‘ಹಿಂದೂ ವಿರೋಧಿ, ಮೋದಿ ವಿರೋಧಿ ಪತ್ರಕರ್ತರು ಬೇಕಾಗಿದ್ದಾರೆ’ ಎಂದು ಜಾಹೀರಾತು ನೀಡಿ ಜಗತ್ತಿನೆದುರು ಬೆತ್ತಲಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ

ನ್ಯೂಯಾರ್ಕ್: ನಮ್ಮ ಪತ್ರಿಕೆಗೆ ಅನುಭವಿ ವರದಿಗಾರರು ಬೇಕಾಗಿದ್ದಾರೆ. ಆದರೆ ಒಂದು ಷರತ್ತು, ಅವರು ಹಿಂದೂ ವಿರೋಧಿ ಆಗಿರಬೇಕು ಭಾರತದ ವಿರುದ್ಧ ಬರೆಯಬೇಕು, ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೇಜೋವಧೆ ಮಾಡುವಂಥ ಬರಹಗಳನ್ನು ಬರೆಯಬೇಕು’ ಎಂಬ ಒಕ್ಕಣೆಯ ಜಾಹೀರಾತನ್ನು ಪ್ರಕಟಿಸಿದೆ ನ್ಯೂಯಾರ್ಕ್ ಟೈಮ್ಸ್!

 

ತಮ್ಮ ವೆಬ್‌ಸೈಟ್‌ನಲ್ಲಿ ಹಾಗೂ ಲಿಂಕ್ಡ್ ಇನ್ ಸೈಟ್‌ನಲ್ಲಿ ಈ ಜಾಹೀರಾತನ್ನು ಪತ್ರಿಕೆ ನೀಡಿದೆ. ಅದರಲ್ಲಿಯೂ ಇಂಥ ‘ಅರ್ಹತೆ’ ಇರುವ ವರದಿಗಾರರನ್ನು ಪತ್ರಿಕೆ ನೇಮಕ ಮಾಡಿಕೊಳ್ಳುತ್ತಿರುವುದು ಬೇರೆ ಎಲ್ಲೂ ಅಲ್ಲ, ದೆಹಲಿಯಲ್ಲಿರುವ ತನ್ನ ಕಚೇರಿಯಲ್ಲಿ!

ಅಮೆರಿಕದಿಂದ ಪ್ರಕಟಣೆಯಾಗುವ ಈ ದಿನ ಪತ್ರಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸರಣವನ್ನು ಹೊಂದಿದ ತಮ್ಮ ಪತ್ರಿಕೆಗೆ ವರದಿಗಾರರು ಬೇಕಾಗಿದ್ದಾರೆ ಎಂದು ಪ್ರಕಟಿಸಿ ಅದರಲ್ಲಿ ಈ ಷರತ್ತನ್ನು ವಿಧಿಸಿದೆ. ಇದೇ ಜುಲೈ 1ರಂದು ಈ ಪ್ರಕಟಣೆ ಹೊರಟಿದ್ದು, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಗೆ ಗ್ರಾಸವಾಗಿದ್ದು, ಪತ್ರಿಕೋದ್ಯಮವನ್ನು ದುಡ್ಡಿಗೆ ಮಾರಿಕೊಂಡ ನ್ಯೂಯಾರ್ಕ್ ಟೈಮ್ಸ್ ಜಗತ್ತಿನ ಎದುರು ನೈತಿಕ ದಿವಾಳಿಯಾಗಿದೆ.

ಜನಸಂಖ್ಯೆಯ ದೃಷ್ಟಿಯಿಂದ ಭಾರತವು ಚೀನಾಗೆ ಸವಾಲೊಡ್ಡುತ್ತಿದೆ ಹಾಗೂ ವಿಶ್ವ ಮಟ್ಟದಲ್ಲಿ ಅದು ಶ್ರೇಷ್ಠನಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಭಾರತದಲ್ಲಿನ ಹಾಲಿ ಸರ್ಕರ ಬದಲಾಯಿಸಬೇಕಿದೆ. ಆದ್ದರಿಂದ ಭಾರತ ಸರ್ಕಾರದ ವಿರುದ್ಧ ಬರೆಯಬಲ್ಲವರು ಹಾಗೂ ಭಾರತದಲ್ಲಿನ ಹಾಲಿ ಸರ್ಕಾರ ಬದಲಾಯಿಸಲು ಸಹಾಯ ಮಾಡುವ ವರದಿಗಾರರು ಬೇಕಾಗಿದ್ದಾರೆ’ ಎಂದು ಜಾಹೀರಾತಿನಲ್ಲಿ ಇದೆ.
ಭಾರತವು ಉನ್ನತ ಸ್ಥಾನ ಹೊಂದುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಪ್ರಧಾನಿ ಮೋದಿ ಅವ ವರ್ಚಸ್ಸಿನಿಂದ ಚೀನಾದ ಆರ್ಥಿಕ ಮತ್ತು ರಾಜಕೀಯ ಹಿಡಿತಕ್ಕೆ ಭಾರತವು ಪ್ರತಿಸ್ಪರ್ಧಿಯಾಗಲು ಹೊರಟಿದೆ. ಆದ್ದರಿಂದ ಸರ್ಕಾರ ಬದಲಾಯಿಸುವಂಥ ಬರಹಗಳನ್ನು ಬರೆಯುವವರು ಬೇಕಾಗಿದ್ದಾರೆ’ ಎಂದೂ ನಮೂದು ಮಾಡಲಾಗಿದೆ! ಇದು ಯಾರನ್ನೋ ಮೆಚ್ಚಿಸಲು ಬರೆದ ಸಾಲುಗಳು ಅನ್ನಲು ಯಾವುದೇ ಅನುಮಾನವಿಲ್ಲ.

ಈ ಹಿಂದೆ ಕೂಡ ಅಂದರೆ 2018ರಲ್ಲಿ ನ್ಯೂಯಾರ್ಕ್ ಟೈ0 ಮತ್ತು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗಳು ಭಾರತದ ವಿರೋಧಿ ಹೇಳಿಕೆ ನೀಡುವ ಪ್ರಚೋದಾತ್ಮಕ ಬರಹಗಳನ್ನು ಪ್ರಕಟಿಸಿದ್ದವು.
ಕಳೆದ ನಾಲ್ಕು ವರ್ಷಗಳಲ್ಲಿ ಚೀನಾದಿಂದ
ಅಮೆರಿಕದ ಪತ್ರಿಕೆಗಳಿಗೆ ಸುಮಾರು 142 ಕೋಟಿ ರೂಪಾಯಿಗಳ ಜಾಹೀರಾತುಗಳನ್ನು ನೀಡಲಾಗಿದೆ. ಅದರಲ್ಲಿ ‘ವಾಲ್ ಸ್ಟ್ರೀಟ್ ಜರ್ನಲ್’ಗೆ 44.73 ಕೋಟಿ, ‘ವಾಷಿಗ್ಟನ್ ಪೋಸ್ಟ್’ಗೆ 34.29 ಕೋಟಿ, ನ್ಯೂಯಾರ್ಕ್ ಟೈಮ್ಸ್ಗೆ 3.72 ಕೋಟಿ ರೂಪಾಯಿಗಳ ಜಾಹೀರಾತು ನೀಡಲಾಗಿದೆ ಎನ್ನಲಾಗಿದೆ.

Leave A Reply

Your email address will not be published.