Home News Maruti Suzuki : ಪ್ರತಿ ತಿಂಗಳು 1,999 ಇಎಂಐ ಕಟ್ಟಿ – ಹೊಸ ಮಾರುತಿ ಕಾರನ್ನು...

Maruti Suzuki : ಪ್ರತಿ ತಿಂಗಳು 1,999 ಇಎಂಐ ಕಟ್ಟಿ – ಹೊಸ ಮಾರುತಿ ಕಾರನ್ನು ಮನೆಗೆ ತನ್ನಿ

Hindu neighbor gifts plot of land

Hindu neighbour gifts land to Muslim journalist

Maruti Suzuki : ಭಾರತದ ಅತಿ ದೊಡ್ಡ ಅಟೋಮೊಬೈಲ್ ಕಂಪನಿಯಾದ ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಒಂದನ್ನು ನೀಡಿದ್ದು ಅತಿ ಕಡಿಮೆ ಬೆಲೆಗೆ ಕಾರನ್ನು ಮಾರಾಟ ಮಾಡಲು ಮುಂದಾಗಿದೆ. ಇದರ ಮುಖೇನ ನೀವು ಅತಿ ಕಡಿಮೆ ಬೆಲೆಗೆ ಇಎಂಐ ಕಟ್ಟಿ ಹೊಸ ಕಾರನ್ನು ಮನೆಗೆ ತರಬಹುದಾಗಿದೆ.

ಹೌದು, ಮಾರುತಿ ಸುಸುಕಿ ತಂದ ಹೊಸ ಯೋಜನೆಯಡಿಯಲ್ಲಿ ಗ್ರಾಹಕರು ಕೇವಲ ₹1,999 ಮಾಸಿಕ ಇಎಂಐ (EMI) ಪಾವತಿಸುವ ಮೂಲಕ ಹೊಸ ಕಾರನ್ನು ಖರೀದಿಸಬಹುದು.ಸಣ್ಣ ಬಜೆಟ್ ಹೊಂದಿರುವ ಗ್ರಾಹಕರಿಗೆ ಕಾರು ಒಡೆತನದ ಕನಸನ್ನು ನನಸು ಮಾಡಲು ಈ ಯೋಜನೆ ಸಹಕಾರಿಯಾಗಲಿದೆ.

ಈ ವಿಶೇಷ ಇಎಂಐ ಯೋಜನೆಯಡಿಯಲ್ಲಿ ಲಭ್ಯವಿರುವ ಪ್ರಮುಖ ಮಾಡೆಲ್‌ಗಳು ಇವು:

ಆಲ್ಟೋ (Alto)

ವ್ಯಾಗನ್‌ಆರ್ (WagonR)

ಸೆಲೆರಿಯೊ (Celerio)

ಈ ಕಾರುಗಳು ಈಗಾಗಲೇ ತಮ್ಮ ಉತ್ತಮ ಮೈಲೇಜ್ ಮತ್ತು ಕೈಗೆಟಕುವ ಬೆಲೆಗೆ ಹೆಸರುವಾಸಿಯಾಗಿವೆ. ಈಗ ಈ ಕಡಿಮೆ ಇಎಂಐ ಯೋಜನೆಯಿಂದ ಅವು ಇನ್ನಷ್ಟು ಜನರಿಗೆ ಸುಲಭವಾಗಿ ಲಭ್ಯವಾಗಲಿವೆ.

ಅಂದಹಾಗೆ ಇಎಂಐ ಆಫರ್ ಘೋಷಣೆಯಾದ ಸಮಯವು ಬಹಳ ಮುಖ್ಯವಾಗಿದೆ. ಇತ್ತೀಚೆಗೆ ಭಾರತ ಸರ್ಕಾರವು ಕಾರುಗಳ ಮೇಲಿನ ಜಿಎಸ್‌ಟಿ (GST) ದರಗಳನ್ನು ಕಡಿಮೆ ಮಾಡಿದೆ. ಈ ತೆರಿಗೆ ಕಡಿತದಿಂದಾಗಿ ಮಾರುತಿ ಸುಜುಕಿ ಈಗಾಗಲೇ ತನ್ನ ಕಾರುಗಳ ಬೆಲೆಯನ್ನು ₹1.29 ಲಕ್ಷದವರೆಗೆ ಇಳಿಕೆ ಮಾಡಿದೆ.