Home News ತನ್ನ ಸಂಬಂಧಿಕರ ಜತೆ ಮಲಗಿ ಮಜಾ ಮಾಡಲು ಹೇಳುತ್ತಿದ್ದ ನಂತೆ ಗಂಡ | ಅದಕ್ಕೇ ಮಚ್ಚೆತ್ತಿಕೊಂಡಳಾ...

ತನ್ನ ಸಂಬಂಧಿಕರ ಜತೆ ಮಲಗಿ ಮಜಾ ಮಾಡಲು ಹೇಳುತ್ತಿದ್ದ ನಂತೆ ಗಂಡ | ಅದಕ್ಕೇ ಮಚ್ಚೆತ್ತಿಕೊಂಡಳಾ ಬ್ಯೂಟಿ ಪಾರ್ಲರ್ ನೇತ್ರಾ ?!

Hindu neighbor gifts plot of land

Hindu neighbour gifts land to Muslim journalist

ತನ್ನ ಸಂಬಂಧಿಕರ ಜತೆ ಮಲಗಿ ಮಜಾ ಮಾಡಲು ಹೇಳುತ್ತಿದ್ದ ನಂತೆ ಗಂಡ, ಅದಕ್ಕೇ ಮಚ್ಚೆತ್ತಿಕೊಂಡಳಾ ಬ್ಯೂಟಿ ಪಾರ್ಲರ್ ನೇತ್ರಾ ?. ಹಾಗಂತ ಕೊಲೆ ಮಾಡಿದ ನೇತ್ರ ಖುದ್ದು ಹೇಳುತ್ತಿದ್ದಾಳೆ. ಈ ಘಟನೆ ಬೆಂಗಳೂರು ಉತ್ತರ ಜಿಲ್ಲೆಯ ಹ್ಯಾರೋ ಕ್ಯಾತನಹಳ್ಳಿ ಎಲ್ಲಿ ನಡೆದಿದೆ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಸ್ವಾಮಿರಾಜ್‌ಗೆ ಮೊದಲೇ ಓರ್ವ ಪತ್ನಿ ಇದ್ದಳು. ಸ್ವಾಮಿರಾಜ್‌ ರಿಯಲ್ ಎಸ್ಟೇಟ್ ಉದ್ಯಮಿ. ಆದುದರಿಂದ ಕೈಯಲ್ಲಿ ಕಾಸು, ಕೊರಳಲ್ಲಿ ದೊಡ್ಡ ಚಿನ್ನದ ಸರಕ್ಕೆ ತೊಂದರೆ ಇರಲಿಲ್ಲ. ಬಹುಶಃ ಅದೇ ಆಕರ್ಷಣೆಯಲ್ಲಿ ಇರಬೇಕು : ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನೇತ್ರಾಳಾ ಆಸೆಯ ನೇತ್ರಗಳು ಸ್ವಾಮಿರಾಜ್ ನ ಮೇಲೆ ಬಿದ್ದಿತ್ತು. ಹಾಗೆ ಹುಟ್ಟಿಕೊಂಡ ಆಕರ್ಷಣೆ ಪ್ರೀತಿಯಾಗಿ ಜೊತೆಗೇ ಸಂಸಾರ ಹೂಡಿದ್ದರು. ಚೆನ್ನಾಗೇ ನಡೀತಿತ್ತು ಜೀವನ.
ಹೀಗೆ ಕಳೆದ ಹತ್ತು ವರ್ಷಗಳಿಂದ ನೇತ್ರಾ ಜೊತೆ ಜೀವನ ನಡೆಸುತ್ತಿದ್ದ ಸ್ವಾಮಿರಾಜ್. ಎರಡು ವರ್ಷದ ಹಿಂದೆ ಮನೆ ಕಟ್ಟಿಸಿ ಅದಕ್ಕೆ ತನ್ನ ಸೆಕೆಂಡ್ ಸಂಸಾರವನ್ನು ತಂದಿರಿಸಿ ಅಧಿಕೃತ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸ್ವಾಮಿ ರಾಜ.

ಸ್ವಾಮಿ ರಾಜ್ ತನ್ನ ತಂದೆಯ ಕಾಲದಿಂದಲೂ ಒಳ್ಳೆ ಸ್ಥಿತಿವಂತರಾಗಿದ್ದರಂತೆ. ಮೊನ್ನೆ ಇಂತಹ ಸ್ಥಿತಿವಂತ ಸ್ವಾಮಿ ರಾಜ್ ಏಕಾಏಕಿ ಕೊಲೆಯಾಗಿ ಹೋಗಿದ್ದ. ಆಶ್ಚರ್ಯವೆಂಬಂತೆ, ಆತನ ಎರಡನೆಯ ಪತ್ನಿಯೇ ಆತನನ್ನು ಕೊಲೆ ಮಾಡಿದ್ದಳು ! ಅದಕ್ಕಿಂತ ಹೆಚ್ಚಿನ ಆಸ್ಚರ್ಯ ಏನೆಂದರೆ ಯಾಕೆ ಕೊಲೆ ಮಾಡಿದೆ ಎಂದು ಆಕೆ ಪೋಲೀಸರಿಗೆ ನೀಡಿದ ಹೇಳಿಕೆ !

ಗಂಡನನ್ನು ಚುಚ್ಚಿ ಕೊಂದ ಆಕರ್ ಸೀದಾ ಪೊಲೀಸ್ ಠಾಣೆ ಸೇರಿಕೊಂಡಿದ್ದಳು. ತಾನೇ ಹೋಗಿ ಸರಂಡರ್ ಆಗಿದ್ದಳು. ಅಲ್ಲಿ ಆಕೆ ಹೇಳಿದ ಕಾರಣ ಕೇಳಿದವರು ಶಾಕ್ ಆಗಿದ್ದರು. ತನ್ನ ಗಂಡ ತನ್ನನ್ನು ಆತನ ಸಂಬಂಧಿಕರ ಜತೆ ಮಲಗಿ ಮಜಾ ಮಾಡಲು ಹೇಳುತ್ತಿದ್ದ. ಅದರಿಂದ ಬೇಸತ್ತು ನಾನು ಆತನನ್ನು ಮುಗಿಸಿದೆ ಎಂದಿದ್ದಾಳೆ ಆ ಸೆಕೆಂಡ್ ಸೆಟ್ ಅಫ್ ರಾಣಿ ನೇತ್ರಾ !

ಆದರೆ ಯಾರೂ ಆಕೆಯ ಮಾತು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಹತ್ತು ವರ್ಷ ಜೊತೆಗೆ ಇದ್ದವ, ಈಗ ಬೇರೆಯವರ ಜತೆ ಮಲಗಲು ಹೇಳ್ತಿದ್ದಾನಾ ಎಂಬ ಅನುಮಾನ ಪೊಲೀಸರಿಗೂ ಬಂದಿದೆ.
ಇದರ ಮಧ್ಯೆ, ಅವರ ಆಸ್ತಿ ಕಬಳಿಸಲೆಂದೇ ಆರೋಪಿ ನೇತ್ರಾ ಸ್ವಾಮಿರಾಜ್‌ನ ಮದುವೆ ಆಗಿದ್ದಳು ಮತ್ತು ಆಸ್ತಿಗಾಗಿ ಈ ಕೊಲೆಯನ್ನ ಮಾಡಿದ್ದಾಳೆಂದು ಮೊದಲ ಪತ್ನಿ ಸತ್ಯಕುಮಾರಿ ಆರೋಪಿಸಿದ್ದಾಳೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾಳೆ. ಸದ್ಯ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.