ದೆಹಲಿ ಹಿಂಸಾಚಾರ | ಸಂಘ ಪರಿವಾರದ ಪಾತ್ರ-ಎಸ್.ಡಿ.ಪಿ.ಐ

ಸವಣರು: ದೆಹಲಿಯಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಎಸ್.ಡಿ.ಪಿ.ಐ ಸವಣೂರು ವಲಯದ ವತಿಯಿಂದ ಸವಣೂರು ಜಂಕ್ಷನ್‌ನಲ್ಲಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಎಸ್.ಡಿ.ಪಿ.ಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಬಶೀರ್ ಕೂರ್ನಡ್ಕ ಮಾತನಾಡಿ ದೆಹಲಿ ಹಿಂಸಾಚಾರ ಪೂರ್ವಯೋಜಿತ ಕೃತ್ಯವಾಗಿದ್ದು ಇದರಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಪಾತ್ರ ಎದ್ದು ಕಾಣುತ್ತಿದೆ, ಫ್ಯಾಶಿಸ್ಟ್ ಶಕ್ತಿಗಳು ಎಷ್ಟೇ ತಂತ್ರ ಹೂಡಿದರೂ ಅದರ ವಿರುದ್ಧ ಕಾನೂನಾತ್ಮಕ ಪ್ರತಿತಂತ್ರ ಹೂಡಲು ನಾವು ಸಿದ್ಧರಿದ್ದೇವೆ ಎಂದರು.

ದೆಹಲಿಯಲ್ಲಿ ಅಮಾಯಕ ಮುಗ್ದ ಜನರನ್ನು ಬಲಿ ಪಡೆದು ವಿಜ್ರಂಭಿಸಿದ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಜನತೆ ಜಾತಿ, ಧರ್ಮಗಳನ್ನು ಬದಿಗೊತ್ತಿ ಒಗ್ಗಟ್ಟಿನಲ್ಲಿ ಹೋರಾಟ ನಡೆಸಬೇಕಾಗಿದೆ, ಎಸ್.ಡಿ.ಪಿ.ಐ ಪಕ್ಷದ ಕಾರ್ಯಕರ್ತರು ತಮ್ಮ ಜೀವ ಇರುವ ವರೆಗೂ ಫ್ಯಾಶಿಸ್ಟ್ ಶಕ್ತಿಗಳೊಂದಿಗೆ ರಾಜಿ ಇಲ್ಲದ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಎಸ್.ಡಿ.ಪಿ.ಐ ಸವಣೂರು ವಲಯದ ಉಪಾಧ್ಯಕ್ಷ ಸುಲೈಮಾನ್ ಪಳ್ಳತ್ತಮೂಲೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಣೆಮಜಲು ಜುಮಾ ಮಸೀದಿಯ ಆಡಳಿತ ಸಮಿತಿ ಸದಸ್ಯ ಯೂಸುಫ್ ಹಾಜಿ ಬೇರಿಕೆ, ಪಿ.ಎಫ್.ಐ ಸವಣೂರು ಅಧ್ಯಕ್ಷ ಇರ್ಷಾದ್ ಸರ್ವೆ ಉಪಸ್ಥಿತರಿದ್ದರು. ಎಸ್.ಡಿ.ಪಿ.ಐ ಸವಣೂರು ವಲಯ ಪ್ರ.ಕಾರ್ಯದರ್ಶಿ ಎಂ.ಎಸ್ ರಫೀಕ್ ಸ್ವಾಗತಿಸಿದರು. ಸವಣೂರು ಪರಿಸರದ ನೂರಾರು ಮಂದಿ ಪಾಲ್ಗೊಂಡಿದ್ದರು.

Leave A Reply

Your email address will not be published.