Home Business PM Kisan Yojana : ಕಿಸಾನ್ ಸಮ್ಮಾನ್ ಯೋಜನೆಗೆ ಈ ರೈತರು ಅರ್ಹರಲ್ಲ!

PM Kisan Yojana : ಕಿಸಾನ್ ಸಮ್ಮಾನ್ ಯೋಜನೆಗೆ ಈ ರೈತರು ಅರ್ಹರಲ್ಲ!

Hindu neighbor gifts plot of land

Hindu neighbour gifts land to Muslim journalist


ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.ಅದೇ ರೀತಿ ರೈತರಿಗೆ ಆರ್ಥಿಕ ಬೆಂಬಲ ನೀಡುವ ನೀಡುವ ನಿಟ್ಟಿನಲ್ಲಿ ಪಿಎಂ ಕಿಸಾನ್ ಯೋಜನೆ ರೂಪಿಸಿರುವುದು ತಿಳಿದಿರುವ ವಿಚಾರ. ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಇದೀಗ 13ನೇ ಕಂತಿಗಾಗಿ ರೈತರು ಎದುರು ನೋಡುತ್ತಿದ್ದಾರೆ. ಇದೀಗ ಈ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಆರ್ಥಿಕ ನೆರವು ಪಡೆಯಲು ಇ- ಕೆವೈಸಿ ಕಡ್ಡಾಯಗೊಳಿದ್ದು ಇ-ಕೆವೈಸಿ ಮಾಡಿಸಲು ಬಾಕಿ ಇರುವ ರೈತರು ಶೀಘ್ರದಲ್ಲೇ ಮಾಡಿಸಿಕೊಳ್ಳಲು ಮನವಿ  ಕೂಡ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಶುಭ ಸುದ್ದಿ ನೀಡಿದ್ದು, ಹೋಳಿ ಹಬ್ಬಕ್ಕೂ ಮೊದಲೇ  12 ಕೋಟಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ ತಲಾ 2000 ರೂ.ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದಾರೆ.

ಈ ನಡುವೆ ಈ ಯೋಜನೆಗೆ ಅರ್ಹರಲ್ಲದೆ ಇದ್ದವರನ್ನು ಪಿಎಂ ಕಿಸಾನ್ ಯೋಜನೆಯಿಂದ ಹೊರಗಿಡಲಾಗಿದೆ. ಪಿಎಂ-ಕಿಸಾನ್ ನಿಂದ ಹೊರಗುಳಿದವರಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರರಾಗಿದ್ದರೆ ಇಲ್ಲವೇ ಸಾಂಸ್ಥಿಕ ಭೂ ಹಿಡುವಳಿದಾರರಗಿದ್ದು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ರೈತ ಕುಟುಂಬಗಳು, ಸೇವೆಯಲ್ಲಿರುವ ಇಲ್ಲವೇ  ನಿವೃತ್ತ ಅಧಿಕಾರಿಗಳು ಮತ್ತು  ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿರುವವರಾಗಿದ್ದಾರೆ.  ವೈದ್ಯರು ವಕೀಲರು ಜೊತೆಗೆ ಉನ್ನತ ಹುದ್ದೆಯಲ್ಲಿರುವ  ಇದಲ್ಲದೆ ಮಾಸಿಕ 10,000 ರೂ.ಗಿಂತ ಹೆಚ್ಚಿನ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು ಮತ್ತು ಕಳೆದ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದವರು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗುವುದಿಲ್ಲ ಎಂಬುದನ್ನು ಗಮನಿಸಬೇಕು.

ಈಗಾಗಲೇ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣ ರೈತರ ಖಾತೆಗೆ ಬಿಡುಗಡೆ ಆಗಿ ರೈತರ ಖಾತೆಗೆ ಜಮೆ ಆಗಿದ್ದು, ಈ  ಯೋಜನೆಯ ಭಾಗವಾಗಿ ಇದುವರೆಗೆ 10 ಕೋಟಿಗೂ ಹೆಚ್ಚು ರೈತರು 12 ಕಂತುಗಳನ್ನು ಪಡೆದಿದ್ದಾರೆ. ಈ ಮೊತ್ತವನ್ನು ಪ್ರತಿ 4 ತಿಂಗಳಿಗೊಮ್ಮೆ ಪ್ರತಿ ವ್ಯಕ್ತಿಗೆ 2,000 ರೂ.ನಂತೆ ಮೂರು ಕಂತುಗಳಲ್ಲಿ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ 1.6 ಲಕ್ಷ ಕೋಟಿ ರೂ.ಗಳನ್ನು  ವರ್ಗಾಯಿಸಲಾಗಿದೆ. ಹೋಳಿ ಹಬ್ಬದ ಸಂಭ್ರಮದ ನಡುವೆ ಯೋಜನೆಯ ಹಣ ರೈತರಿಗೆ ಜಮೆಯಾಗಲಿದ್ದು ಈಗಾಗಲೇ 13 ನೇ ಕಂತಿನ ಹಣವನ್ನು ಎದುರು ನೋಡುತ್ತಿರುವ ರೈತರಿಗೆ ಶುಭ ಸುದ್ದಿ ಲಭ್ಯವಾಗಿದೆ.