ಪುತ್ತೂರಿನ ಸುಹಾಸ್ ಗೆ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನ ಈಜು ಸ್ಪರ್ಧೆಯಲ್ಲಿ ಎರಡು ಬೆಳ್ಳಿ
ಪುತ್ತೂರು ಈಜು ಕ್ಲಬ್ ಹೆಮ್ಮೆ ಪಟ್ಟುಕೊಳ್ಳುವಂತಹ ಸಾಧನೆಯನ್ನು ಸದಸ್ಯರಾದ ಸುಹಾಸ್ ಪಿ ಎಂ ಅವರು ಮಾಡಿದ್ದಾರೆ. ಅಷ್ಟೇ ಅಲ್ಲ ದಕ್ಷಿಣ ಕನ್ನಡ ಜಿಲ್ಲೆ ಹೆಮ್ಮೆಪಟ್ಟು ಅಂತಹ ಸಾಧನೆಯನ್ನು ಇವರು ಮಾಡಿದ್ದಾರೆ.
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಚೊಚ್ಚಲ ಬಾರಿಗೆ ಒಡಿಶಾದ ಭುವನೇಶ್ವರದಲ್ಲಿ ಇತ್ತೀಚೆಗೆ ನಡೆದಿತ್ತು. ಈ ಕ್ರೀಡಾಕೂಟದ ಈಜು ವಿಭಾಗದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ್ದ ಪುತ್ತೂರಿನ ಈ ಹೆಮ್ಮೆಯ ಕುವರ ಎರಡು ಬೆಳ್ಳಿಯ ಪದಕವನ್ನು ತನ್ನ ಕೊರಳಿಗೆ ಹಾಕಿಕೊಂಡು ಬೀಗುತ್ತಿದ್ದಾರೆ.
ಇದು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವಾಗಿದ್ದು ಇದನ್ನು ಭಾರತ ಸರಕಾರ ಆಯೋಜಿಸಿತ್ತು. 400 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಪಡೆದ ಇವರು, 200 ಮೀಟರ್ ಬಟರ್ಫ್ಲೈ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡು ಬಂದಿದ್ದಾರೆ.
ಪುತ್ತೂರಿನ ಶಿವರಾಮ ಕಾರಂತ ಬಾಲಭವನದಲ್ಲಿನ ಈಜುಕೊಳದಲ್ಲಿ ಪಾರ್ಥ ವಾರಣಾಸಿ, ನಿರೂಪ್, ರೋಹಿತ್ ಮತ್ತು ಯಜ್ನೇಶ್ ಅವರ ಕೈಯಲ್ಲಿ ತರಬೇತು ಪಡೆದಿದ್ದಾರೆ.
ಸುಹಾಸ್ ಬಿಎಂ ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ತೃತೀಯ ವರ್ಷದ
ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದಾರೆ. ಅವ ರು ಡಾ. ಗಣೇಶ್ ಬಾಬು ಮತ್ತು ಡಾ. ಗಾಯತ್ರಿ ಮಂಚಿಯವರ ಪುತ್ರ.