ನೀವು ಬಳಸುವ ಮೊಬೈಲ್ ಫೋನ್ ಆರೋಗ್ಯದ ದೃಷ್ಟಿಯಲ್ಲಿ ಸೂಕ್ತವೇ ಅಥವಾ ಇಲ್ಲವೇ ಎಂಬ ಗೊಂದಲ ನಿಮ್ಮಲ್ಲಿದೆಯೇ!!?|ಹಾಗಿದ್ದರೆ ಈ ಪಟ್ಟಿಯಲ್ಲಿ ಅತೀ ಹೆಚ್ಚು ರೇಡಿಯೇಷನ್ ಹೊರಸೂಸುವ ಫೋನ್ ಗಳಲ್ಲಿ ನೀವು ಬಳಸುವ ಫೋನ್ ಇದ್ದರೆ ಈಗಲೇ ಬದಲಾಯಿಸಿಕೊಳ್ಳಿ

ಇತ್ತೀಚೆಗೆ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಅತಿಯಾಗಿಯೇ ಇದ್ದು,ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ಜೊತೆಗೂ ಮೊಬೈಲ್ ಇದೆ. ಇವಾಗ ಅಂತೂ ಮಕ್ಕಳು ಆನ್ಲೈನ್ ಕ್ಲಾಸ್ ಎಂದು ಮೊಬೈಲ್ ಮುಂದೆಯೇ ಹಾಜರಿರುತ್ತಾರೆ.

ಉಪಯೋಗದ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಅನುಗುಣವಾಗಿ ಪ್ರತಿ ವಾರ ನೂರಾರು ಹೊಸ ಹೊಸ ಫೋನ್​ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ. ಮುಂಚೆಗೆಲ್ಲಾ ಹೋಲಿಸಿದರೆ, ಕಡಿಮೆ ಮೊತ್ತಕ್ಕೆ ಉತ್ತಮ ಫೀಚರ್​ ಇರುವ ಫೋನ್​ಗಳು ಸಿಗುತ್ತಿವೆ.

ಆದರೆ ಮೊಬೈಲ್ ಹಿಡಿಯುವ ಮುಂಚೆ ಆರೋಗ್ಯದ ದೃಷ್ಟಿಯಲ್ಲಿ ಚಿಂತನೆ ಮಾಡುವುದು ಸೂಕ್ತವಾಗಿದೆ. ಯಾಕೆಂದರೆ ನಾವು ಬಳಸುವ ಮೊಬೈಲ್​ನ ರೇಡಿಯೇಷನ್​ ನಿಂದಾಗಿ ನಮ್ಮ ಜೀವಕ್ಕೆ ಕುತ್ತು ತರಬಹುದು.

ಇದೀಗ ಅತಿ ಹೆಚ್ಚು ಹಾನಿಕಾರಕ ರೇಡಿಯೇಷನ್ ಹೊರಸೂಸುವ ಸ್ಮಾರ್ಟ್​ಫೋನ್​ಗಳ ಪಟ್ಟಿ ಬಿಡುಗಡೆಯಾಗಿದ್ದು,ಅಪಾಯಕಾರಿ ಎನ್ನಲಾಗಿರುವ ಈ ಫೋನ್​ಗಳಲ್ಲಿ ಸಂಭಾಷಣೆ ನಡೆಸುವ ವೇಳೆ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಉತ್ಪತಿಯಾಗುತ್ತವೆ. ಇದು ನಮ್ಮ ಮೆದುಳಿನ ಹಾಗೂ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಇಂತಹ ತೊಂದರೆಗಳಿಂದ ದೂರ ಇರಬೇಕಾದರೆ ನಾವು ಅಂತಹ ಟಾಪ್​ 10 ಡೇಂಜರಸ್ ಫೋನ್​ಗಳು ಯಾವುವು ಎಂಬುದನ್ನು ಮೊದಲು ತಿಳಿದುಕೊಳ್ಳೋಣ.

1: ಅತೀ ಹೆಚ್ಚು ರೇಡಿಯೇಷನ್ ಹೊರಸೂಸುವ ಮೊಬೈಲ್​ಗಳ ಪಟ್ಟಿಯಲ್ಲಿ ಮೊದೆರೆಡಲು ಸ್ಥಾನವನ್ನು ಶಿಯೋಮಿ ಕಂಪೆನಿ ಪಡೆದುಕೊಂಡಿದೆ. ಶಿಯೋಮಿ A1 ಸ್ಮಾರ್ಟ್​ಫೋನ್ 1.75 watts/ಕಿಲೋಗ್ರಾಂ ರೇಡಿಯೇಷನ್ ಉತ್ಪತಿ ಮಾಡುತ್ತದೆ.

2: 2ನೇ ಸ್ಥಾನದಲ್ಲಿರುವ ಶಿಯೋಮಿ ಡೇಂಜರಸ್​ ಫೋನ್ ಅಂದರೆ ಶಿಯೋಮಿ ಮ್ಯಾಕ್ಸ್​ 3. ಈ ಸ್ಮಾರ್ಟ್​ಫೋನ್ 1.58 Watts/ಕಿಲೋಗ್ರಾಂ ವಿಕಿರಣವನ್ನು ಹೊರಸೂಸುತ್ತವೆ.

3: ಅತಿ ಹೆಚ್ಚು ವಿಕಿರಣ ಹೊಂದಿರುವ 3ನೇ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ನ 6T ಮೊಬೈಲ್. ಈ ಸ್ಮಾರ್ಟ್​ಫೋನ್​ನಿಂದ 1.55 Watts/ಕಿಲೋಗ್ರಾಂ ವಿಕಿರಣ ಹೊರಬರುತ್ತದೆ.

4: 4ನೇ ಸ್ಥಾನ ಪಡೆದಿರುವುದು HTC ಕಂಪೆನಿಯ U12 ಲೈಫ್. ಈ ಮೊಬೈಲ್​​ನಿಂದ 1.48 W/kg ರೇಡಿಯೇಷನ್ ಬರುತ್ತದೆ.

5: ಅಷ್ಟೇ ಅಲ್ಲದೆ ಅತಿ ಹೆಚ್ಚು ರೇಡಿಯೇಷನ್ ಹೊಂದಿರುವ ಮೊಬೈಲ್​ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲೂ ಶಿಯೋಮಿ ಸ್ಮಾರ್ಟ್​ಫೋನ್ ಕಾಣಿಸಿಕೊಂಡಿದ್ದು,ಶಿಯೋಮಿ ಮಿಕ್ಸ್ -3 1.45 W/kg ರೇಡಿಯೇಷನ್ ಉತ್ಪಾದಿಸುತ್ತದೆ.

6: ಆರನೇ ಸ್ಥಾನದಲ್ಲಿ ಸೋನಿ ಕಂಪೆನಿಯ ಎಕ್ಸ್​ಪೀರಿಯಾ XA2 ಸ್ಮಾರ್ಟ್​ಫೋನ್ ಇದ್ದು, ಇದರಿಂದ ​ 1.41 W/kg ವಿಕಿರಣ ಹೊರ ಬರುತ್ತದ

7: ಡೇಂಜರಸ್​ ಮೊಬೈಲ್‌ಗಳ ಪಟ್ಟಿಯಲ್ಲಿ ಗೂಗಲ್ ಪಿಕ್ಸೆಲ್ 3XL ಏಳನೇ ಸ್ಥಾನದಲ್ಲಿದೆ. ಈ ಸ್ಮಾರ್ಟ್​ಫೋನಿಂದ 1.39 W/kg ವಿಕಿರಣ ಹೊರಬರುತ್ತವೆ.

8: ಎಂಟನೇ ಅಪಾಯಕಾರಿ ಮೊಬೈಲ್ ಎಂಬ ಹೆಗ್ಗಳಿಕೆ ಕೂಡ ಶಿಯೋಮಿ ಕಂಪೆನಿ ಪಾಲಾಗಿದ್ದು, ಶಿಯೋಮಿ 9/9SE ಮೊಬೈಲ್​ಗಳು 1.39 W/kg ರೇಡಿಯೇಷನ್ ಉತ್ಪಾದಿಸುತ್ತವೆ.

9: ಸ್ಮಾರ್ಟ್​ಫೋನ್​ಗಳ ದಿಗ್ಗಜ ಎಂದು ಕರೆಸಿಕೊಂಡಿರುವ ಆ್ಯಪಲ್ ಕಂಪೆನಿಯ ಮೊಬೈಲ್​ ಕೂಡ ಅಪಾಯಕಾರಿ ಎಂಬುದು ಪತ್ತೆಯಾಗಿದೆ. ಐಫೋನ್ 7 ಮೊಬೈಲ್ 1.38 W/kg ರೇಡಿಯೇಷನ್ ಉತ್ಪಾದಿಸುವ ಮೂಲಕ ಅಪಾಯಕಾರಿ ಫೋನ್​ಗಳ ಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿದೆ.

10: ಇನ್ನು ಟಾಪ್​ 10ನ ಅಂತ್ಯದಲ್ಲಿ ಸೋನಿ ಕಂಪೆನಿಯ ಎಕ್ಸ್​ಪಿರಿಯಾ XZ1 ಕಾಂಪ್ಯಾಕ್ಟ್ ಸ್ಮಾರ್ಟ್​ಫೋನ್ ಸ್ಥಾನ ಪಡೆದಿದ್ದು, ಇದರಿಂದ 1.36 W/kg ವಿಕಿರಣವಾಗಿ ಹೊರಹೊಮ್ಮುತ್ತದೆ ಎಂದು ತಿಳಿಸಲಾಗಿದೆ.

ಇದು ಅತಿ ಹೆಚ್ಚು ಹಾನಿಕಾರಕ ರೇಡಿಯೇಷನ್ ಹೊರಸೂಸುವ ಸ್ಮಾರ್ಟ್​ಫೋನ್​ಗಳ ಪಟ್ಟಿಯಾಗಿದ್ದು, ಈ ಪಟ್ಟಿಯಲ್ಲಿ ನಿಮ್ಮ ಸ್ಮಾರ್ಟ್​ಫೋನ್​ ಇದ್ದರೆ ತಕ್ಷಣವೇ ಬದಲಾಯಿಸುವುದು ಉತ್ತಮವಾಗಿದೆ. ಇಲ್ಲದಿದ್ದರೆ ಬ್ರೈನ್ ಟ್ಯೂಮರ್​ನಂತಹ ಮಾರಕ ಕಾಯಿಲೆಗಳಿಗೆ ನೀವು ಬಳಸುವ ಸ್ಮಾರ್ಟ್​ಫೋನ್​ಗಳು ಕಾರಣವಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

Leave A Reply

Your email address will not be published.