೌಡ, ಬಿಗ್ ಬಾಸ್ ಗೆ ಬರುವ ಮೊದಲು ಟ್ರೋಲ್‌ಗಳ ಮೂಲಕ ಖ್ಯಾತಿ ಪಡೆದರು. ಸೋಶಿಯಲ್ ಮೀಡಿಯಾದಲ್ಲಿ ಲಿಪ್ ಸಿಂಕ್ ವೀಡಿಯೋ ಮಾಡುತ್ತಿದ್ದ ಸೋನು, ಹೆಚ್ಚಾಗಿಯೇ ಟ್ರೋಲ್ ಗೊಳಗಾಗಿದ್ದಾರೆ ಎಂದೇ ಹೇಳಬಹುದು. ಬಹುಶಃ ಆ ನೆಗೆಟಿವ್ ಫೇಮ್ ಈಗ ಬಿಗ್ ಬಾಸ್ಚಮನೆವರೆಗೆ ಕರೆದುಕೊಂಡು ಬಂದಿದೆ.

ಈಗ ಹೊರಗಡೆ ಜನರು ಟ್ರೋಲ್ ಮಾಡಿರುವ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಜೊತೆ ಹಂಚಿಕೊಂಡಿದ್ದಾರೆ.

“ಮೊದಲೆಲ್ಲ ನಾನು ಏನು ಮಾತನಾಡಿದರೂ ಟ್ರೋಲ್ ಆಗುತ್ತಿರಲಿಲ್ಲ. ಆಮೇಲೆ ಟ್ರೋಲ್ ಆಗಲು ಶುರುವಾಯ್ತು. ನಾ ಏನೇ ಹೇಳಿದರೂ ಟ್ರೋಲ್ ಆಗುತ್ತೆ. ಟ್ರೋಲ್ ಮಾಡುವಾಗ, ಅಂತ ಟ್ರೋಲ್ಸ್ ಗಳಿಗೆ ಮೆಸೇಜ್ ಮಾಡಿಸಿದ್ದೆ. ಟ್ರೋಲ್ ಮಾಡುವವರಿಗೆ ನನ್ನಿಂದ ಲೈಕ್ಸ್, ಕಾಮೆಂಟ್ಸ್, ವ್ಯೂಸ್ ಬರತ್ತೆ, ಅದೇ ಖುಷಿ ನನಗೆ. ಹುಡುಗಿಯಾಗಿ ತಪ್ಪು ಮಾಡಿದ್ದೇನೆ. ಆದರೆ ಬದುಕೋಕೆ ಒಂದು ಅವಕಾಶ ಕೊಡಿ” ಎಂದಿದ್ದಾರೆ ಸೋನು ಗೌಡ.

“ನಿನಗೆ ಒಂದು ಹೇಟರ್ಸ್ ಗ್ರೂಪ್ ಇದೆ, ಅದರಿಂದ ಟ್ರೋಲ್ ಆಗುತ್ತೀಯಾ” ಅಂತ ರಾಕೇಶ್ ಅಡಿಗ ಅವರು ಹೇಳಿದ್ದಾರೆ. ಆಗ ಮಾತನಾಡಿದ ಸೋನು ಹೌದು ಎಂದಿದ್ದಾರೆ. ನಿನಗೆ ಟ್ರೋಲ್ ಮಾಡಿದಾಗ ಬೇಜಾರಾಗಲ್ವಾ? ಅಂತ ರಾಕೇಶ್ ಅವರು ಸೋನುಗೆ ಕೇಳಿದ್ದಾಗ, ಅವರು ತುಂಬ ಬೇಜಾರಾಗತ್ತೆ ಎಂದಿದ್ದಾರೆ.

ಕಿಚ್ಚ ಸುದೀಪ್ ಬಳಿ ಕೂಡ ಟ್ರೋಲ್ ಬಗ್ಗೆ ಮಾತನಾಡಿದ್ದಾರೆ. “ಹೀರೋಯಿನ್ ಆಗಬೇಕು ಅಂತ ಆಸೆ ಇಟ್ಟುಕೊಂಡಿದ್ದ ನಾನು, ಮೊದಲಿಗೆ ಟಿಕ್ ಟಾಕ್ ವೀಡಿಯೋಗಳನ್ನು ನೋಡುತ್ತಿದ್ದೆ. ಆಮೇಲೆ ನಾನೇ ವೀಡಿಯೋಗಳನ್ನು ಮಾಡುತ್ತಿದ್ದೆ. ಒಂದು ವಿಡಿಯೋ ತುಂಬ ವೈರಲ್ ಆಗಿ ಫೇಮಸ್ ಆದೆ. ನನಗೆ ಇಷ್ಟೆಲ್ಲ ಫಾಲೋವರ್ಸ್, ವ್ಯೂಸ್ ಅಂತ ನಂಬಲಾಗಲಿಲ್ಲ. ಅದರ ಜೊತೆಗೆ ಟ್ರೋಲ್ ಕೂಡ ಆದೆ. ನನ್ನ ಪ್ರೀತಿಸುವವರೂ ಇದ್ದಾರೆ, ಟ್ರೋಲ್ ಮಾಡುವವರೂ ಇದ್ದಾರೆ. ಎಷ್ಟೋ ಬಾರಿ ಬೇಜಾರಾಗಿ ಅತ್ತಿದ್ದೇನೆ. ಸೋಶಿಯಲ್ ಮೀಡಿಯಾ ಬಿಟ್ಟು, ಆಸ್ಟ್ರೇಲಿಯಾಗೆ ಹೋಗಿ, ಅಲ್ಲಿ ನೆಮ್ಮದಿಯಾಗಿ ರೋಡ್‌ನಲ್ಲಿ ತಿರುಗಾಡಬಹುದು ಅಂತ ಅನಿಸಿದೆ. ಒಮ್ಮೆ ನಮ್ಮನೆ ರೋಡ್ ಪಕ್ಕದಲ್ಲಿ ಗೋಲ್‌ಗಪ್ಪಾ ತಿನ್ನುತ್ತಿದ್ದೆ. ಸೋನು ರಿಚ್ ಆದರೂ ರಸ್ತೆಯಲ್ಲಿ ಗೋಲ್‌ಗಪ್ಪಾ ತಿನ್ನುತ್ತಾಳೆ ಅಂತ ಯಾರೋ ವಿಡಿಯೋ ಮಾಡಿ ಟ್ರೋಲ್ ಮಾಡಿದ್ದರು. ಹಾಗಾಗಿ ಇಲ್ಲಿ ರೋಡ್‌ನಲ್ಲಿ ನಡೆದುಕೊಂಡು ಹೋಗೋಕೆ ಭಯ” ಎಂದಿದ್ದರು
ಸೋನು ಗೌಡ