Home Entertainment BBK9 : ಬಿಗ್ ಬಾಸ್ ಮನೇಲಿ ನಡೆಯಿತು ಟ್ವಿಸ್ಟ್! ಎಲಿಮಿನೇಟ್ ಯಾರು ಆದ್ರೂ ಗೊತ್ತಾ?

BBK9 : ಬಿಗ್ ಬಾಸ್ ಮನೇಲಿ ನಡೆಯಿತು ಟ್ವಿಸ್ಟ್! ಎಲಿಮಿನೇಟ್ ಯಾರು ಆದ್ರೂ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಸೀಸನ್ 9 ರಲ್ಲಿ ವಾರ ವಾರ ಒಬ್ಬೊಬ್ಬರೇ ಎಲಿಮಿನೇಟ್ ಆಗ್ತಾ ಇದ್ದಾರೆ. ವೀಕ್ಷಕರಿಗೆ ಶಾಕ್ ನೀಡುವ ಹಾಗೆ ಹಿಂದಿನ ವಾರ ಸಾನಿಯಾ ಎಲಿಮಿನೇಟ್ ಆಗಿದ್ದಾರೆ. ಈ ಶಾಕ್ ಇಂದ ರೂಪೇಶ್ ಶೆಟ್ಟಿ ಇನ್ನು ಹೊರಗೆ ಬಂದಿಲ್ಲ.

ಇದೀಗ ಈ ವಾರದಲ್ಲಿ ಹಲವಾರು ಜಗಳ, ನಾಟಕ, ಆಟಗಳು ದೊಡ್ಡ ಮನೆಯಲ್ಲಿ ನಡೆದಿದೆ. ಇದಕ್ಕೆ ಅಂತ್ಯ ಹಾಡಲು ಕಿಚ್ಚ ಕೂಡ ಬಂದಾಯ್ತು.

ಈ ವಾರ ನಾಮಿನೇಟ್ ಆದವರಲ್ಲಿ ಮೊದಲು ಅಮೂಲ್ಯ ಅವ್ರು ಸೇಫ್ ಆಗಿದ್ದಾರೆ, ನಂತರ ಅನುಪಮಾ ಗೌಡ ಇವ್ರಾದ ಬಳಿಕ ದೀಪಿಕಾ ದಾಸ್. ಕೊನೆಗೆ ಉಳಿದವರು ರೂಪೇಶ್ ರಾಜಣ್ಣ ಮತ್ತು ಅರ್ಯವರ್ಧನ್ ಗುರೂಜಿ.

ಮನೆಮಂದಿಗೆ ಯಾರು ಸೇಫ್ ಆಗಬೇಕು ಅಂತ ಕೇಳಿದಾಗ ಶೇಕಡ 80 ರಷ್ಟು ಜನ ಗುರುಜಿ ಉಳಿಯಬೇಕು ಅಂತ ಹೇಳಿದ್ರು. ಕಿಚ್ಚ ಮನೆಯಲ್ಲಿ ಉಳಿಯುವ ವ್ಯಕ್ತಿಯ ಹೆಸರು ಹೇಳಿದರು. ಅವ್ರೇ ರೂಪೇಶ್ ರಾಜಣ್ಣ ಇದಾದ ಬಳಿಕ ಎಲ್ರಿಗೂ ಗೊತ್ತು ಆಯ್ತು ಗುರೂಜಿ ಮನೆಯಿಂದ ಹೊರಗೆ ಹೋಗೋದು ಅಂತ.

ಜೋರಾದ ಮಳೆ ಬರುವ ಸಮಯದಲ್ಲಿ ಪ್ರತಿಯೊಬ್ಬರೂ ಅಳುತ್ತಾ ಗುರೂಜಿಯನ್ನು ಕಳುಹಿಸಿ ಕೊಡ್ತಾರೆ. ಗುರೂಜಿ ಕೂಡ ಜೋರಾಗಿ ಅಳ್ತಾರೆ. ಬಾಗಿಲು ತೆರೆಯಲು ಕಾಯುತ್ತಾ ಇರುವಾಗ ಬಿಗ್ ಬಾಸ್ ನ ಆದೇಶ ಬರುತ್ತದೆ. ” ಇದು ಬಿಗ್ ಬಾಸ್ ಆರ್ಯವರ್ಧನ್ ಗುರುಜಿ ಮನೆಯೊಳಗೆ ವಾಪಾಸ್ ಹೋಗ್ಬೇಕು ” ಎಂದು ಆದೇಶ ಬರುತ್ತೆ.

ಆಗ ಮನೆಮಂದಿ ಎಲ್ಲರೂ ಜೋರಾಗಿ ಬೊಬ್ಬೆ ಹೊಡೆಯುತ್ತಾರೆ. ಸುದೀಪ್ ಮತ್ತೆ ಆಗಮಿಸಿ ವೋಟಿಂಗ್ ಓಪನ್ ಇರಲಿಲ್ಲ ಅಂತಾರೆ. ಮತ್ತು 50 ದಿನ ಬಿಗ್ ಬಾಸ್ 9 ಮುಗಿದಿರುವ ಕಾರಣದಿಂದ ಈ ಸಂಭ್ರಮ ಆಚರಿಸಿ, ವಿಡಿಯೋ ಮನೆ ಮಂದಿಗೆ ತೋರಿಸಿದರು. 50 ದಿನಗಳ ಸಂಭ್ರಮವನ್ನೂ ಎಲ್ರೂ ಆಚರಿಸಿದರು.