Shrama Shakti Yojana: ಇನ್ಮುಂದೆ ರಾಜ್ಯದ ಗೃಹಣಿಯರಿಗೆ ಉಚಿತವಾಗಿ ಸಿಗಲಿದೆ 50,000 !! ಸಿದ್ದರಾಮಯ್ಯ ಸರ್ಕಾರದಿಂದ ಹೊಸ ಘೋಷಣೆ !!

Karnataka news women get 50000 rupees free under Shrama Shakti Yojana latest news

Shrama Shakti Yojana: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಈಗಾಗಲೇ ಮಹಿಳೆಯರಿಗಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮೀ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮಹಿಳೆಯರಿಗೆ ಸರ್ಕಾರ ಇನ್ನೊಂದು ಸಿಹಿ ಸುದ್ದಿ ನೀಡಿದೆ. ಹೌದು, ರಾಜ್ಯ ಸರಕಾರ ಮಹಿಳೆಯರಿಗೆ ಉಚಿತವಾಗಿ 50 ಸಾವಿರ ರೂಪಾಯಿ ನೀಡಲು ಮುಂದಾಗಿದೆ.

ಮಹಿಳೆಯರ ಆರ್ಥಿಕ ಸಲಬಲೀಕರಣಕ್ಕಾಗಿ ರಾಜ್ಯ ಸರಕಾರ ಇದೀಗ ಮತ್ತೊಂದು ಯೋಜನೆಯನ್ನು ಜಾರಿಗೆ ತರುತ್ತಿದೆ. ಅದುವೇ ಶ್ರಮಶಕ್ತಿ ಯೋಜನೆ (Shrama Shakti Yojana) . ಇದರಲ್ಲಿ ಶೇ.50 ರಷ್ಟು ಹಣವನ್ನು ರಾಜ್ಯ ಸರಕಾರವೇ ಸಹಾಯಧನ ನೀಡಲಿದೆ. ಹೌದು, ಶ್ರಮಶಕ್ತಿ ಯೋಜನೆಯ ಮೂಲಕ 50 ಸಾವಿರ ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದರಲ್ಲಿ 25,000 ರೂಪಾಯಿಯನ್ನು ಮರು ಪಾವತಿ ಮಾಡಿದ್ರೆ, ಉಳಿದ 25,000 ರೂಪಾಯಿ ಸಹಾಯಧನವನ್ನು ಸರಕಾರವೇ ನೀಡುತ್ತದೆ. ಈ ಯೋಜನೆಯ ಮೂಲಕ ಸ್ವತಃ ಉದ್ಯೋಗವನ್ನು ಮಾಡಲು ಸಹಕಾರಿಯಾಗಲಿದೆ.

ಕರ್ನಾಕಟ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು ಶ್ರಮಶಕ್ತಿ ಯೋಜನೆಗೆ 2023-24ನೇ ಸಾಲಿನಲ್ಲಿ ಮುಸ್ಲೀಂ, ಕ್ರೈಸ್ತ, ಜೈನ್‌, ಬೌದ್ದ, ಸಿಖ್‌, ಆಂಗ್ಲೋ ಇಂಡಿಯನ್‌ ಮತ್ತು ಪಾರ್ಸಿ ಜನಾಂಗದ ಮಹಿಳೆಯರಿಗೆ ಮಾತ್ರವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದರಲ್ಲೂ ಮಹಿಳೆಯರು ಹಾಗೂ ವಿಚ್ಚೇಧಿತ ಮಹಿಳೆಯರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.

ರಾಜ್ಯ ಸರಕಾರ ಶ್ರಮಶಕ್ತಿ ಯೋಜನೆಯ ಲಾಭವನ್ನು ಪಡೆಯಲು, www.kmdcoonline.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ. ಮಹಿಳೆಯರು ಆಧಾರ್‌ ಕಾರ್ಡ್‌, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ ಸೇರಿದಂತೆ ಇತರ ದಾಖಲೆಗಳನ್ನು ನೀಡುವ ಮೂಲಕ ತಾವು ಶ್ರಮಶಕ್ತಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

ಇದನ್ನೂ ಓದಿ: ಗ್ರಾಹಕರ ಗಮನಕ್ಕೆ- ಇನ್ಮುಂದೆ ಸತತ 5 ದಿನ ಬ್ಯಾಂಕ್ ರಜೆ !! ಇಲ್ಲಿ ಮಾತ್ರ

Leave A Reply

Your email address will not be published.