ಎಲೆಕ್ಟ್ರಿಕ್ ರೇಜರ್ ಎಂದು ಸ್ಟನ್ ಗನ್ ಖರೀದಿಸಿದ ವ್ಯಕ್ತಿ

ಎಲೆಕ್ಟ್ರಿಕ್ ರೇಜರ್ ಎಂದು ಭಾವಿಸಿ ವ್ಯಕ್ತಿಯೊಬ್ಬ ಸ್ಟನ್ ಗನ್ ಖರೀದಿ ಮಾಡಿದ ಶಾಕಿಂಗ್ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದ್ದು, ಅದೃಷ್ಟವಶಾತ್ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.

ಇಂಗ್ಲೆಂಡ್‌ನ ಬೋಲ್ಟನ್ ಡೀನ್‌ನಲ್ಲಿರುವ ರೋಲ್ಯಾಂಡ್ ರಸ್ತೆಯ 26 ವರ್ಷದ ಮೊಹಮ್ಮದ್ ಖಾನ್ ಈ ವಸ್ತುವನ್ನು ಖರೀದಿ ಮಾಡುವ ವೇಳೆ ಇದರ ನೈಜ ಕಾರ್ಯದ ಬಗ್ಗೆ ಅರಿವು ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಈ ಸಂಬಂಧ ಕೋರ್ಟ್‌ಗೆ ಹಾಜರಾದ ಬೋಲ್ಟನ್ ಡೀನ್ ಶಸ್ತ್ರಾಸ್ತ್ರವನ್ನು ಹೊಂದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಅಪರಿಚಿತರಿಂದ ತಾವು ಗನ್ ಖರೀದಿ ಮಾಡಿದ್ದಾಗಿ ನ್ಯಾಯಾಲಯದ ಮುಂದೆ ಬೋಲ್ಟನ್ ಹೇಳಿದ್ದಾರೆ. ಎಲೆಕ್ಟ್ರಿಕ್ ಶೇವರ್ ಹಾಗೂ ಚಾರ್ಜರ್ ಹೊಂದಿರುವ ಬಾಕ್ಸನ್ನು ಅಪರಿಚಿತ ವ್ಯಕ್ತಿ ನೀಡಿದ್ದ ಎನ್ನಲಾಗಿದೆ.

ಮನೆಗೆ ಬಂದ ಬಳಿಕ ಖಾನ್ ಈ ಸಾಧನವನ್ನು ಚಾರ್ಜಿಂಗ್‌ಗೆ ಹಾಕಿದ್ದಾರೆ. ಅಲ್ಲದೇ ಇದರಿಂದ ಶೇವ್ ಮಾಡಲು ಹೋಗಿದ್ದಾರೆ. ಅದೃಷ್ಟವಶಾತ್ ಬೋಲ್ಟನ್ ಶಾಕ್‌ಗೆ ಮಾತ್ರ ಒಳಗಾಗಿದ್ದಾರೆ.

ಸ್ಟನ್ ಗನ್‌ಗಳು 25 ಕಿಲೋವೋಲ್ಟ್ ಸಾಮರ್ಥ್ಯ ಹೊಂದಿದೆ. ಈ ವಿಚಾರವಾಗಿ ಮಾತನಾಡಿದ ಪೊಲೀಸರು, ಈತ ಬದುಕುಳಿದಿದ್ದೇ ಒಂದು ಪವಾಡ ಎಂದು ಹೇಳಿದ್ದಾರೆ.

Leave A Reply

Your email address will not be published.