Home Business Canara global business: ಜಾಗತಿಕ ವ್ಯವಹಾರದಲ್ಲಿ 20000 ಕೋಟಿ ಗಡಿ ದಾಟಿದ ಕೆನರಾ ಬ್ಯಾಂಕ್!!

Canara global business: ಜಾಗತಿಕ ವ್ಯವಹಾರದಲ್ಲಿ 20000 ಕೋಟಿ ಗಡಿ ದಾಟಿದ ಕೆನರಾ ಬ್ಯಾಂಕ್!!

Hindu neighbor gifts plot of land

Hindu neighbour gifts land to Muslim journalist

ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ.

ಖಾಸಗಿ ವಲಯದ ಅತೀ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕಿನ ಜಾಗತಿಕ ವ್ಯವಹಾರವು ವಾರ್ಷಿಕ ಶೇ.13.63ರಷ್ಟು ಬೆಳವಣಿಗೆಯೊಂದಿಗೆ 20 ಸಾವಿರ ಕೋಟಿ ರೂ. ಗಡಿದಾಟಿದೆ. ಡಿಸೆಂಬರ್‌ 2021ಕ್ಕೆ ಹೋಲಿಕೆ ಮಾಡಿದರೆ ಸದ್ಯ ಚಿನ್ನಾಭರಣದ ಮೇಲಿನ ಸಾಲ ಶೇ.34ರಷ್ಟು, ನಿವ್ವಳ ಬಡ್ಡಿ ಆದಾಯ ಶೇ.23.81ರಷ್ಟು, ಬಡ್ಡಿಯೇತರ ಆದಾಯ ಶೇ.10.3ರಷ್ಟು, ಶುಲ್ಕ ರಹಿತ ಆದಾಯ ಶೇ.13.02ರಷ್ಟು, ಗೃಹ ಸಾಲ ಶೇ.15.8ರಷ್ಟು ಬೆಳವಣಿಗೆ ಕಂಡುಬಂದಿದೆ. ಬ್ಯಾಂಕು ಪ್ರಸಕ್ತ ಆರ್ಥಿಕ ವರ್ಷದ (2022-2023) ಮೂರನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ನಿವ್ವಳ ಲಾಭವು 2021ರ ಡಿಸೆಂಬರ್‌ಗೆ ಹೋಲಿಸಿದರೆ ಶೇ.91.8ರಷ್ಟು ಹೆಚ್ಚಳದ ಜೊತೆಗೆ 2,882 ಕೋಟಿ ರೂಪಾಯಿ.ಗೆ ತಲುಪಿದೆ. ಒಟ್ಟಾರೆ ಜಾಗತಿಕ ಠೇವಣಿಯು ವಾರ್ಷಿಕ ಶೇ.11.5 ರಷ್ಟು ಬೆಳವಣಿಗೆಯಾಗಿ 11,63,470 ಕೋಟಿ ರೂ. ಗಡಿ ತಲುಪಿದೆ.

ಸದ್ಯ ಬ್ಯಾಂಕ್‌ನ ಜಾಗತಿಕ ವ್ಯವಹಾರವು 20,14,443 ಕೋಟಿ ರೂ. ಹೆಚ್ಚಳವಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಶೇ.2.19 ರಷ್ಟುಇದ್ದ ನಿವ್ವಳ ಅನುತ್ಪಾದಕ ಆಸ್ತಿಗಳು ಶೇ.1.96ಕ್ಕೆ ಇಳಿಕೆಯಾಗಿವೆ.ಡಿಸೆಂಬರ್‌ 2021ಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ಕೃಷಿ ಸಂಬಂಧಿಸಿದ ಸಾಲ ಪ್ರಮಾಣ ವಾರ್ಷಿಕ ಶೇ.20 ರಷ್ಟು ಹೆಚ್ಚಳವಾಗಿ 2,03,312 ಕೋಟಿ ರೂಪಾಯಿ. ತಲುಪಿದೆ. ಸದ್ಯ ಬ್ಯಾಂಕ್‌ 9720 ಶಾಖೆಗಳನ್ನು ಒಳಗೊಂಡಿದ್ದು, 10,745 ಎಟಿಎಂಗಳು ಕಾರ್ಯಾಚರಣೆಯಲ್ಲಿವೆ. ಅದೇ ರೀತಿ ಚಿನ್ನಾಭರಣದ ಮೇಲಿನ ಸಾಲ ಶೇ.34ರಷ್ಟು, ನಿವ್ವಳ ಬಡ್ಡಿ ಆದಾಯ ಶೇ.23.81ರಷ್ಟು, ಬಡ್ಡಿಯೇತರ ಆದಾಯ ಶೇ.10.3ರಷ್ಟು, ಶುಲ್ಕ ರಹಿತ ಆದಾಯ ಶೇ.13.02ರಷ್ಟು, ಗೃಹ ಸಾಲ ಶೇ.15.8ರಷ್ಟು ಬೆಳವಣಿಗೆ ಕಂಡು ಬಂದಿದೆ.