Home Breaking Entertainment News Kannada ವಾಸುಕಿ ವೈಭವ್ ಮತ್ತು ಗುಂಪಿನ ನಡುವೆ ಅವಾಚ್ಯ ಶಬ್ದಗಳಿಂದ ನಿಂದನೆ | ಅಷ್ಟಕ್ಕೂ ನಡೆದಿದ್ದಾದರೂ ಏನು?

ವಾಸುಕಿ ವೈಭವ್ ಮತ್ತು ಗುಂಪಿನ ನಡುವೆ ಅವಾಚ್ಯ ಶಬ್ದಗಳಿಂದ ನಿಂದನೆ | ಅಷ್ಟಕ್ಕೂ ನಡೆದಿದ್ದಾದರೂ ಏನು?

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ಎಲ್ಲರ ಮನದಲ್ಲೂ ಅಚ್ಚಳಿಯದೆ ಉಳಿದಿರುವ ಕಾಂತಾರ ಸಿನಿಮಾ ನಿರೀಕ್ಷೆಯ ಮಹಲನ್ನು ದಾಟಿ ಉತ್ತುಂಗಕ್ಕೇರಿ , ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರಾವಳಿಯ ಅದ್ಭುತ ಕಲಾವಿದ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅಭಿನಯಿಸಿರುವ ಕಾಂತಾರಾ ಸಿನಿಮಾ ನೋಡಲು ಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳ ದಂಡೇ ಸಾಗರೋಪಾದಿಯಲ್ಲಿ ಥಿಯೇಟರ್ ಮುಂದೆ ಕಿಕ್ಕಿರಿದು ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ.

ಈ ನಡುವೆ ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿರುವ ಗಾಯಕ ವಾಸುಕಿ ವೈಭವ್ ತಮ್ಮ ಸ್ನೇಹಿತರ ಜೊತೆ ಕಾಂತಾರ ಸಿನೆಮಾ ನೋಡಲು ಹೋಗಿದ್ದಾಗ ,ಕಿರಿಕ್ ಪಾರ್ಟಿಯೊಂದಿಗೆ ಗಲಾಟೆ ನಡೆದಿದೆ.

ಸ್ಯಾಂಡಲ್‌ವುಡ್ ನಲ್ಲಿ ಸಂಗೀತದ ಮೂಲಕ ಜನಪ್ರಿಯ ರಾಗಿರುವ ಗಾಯಕ ಬಿಗ್ ಬಾಸ್ ನ ವಾಸುಕಿ ವೈಭವ್ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸ್ನೇಹತ ದರ್ಶನ್ ಮತ್ತು ಗೆಳತಿ ಜೊತೆ ಸಿನಿಮಾ ನೋಡಲು ಹೋಗಿದ್ದಾರೆ.

ಈ ಸಂದರ್ಭದಲ್ಲಿ ಥಿಯೇಟರ್ ನಲ್ಲಿ ಸೀಟು ವಿಷಯದಲ್ಲಿ ತಗಾದೆ ಎದ್ದು, ಕಿರಿಕ್ ಪಾರ್ಟಿಯೊಂದು ವಾಸುಕಿ ಮತ್ತು ಸ್ನೇಹಿತರ ಜೊತೆ ಗಲಾಟೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ.

ಮೊದಲೇ ಆಸೀನರಾಗಿದ್ದ ವಾಸುಕಿ ಟೀಮ್ ನ ಸೀಟಿನ ಪಕ್ಕದಿಂದ ಒಂದು ಗ್ಯಾಂಗ್ ಹೋಗುವ ಸಂದರ್ಭದಲ್ಲಿ ಕಿರಿಕ್ ಮಾಡಿ, ನಿಧಾನವಾಗಿ ಹೋಗುತ್ತಿದ್ದರು. ಇದರಿಂದ ಬೇಗ ಹೋಗುವಂತೆ ವಾಸುಕಿ ಸ್ನೇಹಿತರು ತಿಳಿಸಿದಾಗ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ಈ ಸಮಯದಲ್ಲಿ ವಾಸುಕಿಯ ಫ್ರೆಂಡ್ಸ್ ಕೂಡ ಪ್ರತ್ಯುತ್ತರ ನೀಡಿ ಬೈದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಪುಂಡರ ಪಡೆ, ಇಂಟರ್ವಲ್ ಸಮಯಕ್ಕೆ ಕಾದು ಕುಳಿತು ಮತ್ತೆ ಕಿರಿಕ್ ಮಾಡಿ, ಏನ್ ಗುರಾಯಿಸುತ್ತಿದ್ದೀರಾ ಎಂದು ಆವಾಜ್ ಹಾಕಿದ್ದಾರೆ.

ಈ ನಡುವೆ ಎರಡೂ ಗುಂಪಿನ ನಡುವೆ ಮಾತುಕತೆ ತಾರಕ್ಕೆರುತ್ತ ಇದ್ದಂತೆ ವಾಸುಕಿ ಕಂಟ್ರೋಲ್ ರೂಂ ಗೆ ಕರೆ ಮಾಡಿ ದೂರು ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನ ಪಟ್ಟಿದ್ದಾರೆ. ಕೆಲ ಸಮಯದಲ್ಲೇ ಖಾಕಿ ಪಡೆ ಊರ್ವಶಿ ಚಿತ್ರಮಂದಿರಕ್ಕೆ ಹಾಜರಾಗಿ ಕಿರಿಕ್ ಮಾಡುತ್ತಿದ್ದ ಗ್ಯಾಂಗ್ ಅನ್ನು ಬಂದಿಸಲು ಹೊರಟಾಗ ತಮ್ಮ ಸ್ನೇಹಿತರಿಗೆ ಕ್ಷಮೆ ಕೇಳಿದರೆ ಸಾಕು, ಕೇಸು ದಾಖಲಿಸುವುದು ಬೇಡ ವೆಂದು ವಾಸುಕಿಯ ಮನವಿಗೆ ಒಪ್ಪಿ ಪೊಲೀಸರು ಗಲಾಟೆ ಮಾಡುತ್ತಿದ್ದ ಗುಂಪಿನವರಿಂದ ಕ್ಷಮಾ ಪತ್ರ ಬರೆಸಿಕೊಂಡಿದ್ದಾರೆ.

ಆದರೂ ಸುಖಾಂತ್ಯ ಕಾಣದ ವಿಷಯ ವಾಸುಕಿ ಸ್ನೇಹಿತ ದರ್ಶನ್ ಪೋಲಿಸ್ ಕಂಪ್ಲೈಂಟ್ ಕೊಟ್ಟ ಕಾರಣ ದೂರು ದಾಖಲಾಗಿ ಕೆಲ ಗಂಟೆಗಳ ಕಾಲ ಕಿರಿಕ್ ಗ್ಯಾಂಗ್ ಪೋಲಿಸ್ ಸ್ಟೇಷನ್ ಅಲ್ಲಿ ಇರುವಂತಾಗಿ, ಕೊನೆಗೆ ವಾಸುಕಿ ಫ್ರೆಂಡ್ಸ್ ಮತ್ತು ಕಿರಿಕ್ ಪಾರ್ಟಿಯ ನಡುವೆ ರಾಜಿ ಸಂಧಾನವಾಗಿ ಮತ್ತೊಮ್ಮೆ ಕ್ಷ್ಮಮಾ ಪತ್ರ ಬರೆಸಿಕೊಂಡ ನಂತರ ಕಿರಿಕ್ ಗ್ಯಾಂಗ್ ಅನ್ನು ಪೋಲೀಸರು ಸ್ಟೇಷನ್ ನಿಂದ ಬಿಟ್ಟಿದ್ದಾರೆ.