Viral Video: ಆಟ ಆಡುತ್ತಿರುವಾಗಲೇ ಶಾಲೆಯಲ್ಲಿ ಕುಸಿದು ಬಿದ್ದ 10 ನೇ ತರಗತಿ ವಿದ್ಯಾರ್ಥಿ, ಸಾವು

Share the Article

Viral Video: ತೆಲಂಗಾಣದ ಹನುಮಕೊಂಡ ಜಿಲ್ಲೆಯ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಸಾವಿಗೀಡಾಗಿರುವ ಘಟನೆ ನಡೆದಿದೆ.

ಶಾಲಾ ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿದ್ಯಾರ್ಥಿ ನೆಲದ ಮೇಲೆ ಕುಸಿದು ಬೀಳುವ ದೃಶ್ಯ ವಿಡಿಯೋದಲ್ಲಿ ಕಂಡು ಬಂದಿದೆ. ವಿದ್ಯಾರ್ಥಿ ಜೊತೆಗೆ ಅನೇಕ ವಿದ್ಯಾರ್ಥಿಗಳು, ಶಿಕ್ಷಕರು ಕೂಡಾ ಇದ್ದಾರೆ.

ಹನುಮಕೊಂಡ ಜಿಲ್ಲಾ ಕೇಂದ್ರದ ನಯೀಮ್ನಗರ ಪ್ರದೇಶದ ಖಾಸಗಿ ಶಾಲೆಯಲ್ಲಿ ಈ ಅವಘಡ ನಡೆದಿದೆ. ಇತರ ವಿದ್ಯಾರ್ಥಿಗಳ ಜೊತೆ ಆಟವಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವ ಮೊದಲೇ ಬಾಲಕ ಸಾವಿಗೀಡಾಗಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಇದನ್ನೂ ಓದಿ:ಧರ್ಮಸ್ಥಳ: ಬಂಗ್ಲೆ ಗುಡ್ಡೆಯ ಹಿತ್ತಲಲ್ಲಿ ಮಗುವಿನದ್ದೂ ಸೇರಿ ರಾಶಿ ರಾಶಿ ಮಾನವ ಆಸ್ತಿ ಪಂಜರ – ಭೀಕರ ದೃಶ್ಯ ಬಿಚ್ಚಿಟ್ಟ ವಿಠಲ ಗೌಡ

ಜಯಂತ್‌ (15) ವಿದ್ಯಾರ್ಥಿ ಎಂದು ಗುರುತಿಸಲಾಗಿದ್ದು, ಶಾಲಾ ಮೈದಾನದಲ್ಲಿ ಬಿದ್ದು ಹಠಾತ್‌ ಸಾವಿಗೀಡಾಗಿದ್ದಾನೆ.

ಪೋಷಕರು ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯವೇ ತಮ್ಮ ಮಗುವಿನ ಸಾವಿಗೆ ಕಾರಣ ಎಂದು ಆರೋಪ ಹೊರಿಸಿದ್ದಾರೆ.

 

Comments are closed.