Home Breaking Entertainment News Kannada Cinema ticket price : ಈ ದೇಶದಲ್ಲಿ ಸಿನಿಮಾ ಟಿಕೆಟ್ ಬೆಲೆ ತುಂಬಾ ದುಬಾರಿಯಂತೆ !!...

Cinema ticket price : ಈ ದೇಶದಲ್ಲಿ ಸಿನಿಮಾ ಟಿಕೆಟ್ ಬೆಲೆ ತುಂಬಾ ದುಬಾರಿಯಂತೆ !! ಹಾಗಿದ್ರೆ ಕನಿಷ್ಠ ಬೆಲೆ ಎಲ್ಲಿದೆ ಗೊತ್ತಾ ?

Cinema ticket price

Hindu neighbor gifts plot of land

Hindu neighbour gifts land to Muslim journalist

Cinema Ticket Price : ವಿಶ್ವದಲ್ಲಿ ಅತೀ ಹೆಚ್ಚು ಭಾಷೆಯಲ್ಲಿ ಸಿನಿಮಾ ತಯಾರಾಗುವ ದೇಶ ಭಾರತ ಎಂದು ಹೆಗ್ಗಳಿಕೆ ಪಾತ್ರವಾಗಿದೆ. ಅದರಲ್ಲೂ ಭಾರತೀಯರು ಪ್ರಪಂಚದಲ್ಲಿ ಅತಿ ಹೆಚ್ಚು ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ.

ಇತ್ತೀಚೆಗೆ ಭಾರತದಲ್ಲಿ ಸಿನಿಮಾ ಟಿಕೆಟ್ ದರಗಳು (Cinema ticket price) ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಹಲವು ದೇಶಗಳಲ್ಲಿ ಸಿನಿಮಾ ಟಿಕೆಟ್ ಗೆ ಭಾರತಕ್ಕಿಂತ ಹೆಚ್ಚಿನ ಬೆಲೆ ನೀಡಬೇಕಂತೆ. ಹಾಗಿದ್ರೆ ಯಾವೆಲ್ಲಾ ದೇಶಗಳಲ್ಲಿ ಮೂವಿ ಟಿಕೆಟ್​ ದರ ಹೇಗಿದೆ? ಭಾರತ ಎಷ್ಟನೇ ಸ್ಥಾನದಲ್ಲಿದೆ ಅನ್ನೋದನ್ನು ತಿಳಿಯೋಣ ಬನ್ನಿ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಹಣದುಬ್ಬರ ಸಮಸ್ಯೆ ಇದೆ. ಹೀಗಿರುವಾಗ ವಸ್ತುಗಳ ಬೆಲೆ, ಸೇವೆಗಳ ದರ ಸಾಕಷ್ಟು ಪಟ್ಟು ಹೆಚ್ಚಾಗಿರುವುದನ್ನು ಕಾಣಬಹುದು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜೀವನ ವೆಚ್ಚ ಸಾಕಷ್ಟು ಮಟ್ಟಿಗೆ ಹೆಚ್ಚಾಗುತ್ತಿದೆ. ಇದರಿಂದ ದಿನನಿತ್ಯ ಬಳಕೆಯ ವಸ್ತುಗಳು, ಮನರಂಜನೆ, ಆರೋಗ್ಯ ಕ್ಷೇತ್ರ ಹೀಗೆ ಎಲ್ಲವೂ ಹೆಚ್ಚಾಗಿದೆ.

ಸದ್ಯ ಮಾಹಿತಿ ಪ್ರಕಾರ, ಭೂಮಿಯ ಸ್ವರ್ಗ ಎಂದೇ ಕರೆಯಲ್ಪಡುವ ಸ್ವಿಟ್ಜರ್ಲೆಂಡ್ ವಿಶ್ವದ ಅತಿ ಹೆಚ್ಚು ಚಲನಚಿತ್ರ ಟಿಕೆಟ್ ದರಗಳನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ಟಿಕೆಟ್ ನ ಸರಾಸರಿ ಬೆಲೆ 1882.59 ರೂಪಾಯಿ. ಪ್ರತಿಯೊಬ್ಬರು ಇಲ್ಲಿ ಒಂದು ಸಿನಿಮಾ ನೋಡ್ಬೇಕಾದ್ರೆ 1900 ರೂಪಾಯಿ ಹಣವನ್ನು ನೀಡಬೇಕಾಗುತ್ತದೆ.

ಇನ್ನು ಸ್ವಿಟ್ಜರ್ಲೆಂಡ್ ಬಳಿಕ ಡೆನ್ಮಾರ್ಕ್ ಎರಡನೇ ಸ್ಥಾನದಲ್ಲಿದ್ದು, ಇಲ್ಲಿ ಒಂದು ಸಿನಿಮಾ ಟಿಕೆಟ್‌ ಬೆಲೆ 1451 ರೂಪಾಯಿ. ಇನ್ನು ಮೂರನೇ ಸ್ಥಾನದಲ್ಲಿ ಸೌದಿ ಅರೇಬಿಯಾ ಸ್ಥಾನ ಪಡೆದಿದ್ದು, 1431 ರೂಪಾಯಿ ಕೊಟ್ಟು ಇಲ್ಲಿ ಒಂದು ಸಿನಿಮಾ ಟಿಕೆಟ್ ಖರೀದಿ ಮಾಡಬಹುದಾಗಿದೆ.

ಇನ್ನು ದುಬಾರಿ ಸಿನಿಮಾ ಟಿಕೆಟ್‌ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 39ನೇ ಸ್ಥಾನದಲ್ಲಿದೆ. ಭಾರತದಲ್ಲಿ ಸರಾಸರಿ ಸಿನಿಮಾ ಟಿಕೆಟ್ ಬೆಲೆ 300 ರೂಪಾಯಿನಷ್ಟಿದೆ. ಆದ್ರೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವ ಸ್ವಿಟ್ಜರ್ಲೆಂಡ್‌ನ ಟಿಕೆಟ್ ದರವು ಭಾರತದ ಸಿನಿಮಾ ಟಿಕೆಟ್‌ ಬೆಲೆಗಿಂತ ಸುಮಾರು 6 ಪಟ್ಟು ಹೆಚ್ಚಾಗಿದೆ.

ಇನ್ನು ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಸಿನಿಮಾ ಟಿಕೆಟ್ ಬೆಲೆ ಈ ಕೆಳಗೆ ಕಾಣಬಹುದು:
ಸ್ವಿಟ್ಜರ್ಲೆಂಡ್ : $22.70
ಡೆನ್ಮಾರ್ಕ್: $17.50
ಸೌದಿ ಅರೇಬಿಯಾ: $17.33
ಫಿನ್‌ಲ್ಯಾಂಡ್: $16.30
ನಾರ್ವೆ: $14.17
ಐಸ್‌ಲ್ಯಾಂಡ್‌: $14.15
ಸ್ವೀಡನ್: $13.78
ಜರ್ಮನಿ: $13.04
ಆಸ್ಟ್ರಿಯಾ: $13.04
ಲಕ್ಸೆಂಬರ್ಗ್: $13.04
ನೆದರ್ಲ್ಯಾಂಡ್ಸ್: $13.04
ಐರ್ಲೆಂಡ್: $13.04
ಆಸ್ಟ್ರೇಲಿಯಾ: $12.94
ಯುಕೆ: $12.63
ಯುಎಸ್‌ಎ: $12.50
ಜಪಾನ್: $12.32
ಯುಎಇ: $12.25
ಫ್ರಾನ್ಸ್: $11.96
ಸಿಂಗಾಪುರ: $11.09
ಕೆನಡಾ: $11.06
ದಕ್ಷಿಣ ಕೊರಿಯಾ: $9.83
ಇಟಲಿ: $9.78
ಜೆಕಿಯಾ: $9.02
ಸ್ಪೇನ್: $8.70
ಪೋರ್ಚುಗಲ್: $7.61
ಬ್ರೆಜಿಲ್: $7.05
ಚೀನಾ: $6.86
ಚಿಲಿ: $5.82
ಕೀನ್ಯಾ: $5.51
ದಕ್ಷಿಣ ಆಫ್ರಿಕಾ: $5.40
ವೆನೆಜುವೆಲಾ: $5.00
ಮೆಕ್ಸಿಕೋ: $4.76
ಅರ್ಜೆಂಟೀನಾ: $4.39
ರಷ್ಯಾ: $4.19
ವಿಯೆಟ್ನಾಂ: $4.14
ಉಕ್ರೇನ್: $4.06
ಕೊಲಂಬಿಯಾ: $3.90
ಟರ್ಕಿ: $3.40
ಭಾರತ: $3.63
ಈಜಿಪ್ಟ್: $3.39
ಪಾಕಿಸ್ತಾನ: $3.31
ಇಂಡೋನೇಷ್ಯಾ: $3.28
ಇರಾನ್: $1.50

ಇದನ್ನೂ ಓದಿ: ಇನ್ಮುಂದೆ ಈ ಕಂಪನಿಯಲ್ಲಿ ವಾರಕ್ಕೆ ನಾಲ್ಕೇ ದಿನ ಕೆಲಸ, ಇನ್ನುಳಿದ ದಿನ ಏನಂತೆ ಗೊತ್ತಾ?