Browsing Category

ದಕ್ಷಿಣ ಕನ್ನಡ

ಮರವಂತೆ : ಹೆದ್ದಾರಿಯಿಂದ ಸಮುದ್ರಕ್ಕೆ ಕಾರು ಉರುಳಿ ಇಬ್ಬರು ನೀರು ಪಾಲು 

ಕುಂದಾಪುರ : ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿಯಿಂದ ಕಾರೊಂದು ಸಮುದ್ರಕ್ಕೆ ಬಿದ್ದು ಸಾವು ಸಂಭವಿಸಿದ ಘಟನೆಯೊಂದು ಶನಿವಾರ ತಡರಾತ್ರಿ ಸಂಭವಿಸಿದೆ. ಕರಾವಳಿ ಭಾಗದಲ್ಲಿ ಧಾರಕಾರ ಸುರಿಯುತ್ತಿರುವ ಮಳೆಯಿಂದ ಸಮುದ್ರ ರಾತ್ರಿ ವೇಳೆ ಪ್ರಕ್ಷುಬ್ಧವಾಗಿದ್ದು ಅಲೆಗಳ ರಭಸಕ್ಕೆ ಕಾರು

ಮೀನು ಹಿಡಿಯುತ್ತಿದ್ದಾಗ, ಹಠಾತ್ ಎದೆನೋವು, ಮೀನುಗಾರ ಸಾವು!

ಕಾಪು : ದೋಣಿಯಲ್ಲಿ ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಮೀನುಗಾರರೊಬ್ಬರಿಗೆ ಹಠಾತ್ತಾಗಿ ಎದೆನೋವು ಕಾಣಿಸಿಕೊಂಡಿದ್ದರಿಂದ, ನೀರಿಗೆ ಬಿದ್ದು ಮೃತಪಟ್ಟ ಘಟನೆ ಜು.1ರಂದು ಮಟ್ಟು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮಟ್ಟು ಗ್ರಾಮದ ಗುಂಡಡ್ಕ ನಿವಾಸಿ ಗಣೇಶ್ (45) ಎಂದು ಗುರುತಿಸಲಾಗಿದೆ.

ಫ್ರಿಡ್ಜ್ ಮುಟ್ಟಿದಾಗ ಶಾಕ್ ಹೊಡೆದು ಮಗು ದುರ್ಮರಣ

ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಮಗುವೊಂದು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ. ಹೈದರಾಲಿ(4) ಮೃತ ಬಾಲಕ. ಈತ ಐವರ್ನಾಡಿನ ಆದಂ ಎಂಬವರ ಮಗಳು ಅಪ್ಸರ ಹಾಗೂ ಕೆದಂಬಾಡಿ ಗ್ರಾಮದ ಗಟ್ಟಮನೆ ನಿವಾಸಿ ಅಲಿ ಅವರ ಪುತ್ರ. ಬಾಲಕ ಮನೆಯಲ್ಲಿ ಫ್ರಿಡ್ಜ್ ಮುಟ್ಟಿದ್ದಾಗ

ಒಂದಲ್ಲ, ಎರಡಲ್ಲ 6 ಬಾರಿ ಕಂಪನ….!!
ಭಾರಿ ಶಬ್ದದ ಭೂಕಂಪನಕ್ಕೆ ಕೊಡಗು ಶೇಕಿಂಗ್ !

ದ.ಕ ಜಿಲ್ಲೆಯ ಗಡಿಭಾಗದಲ್ಲಿ ಭೂಕಂಪನ ಮತ್ತೆ ಮುಂದುವರಿದಿದ್ದು ಜು.2ರಂದು ಮಧ್ಯಾಹ್ನ ಭೂಮಿ ಕಂಪಿಸಿದೆ. ಸಾಲು ಸಾಲು ಭೂಕಂಪಗಳಿಗೆ ದಕ್ಷಿಣ ಕನ್ನಡ ಮತ್ತು ಕೊಡಗು ಕಂಪಿಸಿದೆ. ಜನರಿಗೆ ಏನಾಗುತ್ತಿದೆ ಎಂದೇ ತಿಳಿಯುತ್ತಿಲ್ಲ. ಭೂಕಂಪವೆಂಬ ನೈಸರ್ಗಿಕ ವಿಕೋಪ ಮತ್ತು ಅದರ ಪರಿಣಾಮ ನೋಡಿ ತಿಳಿದು

ಬೆಳ್ತಂಗಡಿ : ಯುವ ಪ್ರತಿಭೆ ವಿದ್ಯಾಲಕ್ಷ್ಮೀ ನಿಧನ

ಬೆಳ್ತಂಗಡಿ: ಶಿರ್ಲಾಲು ಗ್ರಾಮದ ಮುಾಲು ಮನೆಯ ಉದ್ಯಮಿ ಶ್ರೀಧರ ಪೂಜಾರಿಯವರ ಪುತ್ರಿ ವಿದ್ಯಾಲಕ್ಷ್ಮಿ (28 ವ) ಅವರು ಅಲ್ಪಕಾಲದ ಅಸೌಖ್ಯದಿಂದ ಕಳೆದ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಎಳೆಯ ವಯಸ್ಸಿನಲ್ಲಿಯೇ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.

ಗೋವಿನ ಹತ್ಯೆಯಾದರೆ ಪ್ರತಿಯಾಗಿ ಮಾನವ ಹತ್ಯೆ ಕೂಡ ಆದೀತು ಎಚ್ಚರಿಕೆ – ಅರುಣ್ ಕುಮಾರ್ ಪುತ್ತಿಲ

ಸವಣೂರು : ರಕ್ತಪಾತಕ್ಕೆ ರಕ್ತಪಾತವೇ ಉತ್ತರ ಕೊಡಬೇಕು,ಹತ್ಯೆಗೆ ಪ್ರತಿ ಹತ್ಯೆಯ ಮೂಲಕ ಉತ್ತರಕೊಡಬೇಕು.ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಇಬ್ಬರೂ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಅವರು ಜು.1 ರಂದು ಸಂಜೆ

ದಕ್ಷಿಣ ಕನ್ನಡ : ಸುಳ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ ,ಮುಂಜಾನೆಯ ಭೀಕರ ಕಂಪನಕ್ಕೆ ನಲುಗಿದ ಜನತೆ

ದ.ಕ.ಹಾಗೂ ಕೊಡಗು ಜಿಲ್ಲೆಯ ಗಡಿಭಾಗವಾಗಿರುವ ಸುಳ್ಯ ತಾಲೂಕಿನ ಕಲ್ಲುಗುಂಡಿಯಲ್ಲಿ ಮತ್ತೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಜು.2 ರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಉಂಟಾದ ಭೀಕರ ಶಬ್ದ ಮತ್ತು ಕಂಪನದಿಂದ ಜನತೆ ನಲುಗಿ ಆತಂಕಗೊಂಡಿದ್ದಾರೆ. ನಿರಂತರ ಕಂಪನದಿಂದ ಜನತೆಯಲ್ಲಿ ಗಾಬರಿ ಗೊಂದಲ

ವಿಟ್ಲ : ಏಕಾಏಕಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ, ಸಾರ್ವಜನಿಕರಿಂದ ಧರ್ಮದೇಟು

ವಿಟ್ಲ : ರಿಕ್ಷಾ ಡ್ರೈವರ್ ಆದ ಕುಡುಕನೋರ್ವ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಚಂದಳಿಕೆಯಲ್ಲಿ ನಡೆದಿದೆ. ರಿಕ್ಷಾ ಡ್ರೈವರ್ ಗಣೇಶ್ ಶೆಟ್ಟಿ ಎಂಬಾತ, ಚಂದಳಿಕೆ ನಿವಾಸಿ ಉದ್ಯಮಿ ನವೀನ್ ಶೆಟ್ಟಿ ಎಂಬವರ ಮನೆಗೆ ನುಗ್ಗಿದ್ದಾನೆ. ಕುಡಿದ