ಸವಣೂರು : ಸಚಿವ ಎಸ್.ಅಂಗಾರ ಅವರಿಂದ ಕೋವಿಡ್ ಕಾರ್ಯಪಡೆ ಸಭೆ,ಪರಿಶೀಲನೆ | ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ,ಆರೋಗ್ಯ ಕೇಂದ್ರಕ್ಕೆ ಮೆಡಿಕಲ್ ಕಿಟ್ ವಿತರಣೆ
ಸವಣೂರು: ಕೋವಿಡ್ ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಬೇಕು.ಹೋಂ ಐಸೋಲೇಶನ್ ನಿಂದ ಇತರರಿಗೆ ಹರಡುವ ಸಾಧ್ಯತೆ ಜಾಸ್ತಿ.ಆದ್ದರಿಂದ ಕಡ್ಡಾಯವಾಗಿ ಪಾಸಿಟಿವ್ ಬಂದವರನ್ನೂ ಕೇರ್ ಸೆಂಟರ್ ಗೆ ಸೇರಿಸಬೇಕು. ಕುರಿತು ಎಲ್ಲರೂ ಗಮನಹರಿಸಬೇಕೆಂದು ಸಚಿವ ಎಸ್.ಅಂಗಾರ ಸೂಚನೆ ನೀಡಿದರು.
ಅವರು ಸವಣೂರು ಗ್ರಾ.ಪಂ.ನಲ್ಲಿ ಕೋವಿಡ್ ಕಾರ್ಯಪಡೆಯ ವರದಿ ಪರಿಶೀಲನೆ ನಡೆಸಿ ಮಾತನಾಡಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸುವುದು ಉತ್ತಮ.ಗ್ರಾಮಮಟ್ಟದಲ್ಲಿ ಕಟ್ಟು ನಿಟ್ಟಿನ ಕ್ರಮಕೈಗೊಂಡಾಗ ಮಾತ್ರ ಕೋವಿಡ್ ನಿರ್ಮೂಲನೆ ಸಾಧ್ಯ ಎಂದರು.
ಪಾಸಿಟಿವ್ ಬಂದವರನ್ನು ಮನವೊಲಿಸಬೇಕು.ಕೋವಿಡ್ ವಾರಿಯರ್ಸ್‌ಗೆ ಕರ್ತವ್ಯಕ್ಕೆ ಅಡ್ಡಿ ಅಥವಾ ಬೆದರಿಕೆ ಮಾಡಿದರೆ ವಿಪತ್ತು ನಿರ್ವಹಣಾ ಕಾಯ್ದೆಯಂತೆ ಕ್ರಮ ಜರಗಿಸಬೇಕು ಎಂದರು.
ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ,ಸವಣೂರು ಗ್ರಾ.ಪಂ.ಕಾರ್ಯಪಡೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ.ಆದರೆ ಈ ಭಾಗದಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸುವುದು ಕಡಿಮೆ.ಈ ನಿಟ್ಟಿನಲ್ಲಿ ಎಲ್ಲರೂ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸುವಂತೆ ಮಾಡಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ,ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಸವಣೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕೋವಿಡ್ ಟೆಸ್ಟ್ ನಿರಂತರ ಮಾಡಲಾಗುತ್ತಿದೆ.ಸಂಘ ಸಂಸ್ಥೆಗಳ ಸದಸ್ಯರು ಕೈ ಜೋಡಿಸುತ್ತಿದ್ದಾರೆ.ಪಾಸಿಟಿವ್ ಬಂದವರನ್ನು ಕೇರ್ ಸೆಂಟರ್ ಗೆ ಸೇರಿಸುವುದು ಸೂಕ್ತ ಎಂದರು.
ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರು ,ಗ್ರಾ.ಪಂ.ನಿಂದ ನಡೆದ ಕೋವಿಡ್ ನಿರ್ಮೂಲನಾ ಕ್ರಮಗಳು ಹಾಗೂ ಮುನ್ನೆಚ್ಚರಿಕೆ ಕ್ರಮ ಸೇರಿದಂತೆ ಒಟ್ಟು ವ್ಯವಸ್ಥೆಯ ಕುರಿತು ವರದಿ ಮಂಡಿಸಿದರು.
ಕಡಬ ತಹಶೀಲ್ದಾರ್ ಅನಂತ ಶಂಕರ,ನೋಡಲ್ ಅಧಿಕಾರಿಯಾಗಿರುವ ಶಿಕ್ಷಣಾಧಿಕಾರಿ ಲೋಕೇಶ್,ಬೆಳ್ಳಾರೆ ಠಾಣಾ ಎಸೈ ಆಂಜನೇಯ ರೆಡ್ಡಿ ಮಾತನಾಡಿದರು.
ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು,ಅಕ್ರನ ಸಕ್ರಮ ಸಮಿತಿ ಸದಸ್ಯರಾದ ರಾಕೇಶ್ ರೈ ಕೆಡೆಂಜಿ,ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಗ್ರಾ.ಪಂ.ಸದಸ್ಯರಾದ ಚೆನ್ನು ಮಾಂತೂರು,ಸತೀಶ್ ಅಂಗಡಿಮೂಲೆ,ತೀರ್ಥರಾಮ ಕೆಡೆಂಜಿ,ಅಬ್ದುಲ್ ರಝಾಕ್, ರಫೀಕ್ ಎಂ.ಎ,ಭರತ್ ರೈ,ಬಾಬು ಎನ್,ತಾರಾನಾಥ ಬೊಳಿಯಾಲ,ಚೇತನಾ ಪಾಲ್ತಾಡಿ, ವಿನೋದಾ ರೈ ಚೆನ್ನಾವರ, ಹರಿಕಲಾ ರೈ ಕುಂಜಾಡಿ,ಚಂದ್ರಾವತಿ ಸುಣ್ಣಾಜೆ,ಸುಂದರಿ ಬಂಬಿಲ,ಇಂದಿರಾ ಬೇರಿಕೆ,ಕೋವಿಡ್ ಕಾರ್ಯಪಡೆ ಸದಸ್ಯರಾದ ಇರ್ಷಾದ್ ಸವಣೂರು, ಸುರೇಶ್ ರೈ ಸೂಡಿಮುಳ್ಳು, ಸಚಿನ್ ಸವಣೂರು, ಝಕರಿಯಾ,ಪ್ರವೀಣ್ ಚೆನ್ನಾವರ, ತಾ.ಪಂ.ಮಾಜಿ ಅಧ್ಯಕ್ಷೆ ರಾಜೇಶ್ವರಿ ಕೆ,ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ,ಸವಣೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ಸಿಇಓ ಚಂದ್ರಶೇಖರ ಪಿ,ಸವಣೂರು ಶಾಲಾ ಮುಖ್ಯಗುರು ಕುಶಾಲಪ್ಪ,ಪಾಲ್ತಾಡಿ ಶಾಲಾ ಮುಖ್ಯಶಿಕ್ಷಕಿ ಸುಜಾತಾ ರೈ,ಗ್ರಾಮ ಕರಣಿಕರಾದ ಚಂದ್ರನಾಯಕ್ ಸವಣೂರು,ರವಿಚಂದ್ರ ಪಾಲ್ತಾಡಿ,ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು,ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ಸ್ವಾಗತಿಸಿ,ಸದಸ್ಯ ಗಿರಿಶಂಕರ ಸುಲಾಯ ಪ್ರಸ್ತಾವನೆಗೈದರು.ಪ್ರಭಾರ ಅಭಿವೃದ್ಧಿ ಅಧಿಕಾರಿ ಎ.ಮನ್ಮಥ ವಂದಿಸಿದರು.ಮಹೇಶ್ ಕೆ.ಸವಣೂರು ಕಾರ್ಯಕ್ರಮ ನಿರೂಪಿಸಿದರು.ಗ್ರಾ.ಪಂ.ಸಿಬಂದಿಗಳಾದ ಪ್ರಮೋದ್ ಕುಮಾರ್,ದಯಾನಂದ ಮಾಲೆತ್ತಾರು, ಜಯಾ ಕೆ,ಜಯಶ್ರೀ, ಯತೀಶ್ ಸಹಕರಿಸಿದರು.
ಗೌರವಾರ್ಪಣೆ
ಈ ಸಂದರ್ಭದಲ್ಲಿ ಸಚಿವರಾದ ಎಸ್.ಅಂಗಾರ,ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ,ಕಿರಿಯ ಆರೋಗ್ಯ ಸಹಾಯಕಿಯರಾದ ವಾಗೇಶ್ವರಿ,ಸುಧಾಕ್ಷಿಣಿ ಅವರನ್ನು ಗೌರವಿಸಲಾಯಿತು.
ಆಹಾರ ಕಿಟ್ ,ಮೆಡಿಕಲ್ ವಿತರಣೆ,ಗೌರವ ಧನ ವಿತರಣೆ
ಗ್ರಾ.ಪಂ.ವ್ಯಾಪ್ತಿಯ ಆಶಾಕಾರ್ಯಕರ್ತೆಯರಿಗೆ ಗ್ರಾ.ಪಂ.ವತಿಯಿಂದ ಗೌರವಧನ ಹಾಗೂ ಸಚಿವರ ವಾರ್‌ರೂಂ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ನೀಡಲಾದ ಆಹಾರದ ಕಿಟ್ ವಿತರಿಸಲಾಯಿತು.ಆರೋಗ್ಯ ಕೇಂದ್ರಕ್ಕೆ ಮೆಡಿಕಲ್ ಕಿಟ್ ಅನ್ನು ಹಸ್ತಾಂತರಿಸಲಾಯಿತು.