ರಾಜ್ಯಕ್ಕೆ ಮತ್ತೆ ಲಾಕ್ ಡೌನ್ ಭೀತಿ| ದಕ್ಷಿಣ ಕನ್ನಡ ಸೇರಿದಂತೆ 10 ಜಿಲ್ಲೆಗಳು ಡೇಂಜರ್ ಝೋನ್ ನಲ್ಲಿ

ಕೊರೋನಾ ಮೂರನೇ ಅಲೆಗೆ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ಡೇಂಜರ್ ಝೋನ್ ನಲ್ಲಿ ಇರುವುದಾಗಿ ಕೇಂದ್ರ ಎಚ್ಚರಿಕೆ ನೀಡಿದೆ.

ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವಂತೆ ಕೇಂದ್ರ ಎಚ್ಚರಿಸಿದೆ.

ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ 10 ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಈ ಜಿಲ್ಲೆಗಳಲ್ಲಿ ಲಾಕ್ ಡೌನ್ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದ.ಕ ಜಿಲ್ಲೆಯು ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ 15 ದಿನ ತಡವಾಗಿಯೇ ಅನ್ಲಾಕ್ ಆಗಿತ್ತು. ಹೀಗಾಗಿ ಮತ್ತೆ ಲಾಕ್ ಡೌನ್ ಜಾರಿಯಾದರೆ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯುವ ಭೀತಿಯಲ್ಲಿದೆ.

ಅಲ್ಲದೆ, ದ.ಕ ಜಿಲ್ಲೆಯು ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ, ಅಲ್ಲಿನ ಸೋಂಕು ಇಲ್ಲಿ ಹರಡುವ ಭೀತಿ ಹೆಚ್ಚಾಗಿಯೇ ಇದೆ. ಈ ರೀತಿಯ ಹರಡುವಿಕೆಯನ್ನು ಜಿಲ್ಲಾಡಳಿತ ಯಾವ ರೀತಿಯಲ್ಲಿ ತಡೆಯಲಿದೆ ಎಂಬುದು ಈಗಿರುವ ಪ್ರಶ್ನೆಯಾಗಿದೆ.

Leave A Reply

Your email address will not be published.