Home Breaking Entertainment News Kannada BBK-10: ಬಿಗ್ ಬಾಸ್ ಮನೆಯಿಂದ ಮತ್ತೊಬ್ರು ಕಂಟೆಸ್ಟೆಂಟ್ ಜೌಟ್ !!

BBK-10: ಬಿಗ್ ಬಾಸ್ ಮನೆಯಿಂದ ಮತ್ತೊಬ್ರು ಕಂಟೆಸ್ಟೆಂಟ್ ಜೌಟ್ !!

Hindu neighbor gifts plot of land

Hindu neighbour gifts land to Muslim journalist

BBK-10: ಕನ್ನಡದ ಖ್ಯಾತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸಿನ 10ನೇ(BBK-10) ಸೀಸನ್ ಇದೀಗ ಮುಕ್ತಾಯದ ಹಂತದಲ್ಲಿದೆ. ಇದೀಗ 15ನೇ ವಾರ ಚಾಲ್ತಿಯಲ್ಲಿದೆ. ಅಂದರೆ ಮುಕ್ತಾಯದ ಹಂತದಲ್ಲಿದೆ. ಮುಂದಿನ ವಾರವೇ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು ಪ್ರೇಕ್ಷಕರು, ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ. ಆದರೀಗ ಈ ನಡುವೆಯೇ ಇದೀಗ ನಮ್ರತಾ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.

BBK-10

ಇದನ್ನು ಓದಿ: LPG Gas: ಜನಸಾಮಾನ್ಯರಿಗೆ ಗುಡ್‌ನ್ಯೂಸ್‌!! ಗ್ಯಾಸ್‌ ಬೆಲೆ ಕುರಿತು ಸರಕಾರದಿಂದ ಮಹತ್ವದ ಘೋಷಣೆ!!!

ಹೌದು, ಈ ವಾರದ ಮಧ್ಯದಲ್ಲಿ ತನಿಷಾ ಅವರನ್ನು ಮಿಡ್ ನೈಟ್ ಎಲಿಮಿನೇಷನ್ ಮಾಡುವ ಮೂಲಕ ಬಿಗ್ ಬಾಸ್ ಮನೆಮಂದಿಗೆಲ್ಲಾ ಶಾಕ್ ನೀಡಿತ್ತು. ಇದೀಗ ತನಿಷಾ ಕುಪ್ಪಂಡ (Tanisha Kuppanda) ಎಲಿಮಿನೇಟ್ ಆಗಿರುವ ಶಾಕಿಂಗ್ ಸುದ್ದಿ ಬೆನ್ನಲ್ಲೇ ಇದೀಗ ನಮ್ರತಾ ಗೌಡ (Namratha Gowda) ಆಟಕ್ಕೆ ಕೂಡ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ.

ಅಂದಹಾಗೆ ಕೆಲವು ದಿನಗಳ ಹಿಂದೆ ಕಾರ್ತಿಕ್ ಜತೆಗಿನ ಒಡನಾಟ ಸಾಕಷ್ಟು ಚರ್ಚೆಯಲ್ಲಿತ್ತು. ಸ್ನೇಹಿತ್ ಜೊತೆಗಿನ ಲವ್ವಿ-ಡವ್ವಿ ನಂತರ ಕಾರ್ತಿಕ್ ಒಡನಾಟ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟ ಬಳಿಕ ಟ್ರೋಲ್ ವಿಷ್ಯ ನಮ್ರತಾ ತಿಳಿದು ಕಣ್ಣೀರಿಟ್ಟಿದ್ದರು. ಈ ಬೆನ್ನಲ್ಲೇ ನಮತ್ರಾ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ.