ಪುತ್ತೂರೊಡೆಯನ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಉತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.21ರಂದು ಭಕ್ತಿ ಸಡಗರದ ಮಹಾಶಿವರಾತ್ರಿ ಉತ್ಸವ ನಡೆಯಿತು. ಬೆಳಗ್ಗಿನಿಂದ ರಾತ್ರಿಯ ತನಕ ಭಕ್ತಸಾಗರ ಶಿವನ ಧ್ಯಾನದಲ್ಲೇ ತೊಡಗಿತ್ತು.

ಬೆಳಿಗ್ಗೆ ವಿವಿಧ ಭಜನಾ ಮಂಡಳಿಗಳ ಭಜನಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 9.30ರಿಂದ ಶತರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆಯಿತು.

ರಾತ್ರಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ದೇವರ ಬಲಿ ಉತ್ಸವ, ತೆಪ್ಪೋತ್ಸವ ನಡೆಯಿತು. ನಿರ್ಮಾಲ್ಯ ಪೂಜೆಯ ಬಳಿಕ ಏಕದಶಾರುದ್ರಭಿಷೇಕ,ರಾತ್ರಿ ಪೂಜೆ,ನಿತ್ಯ ಬಲಿ ನಡೆಯಿತು.

ದೇವಸ್ಥಾನದ ಒಳಾಂಗಣ ಗೋಪುರದಲ್ಲಿ ಸೂರ್ಯೋದಯದವರೆಗೆ ಭಜನಾ ಕಾರ್ಯಕ್ರಮ ನಡೆಯಿತು. ಶಿವರಾತ್ರಿ ಯ ಜಾಗರಣೆಯಲ್ಲಿ ಸಹಸ್ರಾರು ಭಕ್ತರು ಓಂ ನಮಃ ಶಿವಾಯ ಶಿವ ಪಂಚಾಕ್ಷರಿ ಮಂತ್ರ ಪಠಣ ನಡೆಯಿತು.

ದೇವಳದ ಆಡಳಿತಾಧಿಕಾರಿ ಲೋಕೇಶ್ ಸಿ,ಕಾರ್ಯ ನಿರ್ವಹಣಾಧಿಕಾರಿ‌ ನವೀನ್ ಕುಮಾರ್ ಭಂಡಾರಿ ಎಚ್ ಸೇರಿದಂತೆ ಸಾವಿರಾರು ಮಂದಿ ಭಕ್ತರು ನೆರೆದಿದ್ದರು.

Leave A Reply

Your email address will not be published.