Home News ಮದುವೆಯಾಗಿ ಎರಡು ಮಕ್ಕಳಿದ್ದರೂ 17 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ 45 ರ ಮಹಿಳೆ!!ಗಂಡನಿಂದ...

ಮದುವೆಯಾಗಿ ಎರಡು ಮಕ್ಕಳಿದ್ದರೂ 17 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ 45 ರ ಮಹಿಳೆ!!ಗಂಡನಿಂದ ಬೇರಾದ ಖುಷಿಯಲ್ಲಿ ಸ್ನೇಹಿತರಿಗೆಲ್ಲಾ ಎಣ್ಣೆ ಪಾರ್ಟಿ

Hindu neighbor gifts plot of land

Hindu neighbour gifts land to Muslim journalist

ಮದುವೆಯಾಗುವ ಖುಷಿಯಲ್ಲಿ ಅನೇಕರು ತಮ್ಮ ಒಡನಾಡಿಗಳಿಗೆ, ಸ್ನೇಹಿತರಿಗೆ ಪಾನೀಯ, ಡ್ರಿಂಕ್ಸ್ ಪಾರ್ಟಿ ಕೊಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನಿಂದ ವಿಚ್ಛೆದನ ಪಡೆದ ಖುಷಿಯಲ್ಲಿ ತನ್ನೆಲ್ಲ ಬಂಧು ಮಿತ್ರರಿಗೆ ಎಣ್ಣೆ ಪಾರ್ಟಿ ಕೊಟ್ಟು ಭಾರೀ ಸುದ್ದಿಯಲ್ಲಿದ್ದಾರೆ.ಹಾಗಾದರೆ ಆ ಮಹಿಳೆ ಯಾರು,ಯಾಕಾಗಿ ಆಕೆ ಅಷ್ಟೂ ಖುಷಿಯಲ್ಲಿದ್ದಾಳೆ ಎಂಬುವುದಕ್ಕೆ ಈ ಸ್ಟೋರಿ ನೋಡಿ.

ಸೋನಿಯಾ ಗುಪ್ತ ಎಂಬ 45 ವರ್ಷದ ಭಾರತೀಯ ಮೂಲದ ಮಹಿಳೆ,2003 ರಲ್ಲಿ ಮದುವೆಯಾಗಿದ್ದು,ಆ ಬಳಿಕ ಗಂಡನೊಂದಿಗೆ ಸಂಬಂಧ ಸರಿ ಹೋಗುತ್ತಿರಲಿಲ್ಲ.ಭಾರತದಿಂದ ಗಂಡನೊಂದಿಗೆ ವಿದೇಶಕ್ಕೆ ತೆರಳಿದ ಮಹಿಳೆ ಎರಡು ಮಕ್ಕಳಿಗೆ ಜನ್ಮ ನೀಡಿದರೂ ಗಂಡನಿಂದ ವಿಚ್ಛೆದನ ಪಡೆಯಲು ಬಯಸಿದ್ದಾರೆ.

ಸುಮಾರು 17 ವರ್ಷಗಳ ದಾಂಪತ್ಯ ಜೀವನದಿಂದ ಹೊರಬಂದ ಮಹಿಳೆ,ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು,ಈಗ ನಾನು ಆರಾಮವಾಗಿದ್ದೇನೆ,ಸ್ವತಂತ್ರಳಾಗಿದ್ದೇನೆ,ಜೈಲಿನಿಂದ ಹೊರಬಂದಂತೆ ಆಗುತ್ತಿದೆ ಎಂದು ತನ್ನ ಸ್ನೇಹಿತರಿಗೆಲ್ಲಾ ಎಣ್ಣೆ ಪಾರ್ಟಿ ಆಯೋಜನೆ ನಡೆಸಿದ್ದಾರೆ.ಸದ್ಯ ಈಕೆಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಗುತ್ತಿದೆ.