Home Business Repo Rate: RBI ನಿಂದ ಮತ್ತೆ ರೆಪೋ ರೇಟ್‌ ಹೆಚ್ಚಳ, ಆಗುತ್ತಾ ಬಡ್ಡಿ ದರ ಏರಿಕೆ,...

Repo Rate: RBI ನಿಂದ ಮತ್ತೆ ರೆಪೋ ರೇಟ್‌ ಹೆಚ್ಚಳ, ಆಗುತ್ತಾ ಬಡ್ಡಿ ದರ ಏರಿಕೆ, EMI ಭಾರ ?

Hindu neighbor gifts plot of land

Hindu neighbour gifts land to Muslim journalist

ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲದ ಬಡ್ಡಿ ದರದಲ್ಲಿ ಇದೀಗ ಮತ್ತೆ ಏರಿಕೆಯಾಗಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಇದೀಗ ರೆಪೋ ದರವನ್ನು ಶೇಕಡಾ 6.25 ಏರಿಕೆ ಮಾಡಿದೆ. ಈವರೆಗೆ ರೆಪೊ ದರ ಶೇಕಡಾ 5.90 ರಷ್ಟು ಇತ್ತು. ಹಾಗೇ ಪರಿಷ್ಕೃತ ರೆಪೊ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಆರ್​ಬಿಐ ಘೋಷಿಸಿದೆ.

ರೆಪೊ ದರ ಹೆಚ್ಚಳದ ಪರಿಣಾಮದಿಂದಾಗಿ ವಾಹನ, ಗೃಹಸಾಲ ಸೇರಿದಂತೆ ವಿವಿಧ ಸಾಲಗಳ ಬಡ್ಡಿ ದರ, ಇಎಂಐ (EMI) ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ಈ ಹಿಂದೆ ಆರ್‌ಬಿಐ 0.50 % ರಷ್ಟು ಸಾಲದ ಬಡ್ಡಿ ದರವನ್ನು ಏರಿಸಿತ್ತು. ಆದರೆ ಈ ಬಾರಿಯ ನಿರೀಕ್ಷೆ 0.25% ರಿಂದ 0.30% ರ ಮಟ್ಟದಲ್ಲಿ ಏರಿಕೆ ಮಾಡುವುದಾಗಿತ್ತು. ಸೆಂಟ್ರಲ್‌ ಬ್ಯಾಂಕ್‌ಗಳು ಹಣದುಬ್ಬರದ ಸವಾಲುಗಳನ್ನು ಎದುರಿಸುತ್ತಿವೆ. ಇದೀಗ ರೆಪೊ ದರ 5.90% ಇದ್ದು, ಇನ್ನೂ 0.30 ಹೆಚ್ಚಿಸಿದರೆ 6.20% ಗೆ ಏರಿಕೆ ಆಗಲಿದೆ.

ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಆರ್​ಬಿಐ ಸತತ ಐದನೇ ಬಾರಿ ರೆಪೊ ದರ ಹೆಚ್ಚಳ ಮಾಡಿದೆ. ಇದೀಗ ಬಡ್ಡಿ ದರ ಹೆಚ್ಚಳಕ್ಕೆ ಇನ್ನೊಂದು ಕಾರಣ ಇದೆ. ಅದೇನೆಂದರೆ, ಇಲ್ಲಿಯವರೆಗಿನ ಬಡ್ಡಿ ದರ ಹೆಚ್ಚಳದಿಂದ ಅಭಿವೃದ್ಧಿಗೆ ಯಾವುದೇ ರೀತಿಯ ತೊಡಕಾಗಿಲ್ಲ. ಹೀಗಾಗಿ ಬಡ್ಡಿ ದರ ಏರಿಕೆಯ ನಿರೀಕ್ಷೆ ಮಾಡಲಾಗಿತ್ತು. ಇನ್ನೂ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರಗಳನ್ನು ಪ್ರಕಟಣೆ ಮಾಡಿದರು.