ಮಂಗಳೂರು ಭಾರೀ ಮಳೆಗೆ ಕುಸಿದ ತಡೆಗೋಡೆ | 13 ದ್ವಿಚಕ್ರ ವಾಹನಗಳು ಜಖಂ | ಸ್ಥಳದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ರಕ್ಷಿಸಿದನಾ ಸೃಷ್ಟಿಕರ್ತ ?!
ಮಂಗಳೂರಿನಲ್ಲಿ ತಡೆಗೋಡೆ ಕುಸಿದು,13ಕ್ಕೂ ಹೆಚ್ಚು ವಾಹನಗಳು ಜಖಂ ಗೊಂಡ ಘಟನೆ ನಿನ್ನೆ ಸಂಜೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆ ವಿವರ: ಮಂಗಳೂರು ಬಂದರ್ ನ ಬಳಿಯ ನಲಪಾಡ್ ಕುನಿಲ್ ಟವರ್ ಗೆ ಎಪಿಎಂಸಿ ಯಾರ್ಡ್ ನ ತಡೆಗೋಡೆ ಹೊಂದಿಕೊಂಡಿದ್ದು,ನಿನ್ನೆ ಸುರಿದ ಭಾರೀ ಮಳೆಗೆ ಎಪಿಎಂಸಿ ಯಾರ್ಡ್ ನ ತಡೆಗೋಡೆ ಕುಸಿದು ಬಿದ್ದಿದೆ.
ಅದೃಷ್ಟವೆಂಬಂತೆ ನಲಪಾಡ್ ಅಪಾರ್ಟ್ಮೆಂಟ್ ನಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳಿದ್ದು,ಸಂಜೆ ಹೊತ್ತಿಗೆ ಮಕ್ಕಳು ಹೊರಗಡೆ ಆಡುತ್ತಿರುತ್ತಿದ್ದರು.ಆದರೆ ನಿನ್ನೆಯ ಭಾರಿ ಮಳೆಗೆ ಮಕ್ಕಳು ಅಲ್ಲಿ ಆಟವಾಡುತ್ತಿರದ ಕಾರಣ ತಡೆಗೋಡೆ ಕುಸಿಯುವ ಸಂದರ್ಭ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.ತಡೆಗೋಡೆ ಕುಸಿದ ರಭಸಕ್ಕೆ ಅವಶೇಷಗಳು ಅಪಾರ್ಟ್ಮೆಂಟ್ ನ ಸುತ್ತಲೂ ಹಬ್ಬಿಕೊಂಡಿದ್ದು ಸುಮಾರು 13ಕ್ಕೂ ಹೆಚ್ಚು ವಾಹನಗಳು ಜಖಂ ಗೊಂಡಿದೆ.
ಕರಾವಳಿಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈ ಘಟನೆ ನಡೆದಿದ್ದು ಎಪಿಎಂಸಿಯ ತಡೆಗೋಡೆ ಶಿಥಿಲಗೊಂಡಿತ್ತು ಎಂದು ತಿಳಿದುಬಂದಿದೆ.
ಕುಸಿದ ಅವಶೇಷಗಳು ಕಟ್ಟಡದ ಹತ್ತಿರವಿರುವ ಬಾವಿಯೊಳಗೂ ಬಿದ್ದುದ್ದು, ಅದೇ ಬಾವಿಯ ನೀರು ಅಲ್ಲಿನ ನಿವಾಸಿಗಳು ಕುಡಿಯಲು ಉಪಯೋಗಿಸುತ್ತಿದ್ದುದರಿಂದ ಈಗ ಅದು ಕುಡಿಯಲು ಯೋಗ್ಯವಲ್ಲವಾಗಿದೆ.
ಎಪಿಎಂಸಿ ಸ್ಮಾರ್ಟ್ ಸಿಟಿ ಯ ಕಾಮಗಾರಿಗಳು ಬಿರುಸಿನಿಂದ ನಡೆಯುತ್ತಿದ್ದು, ಅದರ ಅವಶೇಷಗಳನ್ನು ಇಲ್ಲಿ ತಂದು ಸುರಿದ ಕಾರಣ, ತಡೆಗೋಡೆ ಕುಸಿದಿದೆ ಎಂಬ ಗಂಭೀರ ಆರೋಪವೂ ಕೇಳಿಬರುತ್ತಿದೆ.