Home Breaking Entertainment News Kannada Kantara -2: ಕಾಂತಾರಾ-2ಗೆ ರಶ್ಮಿಕಾ ಮಂದಣ್ಣ ಹಿರೋಯಿನ್ ?!

Kantara -2: ಕಾಂತಾರಾ-2ಗೆ ರಶ್ಮಿಕಾ ಮಂದಣ್ಣ ಹಿರೋಯಿನ್ ?!

Kantara -2

Hindu neighbor gifts plot of land

Hindu neighbour gifts land to Muslim journalist

Kantara -2: ಕನ್ನಡ ಚಿತ್ರರಂಗವನ್ನು ಜಗತ್ಪ್ರಸಿದ್ಧಗೊಳಿಸಿದ ಕೆಲವೇ ಕೆಲವು ಸಿನಿಮಾಗಳಲ್ಲಿ ಕಾಂತಾರ ಕೂಡ ಒಂದು. ಅದು ನಿರೀಕ್ಷೆಗೂ ಮೀರಿ ಹಿಟ್ ಕಂಡಿತ್ತು. ರಿಷಬ್ ಶೆಟ್ಟರ ನಟನೆ, ನಿರ್ದೇಶನಕ್ಕೆ ಇಡೀ ಭಾರತವೇ ಫಿದಾ ಆಗಿತ್ತು. ಇದೀಗ ಮಾತು ಕೊಟ್ಟಂತೆ ರಿಶಬ್ ಶೆಟ್ಟಿ(Rishab shetty) ಅವರು ಕಾಂತರಾ-2ಗೆ(Kantara-2) ಚಿತ್ರೀಕರಣವನ್ನು ಆರಂಭಿಸಿದ್ದಾರೆ ಈ ನಡುವೆ ಕಾಂತಾರಾ-2ಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೀರೋಯಿನ್ ಎಂಬ ಸುದ್ದಿ ಹೊರಬಿದ್ದಿದೆ.

ಹೌದು, ಕಾಂತಾರ-2 ಗೆ ಈಗಾಗಲೇ ಆಡಿಷನ್ ಶುರುವಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಇದರದ್ದೇ ಸದ್ದು. ದೊಡ್ಡ ದೊಡ್ಡ ನಟಿಯರೂ ಕೂಡ ನಮಗೂ ಒಂದು ಚಾನ್ಸ್ ಕೊಡಿ ಎಂದು ರಿಷಬ್ ಶೆಟ್ಟರಿಗೆ ದುಂಬಾಲು ಬಿದ್ದಿದ್ದಾರೆ. ಆಶ್ಚರ್ಯ ಅಂದ್ರೆ ಈಗಾಗಲೇ ಆಡಿಷನ್ ಗೆ ಬರೋಬ್ಬರಿ 25,000 ಅಪ್ಲಿಕೇಶನ್ ಬಂದಿದೆಯಂತೆ! ಈ ನಡುವೆ ಸೋಷಿಯಲ್ ಮೀಡಿಯಾಗಳಲ್ಲಿ ರಶ್ಮಿಕಾ ಕಾಂತಾರ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ, ನಟಿಸಬಹುದು, ಎಂದೆಲ್ಲಾ ಪ್ರತಿಕ್ರಿಯೆಗಳನ್ನು ನೆಟ್ಟಿಗರು ನೀಡುತ್ತಿದ್ದಾರೆ.

ಇದನ್ನು ಓದಿ: PM Candidate: ‘ಇಂಡಿಯಾ’ ಮೈತ್ರಿ ಕೂಟದಿಂದ ಪ್ರಧಾನಿ ಅಭ್ಯರ್ಥಿ ಘೋಷಣೆ – ಭಾರೀ ಕುತೂಹಲ ಕೆರಳಿಸಿದೆ ಹೆಸರು !!

ಇದಕ್ಕೆ ಒಂದು ಕಾರಣವೂ ಇದೆ. ಏನೆಂದರೆ ಪೊಗರು ಚಿತ್ರದ ಬಳಿಕ ರಶ್ಮಿಕಾ ಕನ್ನಡ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಇದೀಗ ಅವರ ಅನಿಮಲ್ ಚಿತ್ರ ಸೂಪರ್ ಹಿಟ್ ಆಗುತ್ತಿದೆ. ಈ ನಡುವೆ ಅವರು ಪ್ರೆಸ್ ಮೀಟ್ ಒಂದರಲ್ಲಿ ಭಾಗವಹಿಸಿದಾಗ ಕನ್ನಡ ಚಿತ್ರರಂಗಕ್ಕೆ ಮತ್ತೆ ಯಾವಾಗ ಎಂಟ್ರಿ ಎಂದು ಪ್ರಶ್ನೆಯೊಂದು ಎದುರಾಗಿದೆ. ಆಗ ರಶ್ಮಿಕಾ ‘ಒಂದು ಸಿನಿಮಾದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರ ಅಪ್ಡೇಟ್ ಆದಷ್ಟು ಬೇಗ ನಿಮಗೆ ಕೊಡುತ್ತೇನೆ’ ಎಂದು ಹೇಳಿದ್ದಾರೆ. ಜೊತೆಗೆ ಕಾಂತಾರಾ-2 ಝಲಕ್ ಒಂದು ರಿಲೀಸ್ ಆಗಿದ್ದು ಅದರಲ್ಲಿ ರಿಶಬ್ ಮಾತ್ರ ಕಾಣಿಸಿದ್ದಾರೆ. ಬೇರಾರೂ ಇಲ್ಲ. ಎಲ್ಲಾ ಸೀಕ್ರೇಟ್ ತರ ಇದೆ. ಇದೇ ಕಾರಣಕ್ಕೆ ನೆಟ್ಟಿಗರು ರಶ್ಮಿಕಾ ಹೇಳಿದ್ದು ಕಾಂತಾರ ಚಿತ್ರವೇ ಇರಬೇಕೆಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ಬಗ್ಗೆ ಇನ್ನೂ ಸ್ಪಷ್ಟೀಕರಣ ಸಿಗಬೇಕು.