‘ಸಾರ್, ನಂಗೆ ಕನಸಲ್ಲಿ ಬಂದು ದಿನಾ ರೇಪ್ ಮಾಡ್ತಿದ್ದಾರೆ ‘ ಎಂದು ಪೊಲೀಸ್ ಗೆ ದೂರು ನೀಡಿದ ಮಹಿಳೆ

ಔರಂಗಾಬಾದ್ (ಬಿಹಾರ): ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ಬಲು ಕುತೂಹಲ ಎನ್ನುವ ಹೇಳಿಕೆ ನೀಡಿದ್ದು, ಇದನ್ನು ಕೇಳಿ ಪೊಲೀಸರೇ ಕಕ್ಕಾಬಿಕ್ಕಿ ಆಗಿದ್ದಾರೆ. ‘ನನಗೆ ದಿನವೂ ಮಾಟಗಾರನೊಬ್ಬ ಕನಸಿನಲ್ಲಿ ಬಂದು ಅತ್ಯಾಚಾರ ಮಾಡುತ್ತಿದ್ದಾನೆ’ ಎಂದು ಆಕೆ ಹೇಳಿಕೆ ನೀಡಿ ಪೊಲೀಸರನ್ನು ಪೇಚಿಗೆ ಸಿಲುಕಿಸಿದ್ದಾಳೆ.

ಇಂಥದ್ದೊಂದು ಕೇಸ್ ದಾಖಲಾಗಿರುವುದು ಬಿಹಾರ ಔರಂಗಾಬಾದ್ ಜಿಲ್ಲೆಯ ಕುದ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಇಲ್ಲಿಯ ಗಾಂಧಿ ಮೈದಾನದ ನಿವಾಸಿಯಾದ ಮಹಿಳೆ ಇಂಥ ವಿಚಿತ್ರ ದೂರು ದಾಖಲು ಮಾಡಿದ್ದಾಳೆ. ಇದೀಗ ಆಕೆಯ ಕನಸಿಗೆ ಹೋಗಿ, ನಿಜಕ್ಕೂ ರೇಪ್ ಆಗುತ್ತಿದೆಯಾ ಇಲ್ಲವೇ ಎಂಬ ಅಸಂಗತ ಕೆಲಸಕ್ಕೆ ಪೊಲೀಸರು ಇಳಿಯಬೇಕಾಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಈಕೆಯ ಮಗುವಿಗೆ ತೀವ್ರ ಅನಾರೋಗ್ಯ ಬಾಧಿಸಿತ್ತು. ಯಾರೋ ನೀಡಿದ ಸಲಹೆಯ ಈಕೆ ಪ್ರಶಾಂತ್ ಚತುರ್ವೇದಿ ಎಂಬ ಮಾಟಗಾರರನ್ನು ಸಂಪರ್ಕಿಸಿದ್ದಾಳೆ. ಆ ವೇಳೆ ಆತ ಏನೋ ಒಂದು ಮಂತ್ರ ಹೇಳಿಕೊಟ್ಟು ಇದನ್ನು ಜಪಿಸು ಎಂದು ಹೇಳಿ ಕಳುಹಿಸಿದ್ದಾನೆ. 15 ದಿನ ಸತತವಾಗಿ ಇದೇ ಮಂತ್ರ ಹೇಳುತ್ತಾ ಬಂದ ನಂತರ ಆಕೆಯ ಮಗ ಪ್ರಾಣ ಕಳೆದುಕೊಂಡಿದ್ದಾನೆ.

ಇದನ್ನು ಮಂತ್ರವಾದಿಗೆ ಹೇಳಿದಾಗ ತನ್ನನ್ನು ಕಾಳಿ ದೇವಸ್ಥಾನಕ್ಕೆ ಬಂದು ಭೇಟಿಯಾಗಲು ಹೇಳಿದ. ಆ ಸಮಯದಲ್ಲಿ ನಾನು ಹೋದಾಗ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ನಾನು ಪಾರಾಗಿದ್ದೆ. ಆದರೆ ಆ ದಿನದಿಂದ ನಿತ್ಯವೂ ನನ್ನ ಕನಸಿನಲ್ಲಿ ಬಂದು ಅತ್ಯಾಚಾರ ಮಾಡುತ್ತಿದ್ದಾನೆ. ಜೀವನವೇ ಬೇಸರವಾಗಿ ಹೋಗಿದೆ, ಮಲಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದ ಮಹಿಳೆ ದೂರಿದ್ದಾರೆ.

ಈ ದೂರಿನ ಆಧಾರದ ಮೇಲೆ ಮಂತ್ರವಾದಿಯನ್ನು ಪೊಲೀಸರು ಕರೆಸಿದ್ದಾರೆ. ಆದರೆ ಈಕೆಯನ್ನು ಭೇಟಿಯಾಗಿರುವ ಬಗ್ಗೆ ಯಾವುದೇ ದಾಖಲೆಗಳು ಸಿಗಲಿಲ್ಲ. ಮಾತ್ರವಲ್ಲದೇ ಕನಸಿನಲ್ಲಿ ಬಂದ ರೇಪ್ ಮಾಡುತ್ತಾನೆ ಎಂದರೆ ಅದಕ್ಕೆ ಸಾಕ್ಷ್ಯಾಧಾರವೂ ಇಲ್ಲದ ಕಾರಣ ಆತನನ್ನು ಎಚ್ಚರಿಸಿ ಕಳುಹಿಸಲಾಗಿದೆ. ಆ ಮಹಿಳೆ ಮಾತ್ರ ಏನೂ ಮಾಡಲಾಗದೇ ಅಸಹಾಯಕಳಾಗಿದ್ದಾಳೆ. ಕಣ್ಣು ಮುಚ್ಚಿ ನಿದ್ದೆಗೆ ಜಾರಿದ ತಕ್ಷಣ ಅಲ್ಲಿ ಮಂತ್ರವಾದಿ ಪ್ರತ್ಯಕ್ಷ. ದಿನವೂ ಕನಸಿನಲ್ಲಿ ರೇಪ್ ನಡೆಯುತ್ತಿದೆ. ಯಾವುದಾದರೂ ಮನೋ ವೈದ್ಯರ ಬಳಿ ಆಕೆಯನ್ನು ಕರೆದೊಯ್ಯುವ ತನಕ ಈ ರೇಪ್ ಗೆ ಮುಕ್ತಿ ಸಿಗುವುದು ಕಾಣೆ.

Leave A Reply

Your email address will not be published.