ಧರ್ಮಸ್ಥಳ | ನಿಸರ್ಗ ಚಿಕನ್ ಸೆಂಟರ್ ಉದ್ಘಾಟನೆ

ಧರ್ಮಸ್ಥಳ ಗ್ರಾಮದ ಮೋದಿ ನಗರ ನಾರ್ಯ ಎಂಬಲ್ಲಿ ನೂತನವಾಗಿ ಪ್ರಾರಂಭಿಸಿದ ನಿಸರ್ಗ ಚಿಕನ್ ಸೆಂಟರ್ ಉದ್ಘಾಟನೆಯನ್ನು ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಇವರು ನೆರವೇರಿಸಿದರು.

 

ಇವರನ್ನು ಅಂಗಡಿಯ ಮಾಲಕರಾದ ಸತೀಶ್ ಇವರು ಬರಮಾಡಿಕೊಂಡರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಉದ್ಯೋಗದಲ್ಲಿ ನಾವು ದೇವರನ್ನು ಕಾಣಬಹುದು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಭಕ್ತಿ ಇರಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಇವರು ಉಪಸ್ಥಿತಿ ಇದ್ದರು.

Leave A Reply

Your email address will not be published.