ಉಡುಪಿ ಗಣಪತಿ ದೇವಸ್ಥಾನ ಕಟ್ಟಿಸಿದ ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್ ಫೇಬಿಯನ್ ನಜರತ್

ಉಡುಪಿ : ಭಗವಂತನ ಮೇಲಿನ ಭಕ್ತಿ ಸೀಮಾತೀತ,ಧರ್ಮಾತೀತ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.ಉಡುಪಿ ಜಿಲ್ಲೆಯ ಶಿರ್ವದಲ್ಲಿ ಕ್ರೈಸ್ತ ಉದ್ಯಮಿಯೊಬ್ರು ದೇವಸ್ಥಾನ ನಿರ್ಮಿಸುವ ಮೂಲಕ ಭಕ್ತಿ ಧರ್ಮಾತೀತ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ.
ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್ ಫೇಬಿಯನ್ ನಜರತ್ ಶಿರ್ವ ಮುಖ್ಯರಸ್ತೆಯ ಅಟ್ಟಿಂಜ ಕ್ರಾಸ್ ಬಳಿ ಕಟ್ಟಿಸಿ ಲೋಕಾರ್ಪಣೆಗೊಂಡ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಜೋತಿಷ ವಿದ್ವಾನ್ ಉಡುಪಿ ಕನ್ನರ್ಪಾಡಿ ವೇ|ಮೂ|ಸಂದೀಪ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ಬ್ರಹ್ಮಕಲಶವು ಜು.16ರ ಶುಕ್ರವಾರ ಸಂಪನ್ನಗೊಂಡಿದೆ.

ಶ್ರೀ ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಗಣಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಲಶಾಭಿಷೇಕ ನಡೆದು ಬಳಿಕ ಅನ್ನ ಸಂತರ್ಪಣೆ ನಡೆಯಿತು. ದೇವಸ್ಥಾನ ನಿರ್ಮಿಸಲು ಸಹಕರಿಸಿದ ವಾಸ್ತುಶಿಲ್ಪಿ ಎಂ. ಶ್ರೀನಾಗೇಶ್ ಹೆಗ್ಡೆ ದಂಪತಿ ಹಾಗೂ ಸತೀಶ್ ಶೆಟ್ಟಿ ಮಲ್ಲಾರ್ ಮತ್ತು ರತ್ನಾಕರ ಕುಕ್ಯಾನ್ ಅವರನ್ನು ಗ್ಯಾಬ್ರಿಯಲ್ ನಜರತ್ ಸಮ್ಮಾನಿಸಿದರು.
ಕಾರ್ಯಕ್ರಮಲ್ಲಿ ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ,ಸುಜ್ಲಾನ್ ಕಂಪೆನಿಯ ಅಶೋಕ್ ಶೆಟ್ಟಿ,ವಿ.ಸುಬ್ಬಯ್ಯ ಹೆಗ್ಡೆ,ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್,ಪಿಡಿಒ ಅನಂತಪದ್ಮನಾಭ ನಾಯಕ್, ಗ್ರಾಮಕರಣಿಕ ವಿಜಯ್, ಹಿರಿಯರಾದ ತಮ್ಮಣ್ಣ ಪೂಜಾರಿ,ವಿಠಲ ಅಂಚನ್,ಶ್ರೀನಿವಾಸ ಶೆಣೈ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾ.ಪಂ. ಸದಸ್ಯರು,ಭಕ್ತಾಧಿಗಳು ಉಪಸ್ಥಿತರಿದ್ದರು.