Browsing Category

News

ಸವಣೂರು ಗ್ರಾಮ ಪಂಚಾಯತ್‌ ನೂತನ ಸಭಾಂಗಣ ಕುಮಾರಧಾರ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ | ಜ. 18

ಸವಣೂರು : ಸವಣೂರು ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ಕಚೇರಿ ಕಟ್ಟಡ ‘ಅಟಲ್ ಸೌಧ’ ದಲ್ಲಿ ನಿರ್ಮಾಣಗೊಂಡ ನೂತನ ಸಭಾಂಗಣ ‘ಕುಮಾರಧಾರ’ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮರಂಭವು ಜ. 18 ರಂದು ನಡೆಯಲಿದ್ದು, ಸಭಾ ಕಾರ್‍ಯಕ್ರಮವು ಗ್ರಾಮ ಪಂಚಾಯತ್

ಕನಕಮಜಲು ಯುವಕ ಮಂಡಲಕ್ಕೆ ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ

ಮಂಗಳೂರಿನ ಪುರಭವನದಲ್ಲಿ ಜ.14 ರಂದು ನಡೆದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಯುವಕೇಂದ್ರ ಮಂಗಳೂರು ಹಾಗು ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಯುವ ಜನ ಒಕ್ಕೂಟ, ದ.ಕ. ಜಿಲ್ಲೆ ಇದರ ಆಶ್ರಯದಲ್ಲಿ ದಿವ್ಯ ಚೇತನ ಸ್ವಾಮಿ ವಿವೇಕಾನಂದರ

ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ

ಸವಣೂರು : ಫೆ. 7 ಮತ್ತು 8 ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಜ.14 ರಂದು ದೇವಳದ ವಠಾರದಲ್ಲಿ ಜರಗಿತು. ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲಾಯ ಸವಣೂರುರವರು ಪೂಜಾವಿಧಿ ವಿಧಾನವನ್ನು ನೇರವೇರಿಸಿದರು.

Breaking । ಕಾವಿನಮೂಲೆಯಲ್ಲಿಅಪಘಾತ । ಸ್ಕೂಟಿ ಸವಾರ ಕೊಲ್ಲಮೊಗ್ರ ಚಾಂತಳದ ಚಿದಾನಂದ ದುರ್ಮರಣ

ಬೆಳ್ಳಾರೆ ಸಮೀಪದ ಕಾವಿನಮೂಲೆಯಲ್ಲಿ ವ್ಯಾನ್ ಮತ್ತು ಸ್ಕೂಟಿ ಪರಸ್ಪರ ಢಿಕ್ಕಿ ಹೊಡೆದುಕೊಂಡು ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಕೊಲ್ಲಮೊಗ್ರ ಚಾಂತಳದ ಚಿದಾನಂದರವರು (40 ) ಮೃತಪಟ್ಟಿದ್ದಾರೆ. ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದವ್ಯಾನ್ ಹಾಗೂ ಸೋಣಂಗೇರಿ ಕಡೆಯಿಂದ

ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲ | ಸ್ವಚ್ಚ ಭಾರತ್ ಸಮ್ಮರ್ ಇಂಟರ್ನ್‌ಶಿಪ್‌ | ಜಿಲ್ಲೆಗೆ ಪ್ರಥಮ,ರಾಜ್ಯಕ್ಕೆ ದ್ವಿತೀಯ

ಪುತ್ತೂರು : ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲಕ್ಕೆ 'ಸ್ವಚ್ಛ ಭಾರತ ಸಮ್ಮರ್ ಇಂಟರ್ನ್ಶಿಪ್' ಅಭಿಯಾನದಲ್ಲಿ ಸತತ ಎರಡನೇ ವರ್ಷ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಹಾಗು ರಾಜ್ಯ ಮಟ್ಟದ ದ್ವಿತೀಯ ಸ್ಥಾನ ಹಾಗು 60,000 ರೂಗಳ ನಗದು ಬಹುಮಾನ ವನ್ನು ಇಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಯುವ

ಹಿರೇಬಂಡಾಡಿ ಸರಕಾರಿ ಪ್ರೌಢ ಶಾಲೆಯ ಪೋಷಕ ರೊಂದಿಗೆ ಸಂವಾದ : ಮಠ0ದೂರು ಭಾಗಿ

ಶಾಸಕರ ಹುಟ್ಟೂರಿನ ಸರಕಾರಿ ಪ್ರೌಢಶಾಲೆ, ಹಿರೇಬಂಡಾಡಿ ಇಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಫಲಿತಾಂಶವನ್ನು ಪಡೆಯುವ ದೃಷ್ಟಿಯಿಂದ ವಿದ್ಯಾರ್ಥಿಗಳು ಮತ್ತು ಫೋಷಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಪುತ್ತೂರಿನ ಶಾಸಕರೂ ಮತ್ತು ಶಾಲಾಭಿವೃಧ್ಧಿ ಸಮಿತಿಯ ಅಧ್ಯಕ್ಷರಾದ  ಸಂಜೀವ

ಕಾವಿನಮೂಲೆಯ ಬಳಿ ರಸ್ತೆ ಅಪಘಾತ । ಕೊಲ್ಲಮೊಗ್ರುವಿನ ಸ್ಕೂಟಿ ಸವಾರ ಗಂಭೀರ

ಬೆಳ್ಳಾರೆ : ಇಂದು ಬೆಳಿಗ್ಗೆ ಬೆಳ್ಳಾರೆ ಸಮೀಪದ ಕಾವಿನ ಮೂಲೆಯಲ್ಲಿ ವ್ಯಾನ್ ಮತ್ತು ಸ್ಕೂಟಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ಬೆಳ್ಳಾರೆಯಿಂದ ಸುಳ್ಯ ಕಡೆಗೆ ವ್ಯಾನ್ ಹೋಗುತ್ತಿತ್ತು. ವಿರುದ್ಧ ದಿಕ್ಕಿನಿಂದ, ಸೋಣಂಗೇರಿ ಕಡೆಯಿಂದ

‘ಪುರುಷರ’ಕಟ್ಟೆಯಲ್ಲಿ ಹುಡುಗಿಯರೂ ಇದ್ದಾರೆ, ಕಬಡ್ಡಿನೂ ಆಡ್ತಾರೆ | ಗೆದ್ದೂ ಬೀಗ್ತಾರೆ !!

ನರಿಮೊಗರು : ಇಲ್ಲಿನ ಪುರುಷರಕಟ್ಟೆಯ ಸರಸ್ವತಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆಯ ಕಬಡ್ಡಿ ತಂಡ ಗುತ್ತಿಗಾರಿನಲ್ಲಿ ನಡೆದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ರನ್ನರ್ ಅಪ್ ಮತ್ತು ಬಾಲಕರ ವಿಭಾಗದಲ್ಲಿ ಪ್ರಥಮ ರನ್ನರ್ ಅಪ್ ಸ್ಥಾನ ಪಡೆದು ಪ್ರಶಸ್ತಿ