Home Breaking Entertainment News Kannada BBK-10: ಬಿಗ್ ಬಾಸ್ ಮನೆಯಲ್ಲಿ ನಡೆದೇ ಹೋಯ್ತು ಮಿಡ್ ನೈಟ್ ಎಲಿಮಿನೇಷನ್ !! ಇವರೇ ನೋಡಿ...

BBK-10: ಬಿಗ್ ಬಾಸ್ ಮನೆಯಲ್ಲಿ ನಡೆದೇ ಹೋಯ್ತು ಮಿಡ್ ನೈಟ್ ಎಲಿಮಿನೇಷನ್ !! ಇವರೇ ನೋಡಿ ಮನೆಯಿಂದ ಹೊರ ಹೋದದ್ದು

BBK-10

Hindu neighbor gifts plot of land

Hindu neighbour gifts land to Muslim journalist

BBK-10: ಕನ್ನಡದ ಖ್ಯಾತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸಿನ 10ನೇ(BBK-10) ಸೀಸನ್ ಇದೀಗ ಮುಕ್ತಾಯದ ಹಂತದಲ್ಲಿದೆ. ಮನೆಯಲ್ಲಿ ಕಳೆದ ವಾರ ಯಾವುದೇ ಎಲಿಮಿನೇಷನ್ ಆಗಿರಲಿಲ್ಲ. ವಾರದ ಕಥೆ ಕಿಚ್ಚನ ಜೊತೆಯಲ್ಲಿ ಇದರ ಪ್ರಸ್ತಾಪವೇ ಬರಲಿಲ್ಲ. ಆದರೆ ಇದೀಗ ಅಚ್ಚರಿ ಎಂಬಂತೆ ವಾರದ ಮಧ್ಯದಲ್ಲಿ ಮಿಡ್ ನೈಟ್ ಎಲಿಮಿನೇಷನ್ ಆಗಿದ್ದು ಅಚ್ಚರಿ ಸ್ಟ್ರಾಂಗ್ ಕಂಟೆಸ್ಟೆಂಟ್ ತನಿಷಾ(Tanisha) ಅವರು ಮನೆಯಿಂದ ಔಟ್ ಆಗಿದ್ದಾರೆ. ಈ ಕುರಿತಂತ ಪ್ರೋಮೋ ಒಂದು ಭಾರೀ ವೈರಲ್ ಆಗ್ತಿದೆ.

https://www.instagram.com/reel/C2OZxwSuzV5/?igsh=MXdyNGJoZzA0Z2w1OQ==

ಹೌದು, ಎಂದಿನಂತೆ ಕಲರ್ಸ್ ಕನ್ನಡದಿಂದ ಇಂದು ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ಇದನ್ನು ಕಂಡು ಅಭಿಮಾನಿಗಳು ಪ್ರೇಕ್ಷಕರು ಶಾಕ್ ಆಗಿದ್ದಾರೆ. ಕಾರಣ ಮಿಡ್ ನೈಟ್ ಎಲಿಮಿನೇಷನ್ !! ವೈರಲ್ ಆದ ಪ್ರೋಮೋ ವಾರದ ಮಧ್ಯದಲ್ಲೇ ಕಾದಿದೆ ಬಿಗ್ ಶಾಕ್ ಎಂದು ಆರಂಭವಾಗುತ್ತದೆ. ಬಳಿಕ ಬಿಗ್ ಬಾಸ್ ಧ್ವನಿ ಕೇಳಿಬಂದಿದ್ದು, ಬಿಗ್ ಬಾಸ್ ಸೂಚಿಸುವ ಸದಸ್ಯರು ಮುಖ್ಯದ್ವಾರದ ಮೂಲಕ ಕೂಡಲೇ ಹೊರಬರಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ: Bullet Train: ಇಲ್ಲಿಗೆ ಬರ್ತಾ ಇದೆ ಬುಲೆಟ್ ರೈಲು, ಆ ಜಿಲ್ಲೆಯಲ್ಲಿ ಒಂದೇ ಒಂದು ಸ್ಟಾಪ್ ಅಂತೆ!

ಬಳಿಕ ಕಂಟೆಸ್ಟೆಂಟ್ಸ್ ಎಲ್ಲರೂ ಸಾಲಾಗಿ ನಿಂತಾಗ ಬಿಗ್ ಬಾಸ್, ತನಿಷಾ ಹೆಸರು ಹೇಳಿ ‘ತನಿಷಾ ಈ ಮನೆಯಲ್ಲಿ ನಿಮ್ಮ ಪಯಣ ಇಲ್ಲಿಗೆ ಮುಕ್ತಾಯವಾಗಿದೆ. ಬಳಿಕ ತನಿಷಾ ಅವರು ತಮ್ಮ ಭಾವನೆಗಳನ್ನು, ಮನಸ್ಸಿನ ದುಗುಡಗಳನ್ನು ಎಲ್ಲರೆದುರು ಜೋರಾಗಿ ಅಳುತ್ತಾ ಹೇಳುತ್ತಾರೆ. ಮನೆ ಮಂದಿ ಕೂಡ ಭಾವುಕರಾಗುತ್ತಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಧ್ವನಿಯಿಂದಲೇ ಇದು ಕೇಳಿ ಬಂದಿರುವುದರಿಂದ ಮಿಡ್ ನೈಟ್ ಎಲಿಮಿನೇಷನ್ ನಡೆದಿದ್ದು, ತನಿಷಾ ಮನೆಯಿಂದ ಹೊರ ನಡೆದದ್ದು ಪಕ್ಕಾ ಎನ್ನಲಾಗಿದೆ. ಒಟ್ಟಿನಲ್ಲಿ ಇಂದಿನ ಸಂಚಿಕೆಯಲ್ಲಿ ಎಲ್ಲಾ ಕ್ಲಾರಿಟಿ ಸಿಗಲಿದೆ.