Home Education Delhi Crime News: ಸ್ನೇಹಿತೆ ಜೊತೆ ಮಾತಾಡಿದನೆಂದು ಜೂನಿಯರ್ ಬೆರಳು ಕತ್ತರಿಸಿದ ಸೀನಿಯರ್ಸ್ !!

Delhi Crime News: ಸ್ನೇಹಿತೆ ಜೊತೆ ಮಾತಾಡಿದನೆಂದು ಜೂನಿಯರ್ ಬೆರಳು ಕತ್ತರಿಸಿದ ಸೀನಿಯರ್ಸ್ !!

Hindu neighbor gifts plot of land

Hindu neighbour gifts land to Muslim journalist

Delhi Crime News: ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುವುದು, ಕೊಲೆ ಮಾಡುವ ಘಟನೆ (Delhi Crime News) ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಇದೀಗ ದೆಹಲಿಯ ದ್ವಾರಕಾದಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 12ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಜೊತೆ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಸೀನಿಯರ್ ವಿದ್ಯಾರ್ಥಿಯೊಬ್ಬ ಆತನ ಕೈಬೆರಳನ್ನು ಕತ್ತರಿಸಿದ್ದಾನೆ.

ಅಕ್ಟೋಬರ್ 21ರಂದು ನಡೆದಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ಈ ಘಟನೆಯಿಂದ ವಿದ್ಯಾರ್ಥಿಯು ತುಂಬಾ ಹೆದರಿ ತನ್ನ ಪೋಷಕರಿಗೆ ಈ ಬಗ್ಗೆ ಏನನ್ನೂ ಹೇಳಲಿಲ್ಲ. ಈ ಹಿಂದೆ ತನ್ನ ಬೆರಳನ್ನು ಮೋಟಾರ್ ಸೈಕಲ್ ಚೈನ್ ನಿಂದ ಕತ್ತರಿಸಿರುವುದಾಗಿ ಮಾತ್ರ ಹೇಳಿದ್ದನು. ಆದರೆ ಕಳೆದ ಶುಕ್ರವಾರ, ಅವನು ತನ್ನ ಪೋಷಕರಿಗೆ ನಡೆದ ಘಟನೆ ಸಂಪೂರ್ಣ ಸತ್ಯವನ್ನು ಹೇಳಿದ್ದಾರೆ. ನಂತರ ಪೋಷಕರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಗಳು ಶಾಲೆಯ ಹೊರಗೆ ಅವನನ್ನು ಹಿಡಿದು ಪಾರ್ಕ್ ಗೆ ಕರೆದೊಯ್ದರು ಎಂದು ಸಂತ್ರಸ್ತ ಹೇಳಿದ್ದಾನೆ. ಸಂತ್ರಸ್ತ ವಿದ್ಯಾರ್ಥಿನಿ ಮತ್ತು ಆತನ ಟ್ಯೂಷನ್ ವಿದ್ಯಾರ್ಥಿ ನಡುವಿನ ಸ್ನೇಹಕ್ಕೆ ಆಕ್ಷೇಪವಿದೆ ಎಂದು ಆರೋಪಿ ಹೇಳಿದ್ದಾನೆ. ಇದಾದ ಬಳಿಕ ವಿದ್ಯಾರ್ಥಿಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಬೆರಳನ್ನು ಕತ್ತರಿಸಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಇದನ್ನೂ ಓದಿ: ಇನ್ಮುಂದೆ ರಾಜ್ಯದ ಗೃಹಣಿಯರಿಗೆ ಉಚಿತವಾಗಿ ಸಿಗಲಿದೆ 50,000 !! ಸಿದ್ದರಾಮಯ್ಯ ಸರ್ಕಾರದಿಂದ ಹೊಸ ಘೋಷಣೆ !!