ಭಯೋತ್ಪಾದಕರ ದಾಳಿಯಿಂದ ಗಾಯಗೊಂಡ ಜೂಮ್ ಇನ್ನಿಲ್ಲ!!!

ಕೆಲವು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭಾರತೀಯ ಸೇನೆಯ ದಾಳಿಯ ಶ್ವಾನ 'ಜೂಮ್' ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದೆ.ಇಂದು (ಗುರುವಾರ)

ಮಂಗಳೂರು : ಬಸ್ ನಿಲ್ದಾಣಕ್ಕಾಗಿ ಭೂ ಸ್ವಾಧೀನ ,ಪಾವತಿಸದ ಪರಿಹಾರ-ಮ.ನ.ಪಾ.ಕಚೇರಿ ಜಫ್ತಿಗೆ ಮುಂದಾದ ಕೋರ್ಟ್

ಮಂಗಳೂರು : ಪಂಪ್‌ವೆಲ್‌ನಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣಕ್ಕಾಗಿ 2008ರಲ್ಲಿ ಭೂ ಸ್ವಾಧೀನ ಮಾಡಿದ್ದರೂ ಇನ್ನೂ ಪರಿಹಾರ ಪಾವತಿಸದ ಕಾರಣ ಮಂಗಳೂರಿನ ಪ್ರಧಾನ ಸತ್ರ ನ್ಯಾಯಾಲಯದ ಆದೇಶದಂತೆ ಕೋರ್ಟ್‌ ಅಧಿಕಾರಿಗಳು ಬುಧವಾರ ಮಹಾನಗರ ಪಾಲಿಕೆಯ ಭೂಸ್ವಾಧೀನ ವಿಭಾಗ ಮತ್ತು ಆಯುಕ್ತರ ಕಚೇರಿಯನ್ನು

ಉಪ್ಪಿನಂಗಡಿ : ಅಂಗಡಿಗಳಿಂದ  ಕಳ್ಳತನ

ಉಪ್ಪಿನಂಗಡಿ: ಇಲ್ಲಿನ ಪೋಲಿಸ್ ಠಾಣೆ ಮತ್ತು ಹಳೆ ಬಸ್ಟ್ಯಾಂಡ್ ಸಮೀಪದ ಅಂಗಡಿಗಳ ಶಟರ್ ಮುರಿದು ನಗದು ಹಣ ದೋಚಿರುವ ಘಟನೆ ನಡೆದಿದೆ.ಮುಂಜಾನೆ ಸುಮಾರು 3:45ರ ವೇಳೆಗೆ ಈ ಘಟನೆ ನಡೆದಿದೆ.ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೋಲಿಸರು ಆಗಮಿಸಿದ್ದು,ಸಿಸಿ ಕ್ಯಾಮರಾ ಪರಿಶೀಲಿಸಿದ್ದು ತನಿಖೆ

ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ವಿಚಾರ : ಇಂದು ಸುಪ್ರಿಂ ಕೋರ್ಟ್ ತೀರ್ಪು

ಕರ್ನಾಟಕದ ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿರುವ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ಬಗ್ಗೆ ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ಪ್ರಕಟಿಸಲಿದೆ.10 ದಿನಗಳ ವಾದ–ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತ ಹಾಗೂ ಸುಧಾಂಶು ಧುಲಿಯಾ

ಮಂಗಳೂರು : ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ CISF ಪಿಎಸ್ಐ

ಮಂಗಳೂರು: ಇಲ್ಲಿನ ಪಣಂಬೂರದ ಎನ್‌ಎಂಪಿಟಿ ಮುಖ್ಯ ಗೇಟ್ ನಲ್ಲಿ ಕರ್ತವ್ಯದಲ್ಲಿದ್ದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF) ಇದರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ವರದಿಯಾಗಿದೆ.ರಾಜಸ್ಥಾನದ ಭರತ್ ಪುರ

ಮಂಗಳೂರು : ಹುಲಿ ವೇಷಧಾರಿಯ ಕೊಲೆ ,ಆರೋಪಿ ಬಂಧನ

ಮಂಗಳೂರು : ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಹರಿಪದವು ಎಂಬಲ್ಲಿ ಹುಲಿವೇಷಧಾರಿ ಜಯಾನಂದ ಆಚಾರ್ಯ (65) ಎಂಬವರನ್ನು ಯುವಕನೋರ್ವ ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಕೊಲೆ ಆರೋಪಿ ಕುಂಜತ್‌ಬೈಲ್ ದೇವಿನಗರದ ರಾಜೇಶ್ ಪೂಜಾರಿ (31) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿ

ಕಡಬ : ಸಿಡಿಲು ಬಡಿದು ಮಸೀದಿಗೆ ಹಾನಿ

ಕಡಬ: ಕಡಬ ಸುತ್ತಮುತ್ತ ಮಂಗಳವಾರ ಸಿಡಿಲು ಸಹಿತ ಧಾರಕಾರ ಮಳೆಯಾಗಿದೆ. ತಾಲೂಕಿನ ಕೊಡಿಂಬಾಳ ಗ್ರಾಮದ ಪನ್ಯ ಜುಮ್ಮಾ ಮಸೀದಿಗೆ ಸಿಡಿಲು ಬಡಿದು ಹಾನಿಯಾಗಿದೆ. ಘಟನೆಯಿಂದ ಮಸೀದಿಯ ಒಂದು ಭಾಗದ ಗೊಡೆ ಬಿರುಕು ಉಂಟಾಗಿದೆ.ವಿದ್ಯುತ್ ಉಪಕರಣ ಹಾನಿಗೊಂಡಿದೆ.

ಆಸ್ಕರ್ ಆವಾರ್ಡ್‌ಗೆ ಎಂಟ್ರಿ ಪಡೆದಿದ್ದ ಛೆಲ್ಲೋ ಶೋ ಬಾಲ‌ನಟ ರಾಹುಲ್ ಇನ್ನು ನೆನಪು ಮಾತ್ರ

95ನೇ ಆಸ್ಕರ್‌ ಅಕಾಡೆಮಿ ಆವಾರ್ಡ್ಸ್‌ ಗೆ ಎಂಟ್ರಿ ಪಡೆದ ಗುಜರಾತಿ ಸಿನಿಮಾ ʼಛೆಲ್ಲೋ ಶೋʼದಲ್ಲಿ ಬಾಲನಟನಾಗಿ ನಟಿಸಿದ್ದ ರಾಹುಲ್‌ ಕೋಲಿ ಕ್ಯಾನ್ಸರ್‌ ನಿಂದ ಮೃತಪಟ್ಟಿದ್ದಾರೆ.ರಾಹುಲ್‌ ಕೋಲಿ(15) ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ

ಭಾರತ್ ಜೋಡೋ ಯಾತ್ರೆ ವೇಳೆ ಖಾಸಗಿ ಬಸ್ ಡಿಕ್ಕಿ : ಕಾಂಗ್ರೆಸ್ ಕಾರ್ಯಕರ್ತ ಮೃತ್ಯು

ಭಾರತ್ ಜೋಡೋ ಯಾತ್ರೆ ವೇಳೆ ಕಾರ್ಯಕರ್ತರನ್ನು ಕರೆ ತಂದಿದ್ದ ಖಾಸಗಿ ಬಸ್ ಡಿಕ್ಕಿಯಾಗಿ, ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಹಿರಿಯೂರು ಪಟ್ಟಣದ ಟಿ.ಬಿ.ವೃತ್ತದ ಬಳಿ ನಡೆದಿದೆ.ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ರಮೇಶ(38) ಮೃತ ದುರ್ದೈವಿ. ಖಾಸಗಿ ಬಸ್ ಭಾರತ ಜೋಡೋ ಯಾತ್ರೆಗೆ

ಮಂಗಳೂರು : ಕಡಿಮೆ ದರದಲ್ಲಿ ಲ್ಯಾಪ್‌ಟಾಪ್ ನೀಡುವುದಾಗಿ ವ್ಯಕ್ತಿಗೆ 5.73 ಲಕ್ಷ ರೂ ವಂಚನೆ

ಲ್ಯಾಪ್‌ಟಾಪ್‌ ನೀಡುವುದಾಗಿ ಹೇಳಿ ವ್ಯಕ್ತಿಯೋರ್ವರಿಗೆ 5.73 ಲ.ರೂ. ವಂಚಿಸಿರುವ ಬಗ್ಗೆ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಂಗಳೂರು ನಗರದ ಉದ್ಯಮಿಯೋರ್ವರು ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಮೊದಲಾದ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದು, ಅವರಿಗೆ ಜೈಪುರ ವೈಶಾಲಿ