Home Business 91ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ DLF ಮುಖ್ಯಸ್ಥ! ಪ್ರೀತಿಗೆ ಕಣ್ಣಿಲ್ಲ ಅಲ್ವಾ ಫ್ರೆಂಡ್ಸ್‌!

91ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ DLF ಮುಖ್ಯಸ್ಥ! ಪ್ರೀತಿಗೆ ಕಣ್ಣಿಲ್ಲ ಅಲ್ವಾ ಫ್ರೆಂಡ್ಸ್‌!

dlf groups

Hindu neighbor gifts plot of land

Hindu neighbour gifts land to Muslim journalist

DLF Groups: ಪ್ರೀತಿಗೆ ಕಣ್ಣಿಲ್ಲ ಎಂಬ ಮಾತಿನಂತೆ ಅದೆಷ್ಟೋ ಮಂದಿ ಪ್ರೀತಿಯ ಗಡಿರೇಖೆಯನ್ನು ದಾಟಿ ಪ್ರಣಯ ಜೋಡಿಗಳಂತೆ ಗುರುತಿಸಿಕೊಂಡು ಎಲ್ಲರ ವಿರೋಧದ ನಡುವೆಯೂ ಸಪ್ತಪದಿ ತುಳಿದು ಮಾದರಿ ಜೋಡಿಗಳಾಗಿ ಗುರುತಿಸಿಕೊಂಡ ನಿದರ್ಶನಗಳು ಬೇಕಾದಷ್ಟಿವೆ.

 

ಪ್ರೀತಿ (Love)ಎಂದರೆ ನಿಸ್ವಾರ್ಥ ಭಾವ ವಯಸ್ಸಾಗುತ್ತ ಹೋದಂತೆ ಪ್ರೀತಿ ಆಕರ್ಷಣೆ ಕಡಿಮೆಯಾಗುತ್ತದೆ ಎನ್ನುವ ಮಾತುಗಳನ್ನು ನೀವು ಕೇಳಿರಬಹುದು. ಇನ್ನು ಕೆಲ ಸಂದರ್ಭದಲ್ಲಿ 50 ಇಲ್ಲವೇ 60 ರ ಸಮೀಪಿಸುತ್ತಿದ್ದಂತೆ ಸಂಗಾತಿ ಇಹಲೋಕ ತ್ಯಜಿಸಿಬಿಟ್ಟರೆ ಏಕಾಂಗಿಯಾಗಿ ದಿನದೂಡುವ ಪ್ರಮೇಯ ಉಂಟಾಗುತ್ತದೆ. ಆಗೆಲ್ಲ ಮತ್ತೊಂದು ಮದುವೆಯಾಗುವ ಬಿಟ್ಟಿ ಸಲಹೆ ಕೂಡ ನೀಡುವವರಿದ್ದಾರೆ. ವಯಸ್ಸಾಗುತ್ತಾ ಹೋದಂತೆ ಜೊತೆಗಾರರು ಬೇಕೆಂದು ಅನಿಸುವುದು ಸಹಜ. ಹೀಗೆ ತನ್ನ 91ರ ಹರೆಯದಲ್ಲಿ ವ್ಯಕ್ತಿಯೊಬ್ಬ ಸಂಗಾತಿಯನ್ನು(Life Partner) ಅರಸಿಕೊಂಡ ಅಪರೂಪದ ಘಟನೆಯೊಂದು ವರದಿಯಾಗಿದೆ.

ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎನ್ನುವುದನ್ನು ನಿರೂಪಿಸುವ ನಿದರ್ಶನ ನೀಡುವಂತ ಘಟನೆ ಮುನ್ನಲೆಗೆ ಬಂದಿದ್ದು, ಅಪರೂಪದ ಪ್ರೇಮ ಕಥೆ (Love Story) ಬೆಳಕಿಗೆ ಬಂದಿದೆ.ರಿಯಲ್‌ ಎಸ್ಟೇಟ್‌ ಸಮೂಹ ಡಿಎಲ್‌ಎಫ್‌(DLF Groups) ಮುಖ್ಯಸ್ಥರಾಗಿರುವ ಕುಶಾಲ್‌ ಪಾಲ್‌ ಸಿಂಗ್‌ ತಮ್ಮ 91ನೇ ವಯಸ್ಸಿನಲ್ಲಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ. ಪ್ರೀತಿ ಕುರುಡು ಎಂಬಂತೆ ತಮ್ಮ ಸಂಗಾತಿಯನ್ನು ಇಳಿವಯಸ್ಸಿನಲ್ಲಿ ಕಂಡುಕೊಂಡಿದ್ದಾರೆ.

2018ರಲ್ಲಿ ಕುಶಾಲ್‌ ಪತ್ನಿ ತೀರಿಕೊಂಡಿದ್ದು, ತಮ್ಮ ಪ್ರೀತಿಯ ಕಥೆ(Love Story) ಬಗ್ಗೆ ಕುಶಾಲ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕುಶಾಲ್ ತಮ್ಮ ಮಡದಿ ತೀರಿಕೊಂಡ ಬಳಿಕ 2 ವರ್ಷಗಳ ಕಾಲ ತಮ್ಮ ಜೀವನದ ಬಂಡಿಯನ್ನು ಒಬ್ಬಂಟಿಯಾಗಿ ಕಳೆದು, ತನ್ನ 91ರ ಹರೆಯದಲ್ಲಿಯು ತನಗೆ ಅನುರೂಪ ಜೋಡಿಯನ್ನು ಕಂಡುಕೊಳ್ಳುವಲ್ಲಿ ಯಶ ಸ್ವಿಯಾಗಿದ್ದಾರೆ. ಶೀನಾ ಎಂಬ ಆಕರ್ಷಕ ವ್ಯಕ್ತಿಯನ್ನು ಭೇಟಿಯಾಗಿದ್ದು, ಆಕೆ ತನ್ನ ಜೀವನದ ಅತ್ಯತ್ತಮ ವ್ಯಕ್ತಿಯೆಂದು ಕುಶಾಲ್ ಹೇಳಿಕೊಂಡಿದ್ದಾರೆ.

ಶೀನಾ ತನಗೆ ಅನುರೂಪ ಜೋಡಿಯಾಗಿದ್ದು, ಅವಳು ಅದ್ಭುತ ಸ್ನೇಹಿತರ ಬಳಗ ಹೊಂದಿದ್ದು ತನ್ನ ಪತ್ನಿ ತೀರಿಕೊಂಡ ಬಳಿಕ ತನ್ನ ಜೀವನವನ್ನೂ ಮುನ್ನಡೆಸಲು ಧೈರ್ಯ ತುಂಬಿ ಬೆಂಬಲವಾಗಿ ನಿಂತಿದ್ದಳು. ಹೀಗಾಗಿ, ಆಕೆ ತನ್ನ ಪಾಲಿಗೆ ಅದ್ಭುತ ವ್ಯಕ್ತಿ ಎಂದು ಕುಶಾಲ್ ತನ್ನ ನೆಚ್ಚಿನ ಗೆಳತಿ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.