Home Breaking Entertainment News Kannada ಕಿರುತೆರೆಯಿಂದ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪಟಾಕಿ ವಂಶಿಕಾ ; ವಸಿಷ್ಠ ಸಿಂಹ ಅಭಿನಯದ ಈ...

ಕಿರುತೆರೆಯಿಂದ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪಟಾಕಿ ವಂಶಿಕಾ ; ವಸಿಷ್ಠ ಸಿಂಹ ಅಭಿನಯದ ಈ ಚಿತ್ರಕ್ಕೆ ನಟಿಸಲಿದ್ದಾರೆ ಆನಂದ್ ಪುತ್ರಿ

Hindu neighbor gifts plot of land

Hindu neighbour gifts land to Muslim journalist

ಮಾಸ್ಟರ್ ಆನಂದ್ ಪರಿಚಯ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇದೆ. ಆದ್ರೆ, ಇದೀಗ ಆನಂದ್ ಕಿಂತಲೂ ವಂಶಿಕಾ ಅಂಜನಿ ಕಶ್ಯಪ ಫುಲ್ ಫೇಮಸ್. ಹೌದು. ತನ್ನ ಪಟಪಟ ಮಾತುಗಳಿಂದ ಮತ್ತು ನಟನೆಯಿಂದ ಕಿರುತೆರೆ ರಿಯಾಲಿಟಿ ಶೋ ಮೂಲಕ ಜನ ಮನ ಗೆದ್ದಿರುವ ವಂಶಿಕಾ ಈಗ ಬೆಳ್ಳಿತೆರೆಗೂ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾಳೆ.

ಹೌದು. ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪ್ ಇದೀಗ ವಸಿಷ್ಠ ಸಿಂಹ ಅಭಿನಯದ ‘ಲವ್ ಲೀ’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಈಗಾಗಲೇ ‘ನನ್ನಮ್ಮ ಸೂಪರ್ ಸ್ಟಾರ್’, ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಅದ್ಭುತವಾದ ನಟನೆ, ಡೈಲಾಗ್, ಡ್ಯಾನ್ಸ್ ಮೂಲಕ ಎಲ್ಲರ ಗಮನಸೆಳೆದಿರುವ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಅವರ ಮಗಳು ವಂಶಿಕಾ ಅಂಜನಿ ಕಶ್ಯಪ ( Vanshika Anjani Kashyapa ) ಅವರು ಈಗ ಸಿನಿಮಾ ರಂಗಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ.

ಪ್ರತಿಭಾನ್ವಿತ ನಾಯಕ ಕಂ ಗಾಯಕ ವಸಿಷ್ಠ ಸಿಂಹ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ love..ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರಕ್ಕೆ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪ ಎಂಟ್ರಿ ಕೊಟ್ಟಿದ್ದಾಳೆ. ವಂಶಿಕಾ ತನು ಎಂಬ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದು, ಬರುವ ಸೆಪ್ಟೆಂಬರ್ 6ರಿಂದ ವಂಶಿಕಾ ಭಾಗದ ಶೂಟಿಂಗ್ ಶುರುವಾಗಲಿದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಪಾತ್ರ ಸೃಷ್ಟಿಸಿದ್ದು ಖಂಡಿತ ನೋಡುಗರನ್ನು ವಂಶಿಕಾ ಮನರಂಜನೆ ನೀಡುತ್ತಾಳೆ ಎನ್ನುತ್ತಾರೆ ನಿರ್ದೇಶಕ ಚೇತನ್ ಕೇಶವ್ ಹೇಳಿದ್ದಾರೆ.

‘ನನ್ನಮ್ಮ ಸೂಪರ್ ಸ್ಟಾರ್’ ಶೋನಲ್ಲಿ ವಂಶಿಕಾ ಅವರ ಮೊದಲ ಪ್ರೋಮೋ ರಿಲೀಸ್ ಆಗುತ್ತಿದ್ದಂತೆ ಎಲ್ಲರೂ ಇಷ್ಟಪಟ್ಟರು. ವಂಶಿಕಾ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದಂತೂ ಸುಳ್ಳಲ್ಲ. ಅದಾದ ನಂತರ ಸಿನಿಮಾ, ವೆಬ್ ಸಿರೀಸ್‌ನಲ್ಲಿ ನಟಿಸುವ ಆಫರ್ ಹುಡುಕಿಕೊಂಡು ಬಂದಿದೆ ಎಂದು ಸ್ವತಃ ಮಾಸ್ಟರ್ ಆನಂದ್ ಹೇಳಿಕೊಂಡಿದ್ದರು.

ಈ ಕುರಿತು ಮಾತನಾಡಿದ ಚಿತ್ರದ ನಿರ್ದೇಶಕ ಚೇತನ್ ಕೇಶವ್, ‘ನಮ್ಮ ಚಿತ್ರದಲ್ಲಿ ನಾಲ್ಕೈದು ವರ್ಷದ ಬಾಲಕಿಯ ಪಾತ್ರವಿದೆ. ಬಹಳ ಚುರುಕಾದ ಪಾತ್ರ ಅದು. ಆ ಪಾತ್ರಕ್ಕೆ ವಂಶಿಕಾ ಸೂಕ್ತ ಎಂದನಿಸಿತು. ಆಕೆ ಸಹ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾಳೆ. ಸೆ. 06ರಿಂದ ಆಕೆಯ ಭಾಗದ ಚಿತ್ರೀಕರಣ ಶುರುವಾಗಲಿದೆ’ ಎನ್ನುತ್ತಾರೆ.

ಕೆಲವು ತಿಂಗಳುಗಳ ಹಿಂದೆ ಪ್ರಾರಂಭವಾದ ‘ಲವ್ ಲೀ’ ಚಿತ್ರದ ಚಿತ್ರೀಕರಣ ಈಗ ಅರ್ಧದಷ್ಟು ಮುಗಿದಿದೆ. ಬೆಂಗಳೂರಲ್ಲದೆ, ಮಂಗಳೂರಿನಲ್ಲೂ ಬಾಕಿ ಭಾಗದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ವಸಿಷ್ಠಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ಇದ್ದಾರೆ. ಈ ಚಿತ್ರವನ್ನು ರವೀಂದ್ರ ಕುಮಾರ್ ನಿರ್ವಿುಸುತ್ತಿದ್ದು, ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದೆ.

ವಸಿಷ್ಠ ಹೀರೋ ಆಗಿ ನಟಿಸ್ತಿರುವ ‘Love…ಲಿ’ ಸಿನಿಮಾದಲ್ಲಿ ಬೈಕ್ ಮೇಲೆ ಕುಳಿತು.. ಧಮ್ ಹೊಡೆಯುತ್ತಾ, ಸಖತ್ ಸ್ಟೈಲೀಶ್ ಲುಕ್‌ನಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡಿರುವ ಪೋಸ್ಟರ್ ರಿಲೀಸ್ ಆಗಿತ್ತು. ಇದು ಕಮರ್ಷಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ರೊಮ್ಯಾನ್ಸ್-ಲವ್ ಸ್ಟೋರಿ ಜೊತೆಗೆ ರೌಡಿಸಂ ವಿಭಿನ್ನ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ‘Love…ಲಿ’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಮಫ್ತಿ ನಿರ್ದೇಶಕ ನರ್ತನ್‌ ಜೊತೆಗೆ ಕೆಲಸ ಮಾಡಿರುವ ಅನುಭವ ಇರುವ ಚೇತನ್‌ ಕೇಶವ್‌ ಈಗ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದಾರೆ. ರೌಡಿಸಂ ಕಥೆ ಜೊತೆಗೆ ಆ್ಯಕ್ಷನ್‌ ರೋಮ್ಯಾಂಟಿಕ್‌ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರವೀಂದ್ರ ಕುಮಾರ್‌ ನಿರ್ಮಿಸುತ್ತಿದ್ದು, ಹರೀಶ್‌ ಕೊಮ್ಮೆ ಸಂಕಲನ, ಅಶ್ವಿನ್ ಕೆನಡಿ ಕ್ಯಾಮೆರಾ ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ.