Monkeys: ಮಲಗಿದ್ದ 2 ತಿಂಗಳ ಮಗುವನ್ನು ನೀರಿನ ಡ್ರಮ್ನಲ್ಲಿ ಮುಳುಗಿಸಿದ ಕೋತಿಗಳು: ಮಗು ಸಾವು

Monkeys: ಮನೆಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋದ ಕೋತಿಗಳು ನೀರು ತುಂಬಿದ್ದ ಡ್ರಮ್ ಒಳಗೆ ಹಾಕಿದ್ದು, ಮಗು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.

ಮನೆಯ ವರಾಂಡದಲ್ಲಿ ಎರಡು ತಿಂಗಳ ಮಗುವನ್ನು ಮಲಗಿಸಲಾಗಿದ್ದು, ಸದ್ದಿಲ್ಲದೆ ಬಂದ ಕೋತಿಗಳು ಮಗುವನ್ನು ಮಂಚದಿಂದ ಎತ್ತಿಕೊಂಡು ಹೋಗಿ ಟೆರೇಸ್ ಮೇಲೆ ಇದ್ದ ನೀರಿನ ಡ್ರಮ್ಗೆ ಬಿಸಾಡಿದೆ. ಮಗು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದೆ.
ಮಖ್ರೆಹ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ಸೂರಜ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೆತ್ತವರು ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ಗುರುವಾರ ನಡೆದಿದ್ದು, ಅನುಜ್ ಕುಮಾರ್ ಅವರ ಮಗು ಕಾಣೆಯಾಗಿತ್ತು. ಮಗುವಿಗೆ ಸ್ನಾನ ಮಾಡಿಸಿ ಮಂಚದ ಮೇಲೆ ಮಲಗಿಸಿದ ತಾಯಿ ತಾನು ಸ್ನಾನ ಮಾಡಲೆಂದು ಬಾತ್ರೂಂ ಗೆ ಹೋಗಿದ್ದು, ಈ ವೇಳೆ ಮನೆಯೊಳಗೆ ನುಗ್ಗಿದ ಮಂಗಗಳು ಹಾಸಿಗೆಯ ಮೇಲೆ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿದೆ. ತಾಯಿ ವಾಪಾಸು ಬಂದು ನೋಡುವಾಗ ಮಗು ಕಾಣೆಯಾಗಿದ್ದು ತಿಳಿದಿದ್ದು, ಸುತ್ತಮುತ್ತ ಹುಡುಕಾಟ ಮಾಡಿದ್ದಾರೆ.
ಬಹಳ ಹುಡುಕಾಟದ ನಂತರ ಮಗುವಿನ ಶವ ಮನೆಯ ಟೆರೇಸಿನ ಮೇಲೆ ನೀರು ತುಂಬಿದ ಡ್ರಮ್ನಲ್ಲಿ ತೇಲುತ್ತಿರುವುದು ಕಂಡು ಬಂದಿದೆ.
ಪೊಲೀಸ್ ಅಧಿಕಾರಿಗಳು ತನಿಖೆ ಪ್ರಾರಂಭ ಮಾಡಿದ್ದು, ಆ ಕುಟುಂಬ ಯಾವುದೇ ಔಪಚಾರಿಕ ದೂರನ್ನು ದಾಖಲು ಮಾಡಿಲ್ಲ. ಆದರೆ ಸಾವಿನ ಸುತ್ತಲಿನ ಸಂದರ್ಭಗಳನ್ನು ತಿಳಿಯಲು ಪೊಲೀಸರು ಪ್ರಶ್ನಿಸಿದ್ದು, ಹೇಳಿಕೆಯನ್ನು ದಾಖಲು ಮಾಡುತ್ತಿದ್ದಾರೆ.
Comments are closed.