Home Death ಉಡುಪಿ ನೀರು ಸೇದುವಾಗ ಅಮ್ಮನ ಕೈ ತಪ್ಪಿ ಬಾವಿಗೆ ಬಿದ್ದ ಮಗು, ಸಾವು

ಉಡುಪಿ ನೀರು ಸೇದುವಾಗ ಅಮ್ಮನ ಕೈ ತಪ್ಪಿ ಬಾವಿಗೆ ಬಿದ್ದ ಮಗು, ಸಾವು

Hindu neighbor gifts plot of land

Hindu neighbour gifts land to Muslim journalist

ಉಡುಪಿ: ಕಿನ್ನಿಮೂಲ್ಕಿ ಪ್ರದೇಶದಲ್ಲಿ ಮಹಿಳೆಯೊಬ್ಬರು ಬಾವಿಯಿಂದ ನೀರು ಸೇದುತ್ತಿದ್ದ ಸಂದರ್ಭದಲ್ಲಿ ಕೈಲಿದ್ದ ಮಗು ಆಯತಪ್ಪಿ ಜಾರಿ ಬಿದ್ದಿದ್ದು, ಕೂಡಲೇ ತಾಯಿ ಹಗ್ಗವನ್ನು ಹಿಡಿದು ಬಾವಿಗಿಳಿದು ಮಗುವಿನ ರಕ್ಷಣೆಗೆ ಮುಂದಾದರೂ ಮಗು ಅದಾಗಲೇ ಸಾವಿಗೀಡಾಗಿತ್ತು ಎಂದು ತಿಳಿದು ಬಂದಿದೆ.

ಕಿನ್ನಿಮೂಲ್ಕಿ ನಿವಾಸಿಗಳಾದ ನಯನಾ ಕರ್ಕಡ ಅವರ ಒಂದೂವರೆ ವರ್ಷದ ಪುತ್ರಿ ಕೀರ್ತನಾ ಮೃತಪಟ್ಟ ಮಗು.

ಮಂಗಳವಾರ ಮಧ್ಯಾಹ್ನದ ಸಮಯದಲ್ಲಿ ತಾಯಿ ನಯನಾ ಅವರು ತಮ್ಮ ಮನೆಯ ಸಮೀಪದ ಬಾವಿಯಿಂದ ನೀರನ್ನು ಸೇದುತ್ತಿದ್ದರು, ಈ ವೇಳೆ ಮಗು ಕೀರ್ತನಾ ಸಮೀಪದಲ್ಲಿಯೇ ಇದ್ದು, ನೀರು ಸೇದುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಮಗು ತಾಯಿಯ ಕೈಯಿಂದ ತಪ್ಪಿಸಿಕೊಂಡು ಆಳವಾದ ಬಾವಿಗೆ ಜಾರಿ ಬಿದ್ದಿದೆ.

ಮಗು ಬಾವಿಗೆ ಬಿದ್ದ ಕೂಡಲೇ ತಾಯಿ ಆಘಾತಕ್ಕೊಳಗಾಗಿದ್ದು, ಕೂಡಲೇ ತಡ ಮಾಡದೆ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಆದರೆ ಅಷ್ಟರಲ್ಲೇ ಮಗು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದೆ. ಸ್ಥಳೀಯರು ಅಕ್ಕಪಕ್ಕದವರು ಕೂಡಲೇ ನೆರವಿಗೆ ಧಾವಿಸಿದ್ದರೂ, ಮಗುವನ್ನು ಉಳಿಸಲು ಆಗಿಲ್ಲ. ಸ್ಥಳೀಯರು ಮಗುವಿನ ಮೃತದೇಹವನ್ನು ಬಾವಿಯಿಂದ ಹೊರಗೆ ತೆಗೆದಿದ್ದಾರೆ.

ಉಡುಪಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಇದನ್ನು ಪೂರ್ವಯೋಜಿತ ಕೃತ್ಯವಲ್ಲದ ಸಾವು ಎಂದು ದೃಢಪಡಿಸಿದ್ದು, ಮಗುವಿನ ಪೋಷಕರು, ಸ್ಥಳೀಯರಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ.