Home Crime Haveri Girl Kidnap: ಕಾಲೇಜಿಗೆ ಹೋಗಿದ್ದ ಹಿಂದು ಯುವತಿಯ ಕಿಡ್ನಾಪ್ ಕೇಸ್; ಮುಸ್ಲಿಂ ಯುವಕನೊಂದಿಗೆ ಗೋವಾದಲ್ಲಿ...

Haveri Girl Kidnap: ಕಾಲೇಜಿಗೆ ಹೋಗಿದ್ದ ಹಿಂದು ಯುವತಿಯ ಕಿಡ್ನಾಪ್ ಕೇಸ್; ಮುಸ್ಲಿಂ ಯುವಕನೊಂದಿಗೆ ಗೋವಾದಲ್ಲಿ ಯುವತಿ ಪತ್ತೆ!!

Haveri

Hindu neighbor gifts plot of land

Hindu neighbour gifts land to Muslim journalist

Haveri Girl Kidnap: ಹಾವೇರಿ ಜಿಲ್ಲೆಯ (Haveri News)ಹಾನಗಲ್‌ನಲ್ಲಿ ಹಿಂದೂ ಯುವತಿ(Hindu Girl)ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಮುಸ್ಲಿಂ ಯುವಕನೊಬ್ಬ(Muslim boy)ಕಿಡ್ನಾಪ್‌ (Kidnap)ಮಾಡಿದ್ದಾನೆ ಎಂಬ ಆರೋಪ ಇತ್ತೀಚಿಗೆ ಕೇಳಿ ಬಂದಿತ್ತು. ಸದ್ಯ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಮಾಹಿತಿ ಹೊರಬಿದ್ದಿದೆ.

 

ಕಾಲೇಜಿಗೆ ಹೋಗಿದ್ದ ಮಗಳು ಮನೆಗೆ ಬಾರದ ಹಿನ್ನೆಲೆ ಯುವತಿ ತಂದೆ ಹಾನಗಲ್ ಪಟ್ಟಣದ ನಿವಾಸಿ ಅಫ್ತಾಬ್ ಎಂಬ ಯುವಕ ಕಿಡ್ನಾಪ್ ಮಾಡಿದ್ದಾನೆಂದು ಆರೋಪಿಸಿ ಹಾನಗಲ್ ಪೋಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್‌ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಹಾನಗಲ್ ಜಿಲ್ಲಾ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಪೊಲೀಸರ ತೀವ್ರ ಕಾರ್ಯಾಚರಣೆಯಿಂದ ಮುಸ್ಲಿಂ ಯುವಕ ಅಪ್ತಾಬ್ ಮತ್ತು ಹಿಂದೂ ಯುವತಿ ರೇಣುಕಾ ಗೋವಾದ ಮಡಗಾಂವ್‌ನಲ್ಲಿ ಪತ್ತೆಯಾಗಿದ್ದಾರೆ.

 

ಹಾನಗಲ್ ಪಟ್ಟಣದಲ್ಲಿ ನಾಪತ್ತೆಯಾಗಿದ್ದ ಹಿಂದೂ ಯುವತಿ ರೇಣುಕಾ ಕಲಾಲ್‌ ಗೋವಾದಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರನ್ನು ಕಂಡ ಕೂಡಲೇ ಯುವತಿಯನ್ನು ಬಿಟ್ಟು ಓಡಲು ಯತ್ನಿಸಿದ ಅಫ್ತಾಬ್‌ನನ್ನು ಪೊಲೀಸರು ಬಂಧಿಸಿದ್ದಾರೆ.