Home Business Infosys : ಮೂನ್ ಲೈಟಿಂಗ್ ನಂತರ ಇನ್ಫೋಸಿಸ್ ಮಾಡಿತು ಈ ಮಹತ್ವದ ನಿರ್ಧಾರ | ಉದ್ಯೋಗಿಗಳು...

Infosys : ಮೂನ್ ಲೈಟಿಂಗ್ ನಂತರ ಇನ್ಫೋಸಿಸ್ ಮಾಡಿತು ಈ ಮಹತ್ವದ ನಿರ್ಧಾರ | ಉದ್ಯೋಗಿಗಳು ನಿರಾಳ!!!

Hindu neighbor gifts plot of land

Hindu neighbour gifts land to Muslim journalist

ಇನ್ಫೊಸಿಸ್‌ ನೌಕರರರಿಗೆ ಸಿಹಿ ಸುದ್ದಿಯೊಂದು ಜಾರಿಯಾಗಿದೆ. ಕಂಪನಿಯ ಕೆಲಸದ ಹೊರತಾಗಿ ಬೇರೆ ಕೆಲಸಗಳನ್ನು ಸಹ ಮಾಡಬಹುದಾಗಿದೆ. ನೌಕರರ ಬೇಡಿಕೆಯ ಅನುಸಾರ ತಮ್ಮ ಕೌಶಲ್ಯ ಆಧಾರದಲ್ಲಿ ಬೇರೆ ಕೆಲಸಗಳನ್ನು ಮಾಡುವಂತೆ ಮತ್ತು ಯಾವುದೇ ರೀತಿ ಇನ್ಫೊಸಿಸ್‌ ಗೆ ಅಡೆತಡೆ ಆಗದಂತೆ ನೌಕರರಿಗೆ ನಿಗಾ ಇರಲಿ ಎಂದು ಸ್ಪಸ್ಟಿಕರಿಸಿದೆ.

ಇನ್ಫೊಸಿಸ್‌ ಪ್ರಕಾರ ಮ್ಯಾನೇಜರ್‌ಗಳ ಅನುಮತಿ ಪಡೆದು ಕಂಪನಿಯ ಕೆಲಸದ ಜೊತೆಯಲ್ಲೇ ಸಣ್ಣ-ಪುಟ್ಟ ಇತರ ಕೆಲಸಗಳನ್ನು ಕೈಗೆತ್ತಿಕೊಳ್ಳಬಹುದು ಎಂದು ಹೇಳಿದೆ. ಆದರೆ ಈ ರೀತಿಯ ಕೆಲಸಗಳು ಕಂಪನಿಯ ಕೆಲಸದ ಜೊತೆ ಸ್ಪರ್ಧೆಗೆ ಇಳಿಯುವಂತಿರಬಾರದು, ಹಿತಾಸಕ್ತಿಯ ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು ಎಂದು ಸ್ಪಷ್ಟಪಡಿಸಿದೆ.

ನೌಕರರು ಕೆಲಸ ತೊರೆಯುವುದನ್ನು ಕಡಿಮೆ ಮಾಡಲು ಈ ನಿಯಮ ಕಂಪನಿಗೆ ಒಂದಿಷ್ಟು ನೆರವಾಗಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಪ್ರಮುಖವಾಗಿ ಇನ್ಫೊಸಿಸ್‌ ನಲ್ಲಿ ಒಂದೇ ಬಾರಿಗೆ ಎರಡು ಕಡೆಗಳಲ್ಲಿ ನೌಕರಿ ಹೊಂದುವುದನ್ನು ಮೂನ್‌ಲೈಟಿಂಗ್‌ ಎಂದು ವ್ಯಾಖ್ಯಾನಿಸಲಾಗಿದೆ.

ಜೊತೆಗೆ ಕಂಪನಿಯ ಒಳಗೆ ಕೂಡ ಇತರ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಇನ್ಫೊಸಿಸ್ ಹೇಳಿದೆ. ಮೂನ್‌ಲೈಟಿಂಗ್‌ ಪ್ರಕರಣಗಳನ್ನು ಅನುಕಂಪದಿಂದ ನಿರ್ವಹಿಸುವುದಾಗಿ ದೇಶದ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹೇಳಿದೆ.

ಈ ಹಿಂದೆ ಮೂನ್‌ಲೈಟಿಂಗ್‌ಗೆ ಅವಕಾಶ ಇಲ್ಲ ಎಂದು ಇನ್ಫೊಸಿಸ್‌ ಸ್ಪಷ್ಟಪಡಿಸಿತ್ತು. ವಿಪ್ರೊ ಪ್ರಕಾರ ಮೂನ್‌ಲೈಟಿಂಗ್‌ನಲ್ಲಿ ತೊಡಗಿದ್ದ ಕಾರಣ 300 ಜನರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಮಾಹಿತಿ ತಿಳಿಸಿದೆ.

ಪ್ರಸ್ತುತ ಮೂನ್‌ಲೈಟಿಂಗ್‌ ನಿಯಮವನ್ನು ಅನುಷ್ಠಾನ ಗೊಳಿಸಲಾಗಿದೆ ಎಂದು ಇನ್ಫೊಸಿಸ್ ನಿಂದ ಮಾಹಿತಿ ಬಂದಿದೆ.