Home Crime Online scam: ಈ 5 ದೈನಂದಿನ ಹಗರಣಗಳು ನಿಮ್ಮನ್ನು ಬಲೆಗೆ ಬೀಳಿಸುತ್ತಿವೆ!

Online scam: ಈ 5 ದೈನಂದಿನ ಹಗರಣಗಳು ನಿಮ್ಮನ್ನು ಬಲೆಗೆ ಬೀಳಿಸುತ್ತಿವೆ!

Cyber Crime

Hindu neighbor gifts plot of land

Hindu neighbour gifts land to Muslim journalist

Online scam: ಅಪರಿಚಿತ ಫೋನ್ ಕರೆಗಳು, ವಾಟ್ಸಾಪ್ ಸಂದೇಶಗಳು ಅಥವಾ ನೀವು ತಿಳಿಯದೇ ಕ್ಲಿಕ್ ಮಾಡಿದ ನಕಲಿ ವೆಬ್‌ಸೈಟ್ ಲಿಂಕ್‌ಗಳ ಮೂಲಕ ಇಂದಿನ ವಂಚಕರು ನಿಮ್ಮ ವೈಯಕ್ತಿಕ ವಿವರಗಳನ್ನು ಮತ್ತು ನಿಮ್ಮಲ್ಲಿರುವ ಡಿಜಿಟಲ್ ಮನಿ ಯನ್ನು ಕದಿಯಲು ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ.

ಅದಲ್ಲದೆ ಇಂದಿನ ಐದು ಸಾಮಾನ್ಯ ವಂಚನೆಗಳು ಮತ್ತು ಅವುಗಳಿಂದ ಪಾರಾಗುವ ಸರಳ ಮಾರ್ಗಗಳ ಮಾಹಿತಿ ಇಲ್ಲಿದೆ:

1. ಯುಪಿಐ (UPI) ಮತ್ತು ಒಟಿಪಿ (OTP) ವಂಚನೆಗಳು

ಬ್ಯಾಂಕ್ಕ್ ಅಧಿಕಾರಿಗಳು, ಗ್ರಾಹಕ ಸೇವಾ ಪ್ರತಿನಿಧಿಗಳು ಅಥವಾ ಸಂಕಷ್ಟದಲ್ಲಿರುವ ಸ್ನೇಹಿತನಂತೆ (ನಕಲಿ ಧ್ವನಿಯ ಮೂಲಕ) ನಟಿಸಿ ವಂಚಕರು ನಿಮಗೆ ಕರೆ ಮಾಡಬಹುದು. ನಿಮ್ಮ ಒಟಿಪಿ, ಯುಪಿಐ ಪಿನ್ ಕೇಳಬಹುದು ಅಥವಾ ನಿಮ್ಮ ಸ್ಕ್ರೀನ್ ಶೇರ್ ಮಾಡುವಂತೆ ಕೇಳಬಹುದು. ನೀವು ಒಮ್ಮೆ ಒಟಿಪಿ ನೀಡಿದರೆ ಅಥವಾ ಪೇಮೆಂಟ್ ಅಪ್ರೂವ್ ಮಾಡಿದರೆ ನಿಮ್ಮ ಹಣ ಮಾಯವಾಗುತ್ತದೆ.

2. ನಕಲಿ ಉದ್ಯೋಗ ಮತ್ತು ವರ್ಕ್-ಫ್ರಮ್-ಹೋಮ್ ಆಮಿಷ

ವಾಟ್ಸಾಪ್ ಅಥವಾ ಟೆಲಿಗ್ರಾಮ್‌ನಲ್ಲಿ ಕಡಿಮೆ ಕೆಲಸ, ಹೆಚ್ಚು ಸಂಬಳದ ಆಮಿಷದ ಜಾಹೀರಾತುಗಳು ಕಾಣಸಿಗುತ್ತವೆ. ಆದರೆ ಕೆಲಸ ನೀಡುವ ಮೊದಲು ನೋಂದಣಿ ಶುಲ್ಕ ಅಥವಾ ತರಬೇತಿ ಶುಲ್ಕದ ಹೆಸರಿನಲ್ಲಿ ಹಣ ಕೇಳುತ್ತಾರೆ. ಆರಂಭದಲ್ಲಿ ನಂಬಿಕೆ ಹುಟ್ಟಿಸಲು ಸ್ವಲ್ಪ ಹಣ ನೀಡಿ, ನಂತರ ನೀವು ದೊಡ್ಡ ಮೊತ್ತ ಕಳುಹಿಸಿದ ತಕ್ಷಣ ಕಾಣೆಯಾಗುತ್ತಾರೆ.

3. ನಕಲಿ ಗ್ರಾಹಕ ಸೇವಾ ಕೇಂದ್ರದ (Customer Care) ಸಂಖ್ಯೆಗಳು

ನಮಗೆ ಯಾವುದಾದರೂ ಸಮಸ್ಯೆಯಾದಾಗ ಗೂಗಲ್‌ನಲ್ಲಿ ಗ್ರಾಹಕ ಸೇವಾ ಸಂಖ್ಯೆ ಹುಡುಕುತ್ತೇವೆ. ಅಲ್ಲಿ ಸಿಗುವ ನಕಲಿ ಸಂಖ್ಯೆಗೆ ಕರೆ ಮಾಡಿದಾಗ, ನಿಮ್ಮ ಸಮಸ್ಯೆ ಬಗೆಹರಿಸಲು AnyDesk ಅಥವಾ TeamViewer ನಂತಹ ಆಪ್ ಇನ್‌ಸ್ಟಾಲ್ ಮಾಡಲು ಅವರು ಹೇಳುತ್ತಾರೆ. ಹೀಗೆ ಮಾಡಿದರೆ ಅವರು ನಿಮ್ಮ ಫೋನ್ ಅಥವಾ ಕಂಪ್ಯೂಟರ್ ಅನ್ನು ನಿಯಂತ್ರಿಸಿ ಹಣ ಕದಿಯುತ್ತಾರೆ.

4. ಲಾಟರಿ, ಬಹುಮಾನ ಮತ್ತು ಗಿಫ್ಟ್ ವಂಚನೆಗಳು

“ಅಭಿನಂದನೆಗಳು! ನೀವು ಹೊಸ ಫೋನ್ ಅಥವಾ ಲಾಟರಿ ಗೆದ್ದಿದ್ದೀರಿ” ಎಂಬ ಸಂದೇಶಗಳು ಬರುತ್ತವೆ. ಅದನ್ನು ಪಡೆಯಲು ಸಣ್ಣ ಮೊತ್ತದ “ಪ್ರೊಸೆಸಿಂಗ್ ಫೀ” ಪಾವತಿಸಲು ಕೇಳುತ್ತಾರೆ. ನೀವು ಹಣ ಪಾವತಿಸಿದ ನಂತರ ಯಾವುದೇ ಬಹುಮಾನ ಬರುವುದಿಲ್ಲ.

5. ನಕಲಿ ಕೆವೈಸಿ (KYC) ಮತ್ತು ಸಿಮ್ ಬ್ಲಾಕಿಂಗ್

“ನಿಮ್ಮ ಕೆವೈಸಿ ಅಪ್‌ಡೇಟ್ ಮಾಡದಿದ್ದರೆ ಬ್ಯಾಂಕ್ ಖಾತೆ ಅಥವಾ ಸಿಮ್ ಕಾರ್ಡ್ ಬ್ಲಾಕ್ ಆಗುತ್ತದೆ” ಎಂಬ ತುರ್ತು ಸಂದೇಶಗಳನ್ನು ಕಳುಹಿಸುತ್ತಾರೆ. ಗಾಬರಿಯಾದ ಜನರು ಆ ಸಂದೇಶದಲ್ಲಿರುವ ಲಿಂಕ್ ಕ್ಲಿಕ್ ಮಾಡಿ ಮಾಹಿತಿ ನೀಡಿ ಮೋಸ ಹೋಗುವ ಸಾಧ್ಯತೆ ಇದೆ.