Home Business ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಮಹತ್ವದ ನಿರ್ಧಾರ !

ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಮಹತ್ವದ ನಿರ್ಧಾರ !

Hindu neighbor gifts plot of land

Hindu neighbour gifts land to Muslim journalist

ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಎದುರು ನೋಡುತ್ತಿದೆ. ಎಣ್ಣೆಯ ಮಹಿಮೆ ಅರಿಯದವರಿಲ್ಲ. ಏಷ್ಟೋ ಮಂದಿಗೆ ಒಮ್ಮೆ ಬಾರ್ ಗೆ ಎಂಟ್ರಿ ಕೊಡದೆ ಇದ್ದಲ್ಲಿ ದಿನವೇ ಪೂರ್ತಿಯಾಗದು. ಆದರೆ, ಎಣ್ಣೆಯ ದಾಸರಾದವರಿಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹೌದು!!ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಣಯ ಕೈಗೊಂಡಿದೆ. ಅದೇನಪ್ಪಾ ಅಂದ್ರೆ, ಜನವರಿ 26ರಂದು ಡ್ರೈ ಡೇಯಂದು ಮದ್ಯದ ಅಂಗಡಿಗಳು ಮತ್ತು ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ಜನವರಿ 1, 2023ರಿಂದ ಮಾರ್ಚ್ 31, 2023ರವರೆಗೆ ದೆಹಲಿ ಸರ್ಕಾರದ ಅಬಕಾರಿ ಇಲಾಖೆಯು ಡ್ರೈ ಡೇ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಕೇಜ್ರಿವಾಲ್ ಸರ್ಕಾರ ಜನವರಿ 26ರಂದು ಗಣರಾಜ್ಯೋತ್ಸವ, ಫೆಬ್ರವರಿ 5ರಂದು ಗುರು ರವಿದಾಸ್ ಜಯಂತಿ, ಫೆಬ್ರವರಿ 15ರಂದು ಸ್ವಾಮಿ ದಯಾನಂದ ಸರಸ್ವತಿ ಜಯಂತಿ, ಫೆಬ್ರವರಿ 18ರಂದು ಮಹಾಶಿವರಾತ್ರಿ, ಮಾರ್ಚ್ 8ರಂದು ಹೋಳಿ ಮತ್ತು ಮಾರ್ಚ್ 30ರಂದು ರಾಮನವಮಿಯನ್ನು ಡ್ರೈ ಡೇ ಎಂದು ಘೋಷಿಸಿದೆ. ಕೇಜ್ರಿವಾಲ್ ಸರ್ಕಾರ ಈ ಕುರಿತಾಗಿ ಇಂದು ಅಧಿಕೃತ ಆದೇಶ ಹೊರಡಿಸಿದ್ದು, ಹೀಗಾಗಿ, ಈ ಹಬ್ಬಗಳ ಸಮಯದಲ್ಲಿ ಅಂಗಡಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಕೇಜ್ರಿವಾಲ್ ಸರ್ಕಾರ ಪ್ರತಿ 3 ತಿಂಗಳಿಗೊಮ್ಮೆ ಡ್ರೈ ಡೇಗಳ ಪಟ್ಟಿಯನ್ನು ನೀಡುತ್ತದೆ. ಪ್ರಸ್ತುತ ವರ್ಷದಲ್ಲಿ ಸುಮಾರು 21 ಡ್ರೈ ಡೇಗಳಿದೆ ಎನ್ನಲಾಗಿದೆ.

ಈ ಹಬ್ಬದ ಸಂದರ್ಭಗಳಲ್ಲಿ ರೆಸ್ಟೋರೆಂಟ್‌ಗಳಲ್ಲಿ ಮದ್ಯ ವಿತರಣೆ ಇರುವುದಿಲ್ಲ ಎಂಬುದನ್ನು ಗಮನಿಸಬೇಕು. ಈ ಮೊದಲು ಜನವರಿ 26ಅನ್ನು ಡ್ರೈ ಡೇ ಎಂದು ಘೋಷಣೆ ಮಾಡಿದ್ದರು ಕೂಡ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯವನ್ನು ನೀಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಜನವರಿ 26ರಂದು ಮೊದಲ ಬಾರಿಗೆ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.