ಬಂಟ್ವಾಳ: ತಾಳಿ ಕಟ್ಟುವ ಶುಭ ವೇಳೆ ಚಳ್ಳೆಹಣ್ಣು ಕೊಟ್ಟು ಯುವತಿ ಪರಾರಿ!

ಬಂಟ್ವಾಳ: ತಾಳಿ ಕಟ್ಟುವ ಶುಭ ವೇಳೆ ದಿನವೇ ಯುವತಿ ಓರ್ವಳು ನಾಪತ್ತೆಯಾಗಿದ್ದಾಳೆ. ಬಿ.ಸಿ.ರೋಡಿನ ಪಲ್ಲಮಜಲಿನ ಯುವತಿಯೋರ್ವಳು ತನ್ನ ಮದುವೆಯ ದಿನವೇ ಮುಂಜಾನೆ ನಾಪತ್ತೆಯಾಗಿದ್ದಾಳೆ.
ಪಲ್ಲಮಜಲು ನಿವಾಸಿ ಅಶ್ಚಿಯ (21) ನಾಪತ್ತೆಯಾದವರು.

ಮಂಗಳೂರಿನ ಯುವಕನೊಂದಿಗೆ ಡಿ. 14ರಂದು ಆಕೆಯ ವಿವಾಹವು ತೊಕ್ಕೊಟ್ಟಿನ ಸಭಾಂಗಣದಲ್ಲಿ ನಡೆಯಬೇಕಿತ್ತು. ಮುಂಜಾನೆ 3.30ರ ಸುಮಾರಿಗೆ ಆಕೆ ಮಲಗಿರುವುದನ್ನು ಮನೆಮಂದಿ ಕಂಡಿದ್ದರು. ಆದರೆ ಬೆಳಿಗ್ಗೆ 4.30ರ ಸುಮಾರಿಗೆ ನೋಡಿದಾಗ ನಾಪತ್ತೆಯಾಗಿದ್ದಳು. ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ ಎಂದು ಸಹೋದರ ಅರ್ಶದ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಗಾಗಿ ಶೋಧ ನಡೆಸುತ್ತಿದ್ದಾರೆ.
ವರನ ಕಡೆಯಿಂದಲೂ ದೂರು ಆಕೆಯ ಜತೆ ಮದುವೆ ನಿಗದಿಯಾಗಿದ್ದ ವರನ ಮನೆಯವರು ಕೂಡ ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವರ ಆಕೆಗೆ ನೀಡಿದ್ದ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Comments are closed.