Home Business ಲೇಬರ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ |

ಲೇಬರ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ |

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ಸರ್ಕಾರವು ಕರ್ನಾಟಕ ಕಾರ್ಮಿಕ ಕಾರ್ಡ್‌ಗಳ (Labour Card) ನೋಂದಣಿಗಾಗಿ ಆನ್‌ಲೈನ್ ಇ-ಪೋರ್ಟಲ್ ಅನ್ನು ಪರಿಚಯಿಸಿದ್ದು, ಎಲ್ಲಾ ಕಾರ್ಮಿಕರು ಮತ್ತು ನಿರ್ಮಾಣ ಕಾರ್ಮಿಕರು ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಕಾರ್ಮಿಕ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಈ ಪೋರ್ಟಲ್ ಅನ್ನು ನಿರ್ದಿಷ್ಟವಾಗಿ ಕಾರ್ಮಿಕ ಕಾನೂನುಗಳು ಮತ್ತು ಕಾರ್ಮಿಕರ ಆರೋಗ್ಯ, ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ವಿನ್ಯಾಸ ಮಾಡಿದೆ.ಕಾರ್ಮಿಕ ಕಾರ್ಡ್ ಇದ್ದವರಿಗೆ ಕಾರ್ಮಿಕ ಇಲಾಖೆಯಿಂದ ಹಲವಾರು ಯೋಜನೆಗಳ ಮೂಲಕ ಸಹಾಯಧನದ ಜೊತೆಗೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಇದೀಗ ಲೇಬರ್ ಕಾರ್ಡ್( labour card) ಹೊಂದಿರುವವರಿಗೆ ಸರ್ಕಾರದ ವತಿಯಿಂದ ಕಾರ್ಮಿಕ ಇಲಾಖೆ ಮೂಲಕ ಟೂಲ್ ಕಿಟ್ ಗಳನ್ನ ವಿತರಣೆ ಮಾಡಲಾಗುತ್ತಿದೆ.

ಟೂಲ್ ಕಿಟ್ 20,000 ಬೆಲೆಬಾಳುವ ಸಾಮಗ್ರಿಗಳನ್ನು ಒಳಗೊಂಡಿದ್ದು ಈ ಟೂಲ್ ಕಿಟ್ ನಲ್ಲಿ ಕಾರ್ಮಿಕ ಕೆಲಸಕ್ಕೆ ಬೇಕಾದ ಸಾಮಗ್ರಿಗಳು ಇರಲಿವೆ. ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ಟೂಲ್ ಕಿಟ್ ನೀಡಲಾಗುತ್ತಿದೆ.

ಹಾಗಾದ್ರೆ ಟೂಲ್ ಕಿಟ್ ಪಡೆಯುವುದು ಹೇಗೆ?ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅದಕ್ಕೆ ಉತ್ತರ ಹೇಳ್ತೀವಿ ಕೇಳಿ!!!

ಕಾರ್ಮಿಕ ಇಲಾಖೆಯಿಂದ ನಡೆಸಲಾಗುವ ತರಬೇತಿಗೆ ರಿಜಿಸ್ಟರ್ ಮಾಡಿಸಿಕೊಂಡ ಬಳಿಕ ಕಾರ್ಮಿಕ ಇಲಾಖೆ ನಡೆಸುವ ಟ್ರೈನಿಂಗ್ ನಲ್ಲಿ ಪಾಲ್ಗೊಳ್ಳಬೇಕು. ಆನಂತರ ಕಾರ್ಮಿಕ ಇಲಾಖೆಯಲ್ಲಿ ಟೂಲ್ ಕಿಟ್ ಗಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಇಲ್ಲಿ ಯಾವುದೇ ಆನ್ಲೈನ್ ಅರ್ಜಿಗೆ ಅವಕಾಶವಿಲ್ಲ. ನೀವು ನೇರವಾಗಿ ಕಾರ್ಮಿಕ ಇಲಾಖೆಗೆ ಹೋಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಬಳಿಕ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಕಾರ್ಮಿಕ ಇಲಾಖೆಯಿಂದ ಟೂಲ್ ಕಿಟ್ ಗಳನ್ನು ಪಡೆಯಬಹುದು.ಈ ಮೂಲಕ ಅರ್ಜಿ ಸಲ್ಲಿಸಿ, ಸದರಿ ಟೂಲ್ ಕಿಟ್ ಗಳ ಮೂಲಕ ನಿಮ್ಮ ಉದ್ಯೋಗಕ್ಕೆ ನೆರವಾಗಬಹುದು.

ಯಾವ ಜಿಲ್ಲೆಗಳಲ್ಲಿ ಟೂಲ್ ಕಿಟ್ ನೀಡಲಾಗುತ್ತಿದೆ?

ಗದಗ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಮೇಸನ್ ಟುಲ್ ಕಿಟ್ ನೀಡಲಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಎಲೆಕ್ನಿಷಿಯನ್ ಟೂಲ್ ಕಿಟ್ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಪೇಂಟರ್ ಹಾಗೂ ಎಲೆಕ್ನಿಷಿಯನ್ ನೀಡಲಾಗುತ್ತಿದ್ದು ಜೊತೆಗೆ ಕಾರ್ಮಿಕರ ಮಕ್ಕಳಿಗೆ ಶಾಲಾ ಟೂಲ್ ಕಿಟ್ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಕೂಡ ಕಾರ್ಮಿಕರಿಗೆ ಟೂಲ್ ಕಿಟ್ ನೀಡಲಾಗುತ್ತಿದೆ.ಹೀಗೆ ನಿಮ್ಮ ಜಿಲ್ಲೆಯಲ್ಲಿ ಈ ರೀತಿಯ ಟೂಲ್ ಕಿಟ್ ಗಳನ್ನು ನೀಡಲಾಗುತ್ತಿದೆಯೇ ಎಂಬ ಮಾಹಿತಿ ಪಡೆಯಲು ನಿಮ್ಮ ಜಿಲ್ಲೆಯ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.