ಒಂದೇ ಒಂದು ದಿನದಲ್ಲಿ ಸಿದ್ಧವಾಯಿತು 10 ಅಂತಸ್ತಿನ ಬಹುಮಹಡಿ ಕಟ್ಟಡ | ಇನ್ನು ಗೃಹಪ್ರವೇಶಕ್ಕೆ ಶಾಮಿಯಾನ ಹಾಕಿದ ನಂತರ ಮನೆ ಕಟ್ಟಿದರಾಯ್ತು !!

ಒಂದು ಮನೆ ಕಟ್ಟಿ ಮುಗಿಸಬೇಕೆಂದರೆ ಅದಕ್ಕೆ ನಮಗೆ ವರ್ಷವೇ ಬೇಕು. ಕನಿಷ್ಠ 6 ತಿಂಗಳು ಇಲ್ಲದೆ ನಮ್ಮಲ್ಲಿ ಸಾಮಾನ್ಯವಾಗಿ ಮನೆ ಮುಗಿಯಲ್ಲ.
ಗಂಗನಚುಂಬಿ ಕಟ್ಟಡಗಳನ್ನ ನಿರ್ಮಾಣ ಮಾಡಬೇಕು ಅಂದರೆ ವರ್ಷಾನುಗಟ್ಟಲೇ ಪರಿಶ್ರಮ ಅತ್ಯಗತ್ಯ. ಆದರೆ ಚೀನಾದ ಚಂಗ್ಯಾದಲ್ಲಿರುವ ಕಟ್ಟಡ ಕಾಮಗಾರಿ ನಡೆಸುವ ಕಂಪನಿ ಮಾತ್ರ ಈ ಮಾತಿಗೆ ತದ್ವಿರುದ್ಧ ಎಂಬಂತೆ ಕೆಲಸ ಮಾಡಿ ತೋರಿಸಿದೆ.

ಕೇವಲ 28 ಗಂಟೆ 45 ನಿಮಿಷಗಳಲ್ಲಿ ಈ ಕಂಪನಿಯು 10 ಅಂತಸ್ತಿನ ಕಟ್ಟಡವನ್ನ ನಿರ್ಮಾಣ ಮಾಡಿದೆ.

ಇನ್ನು ಮುಂದೆ ನೀವು ಮನೆ ಕಟ್ಟಲು ಪಡಿಪಾಟಲು ಪಡುವ ಅವಶ್ಯಕತೆ ಇಲ್ಲ. ಒಂದು ಬಾರಿ ಆ ಕಂಪನಿಗೆ ಅಸೈನ್ ಮೇಂಟ್ ನೀವು ಕೊಟ್ಟು ಪೇಮೆಂಟ್ ಮಾಡಿದರೆ ಸಾಕು. ಆ ಕಂಪನಿ ಇಂತಹ ದಿವಸ ಮನೆ ಕಟ್ಟಿ ಕೊಡುತ್ತೇವೆ ಎಂದು ನಿಮಗೆ ಡೇಟ್ ಕೊಡುತ್ತದೆ. ಮನೆ ನಿರ್ಮಿಸಬೇಕಾಗಿರುವ ಜಾಗದಲ್ಲಿ ಏನೊಂದೂ ನಿರ್ಮಾಣಕಾರ್ಯ ಆಗದಿದ್ದರೂ, ಚಿಂತಿಲ್ಲ. ಮನೆ ಇಲ್ಲದೆ ಹೋದರೂ ಗೃಹಪ್ರವೇಶದ ಕಾರ್ಡ್ ಹಂಚಲು ಅಡ್ಡಿ ಇಲ್ಲ. ಕಾರ್ಡನ್ನು 15 ದಿನ ಮುಂಚಿತವಾಗಿ ಹಂಚಬಹುದು. ಗೃಹ ಪ್ರವೇಶಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಬಹುದು. ಮನೆ ಕಟ್ಟಬೇಕಾಗಿದ್ದ ಜಾಗದ ಮುಂದೆ ಮದುವೆಗೆ ಒಂದು ದಿನ ಮುಂಚಿತವಾಗಿ ಶಾಮಿಯಾನ ಕೂಡ ಹರಡಿ, ಇನ್ನೇನು ಗೃಹಪ್ರವೇಶಕ್ಕೆ ಕೆಲವೇ ಗಂಟೆಗಳು ಬಾಕಿ ಇರುತ್ತವೆ ಎನ್ನುವಷ್ಟರಲ್ಲಿ ಮನೆ ಸಿದ್ಧ. ಬೆಳಂಬೆಳಿಗ್ಗೆ ಅಡುಗೆಭಟ್ಟರುಗಳು ಅಡುಗೆ ಶುರುಮಾಡುವ ನಂತರ ಒಂದೆರಡು ಗಂಟೆಗಳಲ್ಲಿ ಮನೆ ಕಟ್ಟುವ ಕೆಲಸ ಪ್ರಾರಂಭಿಸಿದರೆ ಆಯಿತು. ಕೇವಲ ಒಂದೆರಡು ಗಂಟೆಯಲ್ಲಿ ನಾವು-ನೀವೆಲ್ಲ ಕಟ್ಟುತ್ತಿರುವಂತಹ ಒಂದೆರದಂತಸ್ತಿನ ಮನೆ ಕಟ್ಟುವುದು ಎಂಥ ಕಷ್ಟದ ಕೆಲಸ ?!

ಅರೇ..! ಇಷ್ಟು ಕಡಿಮೆ ಸಮಯದಲ್ಲಿ ಗಗನಚುಂಬಿ ಕಟ್ಟಡ
ನಿರ್ಮಾಣ ಕಾರ್ಯ ಹೇಗೆ ಸಾಧ್ಯವಾಯ್ತು ಎಂದು ನೀವು
ಯೋಚಿಸ್ತಾ ಇರಬಹುದು. ಇದೊಂದು ಪೂರ್ವ ನಿರ್ಮಿತ
ಕಟ್ಟಡ ನಿರ್ಮಾಣ ವ್ಯವಸ್ಥೆ ತಂತ್ರಜ್ಞಾನವಾಗಿದೆ. ಈ
ಕಂಪನಿಯು ಮೊದಲೇ ಅಂತಸ್ತುಗಳನ್ನ ನಿರ್ಮಾಣ
ಮಾಡಿಕೊಂಡಿರುತ್ತದೆ.
ಬಳಿಕ ಇದನ್ನ ಜೋಡಣೆ ಮಾಡುವ ಪ್ರಕ್ರಿಯೆಯನ್ನ ಮಾಡಲಾಗುತ್ತದೆ. ಎಲ್ಲಾ ಅಂತಸ್ತುಗಳನ್ನ ಒಂದರ ಮೇಲೆ ಒಂದರಂತೆ ಜೋಡಣೆ ಮಾಡಿದ ಬಳಿಕ ನೀರಿನ ಸೌಲಭ್ಯ ಹಾಗೂ ವಿದ್ಯುತ್ ಸೌಲಭ್ಯಗಳನ್ನ ಒದಗಿಸಲಾಗುತ್ತದೆ.

ಯುಟ್ಯೂಬ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾದ 4 ನಿಮಿಷ 52 ಸೆಕೆಂಡ್‌ನ ವಿಡಿಯೋದಲ್ಲಿ ಈ ಗಗನಚುಂಬಿ ಕಟ್ಟಡವನ್ನ ಹೇಗೆ ನಿರ್ಮಾಣ ಮಾಡಲಾಯ್ತು ಅನ್ನೋದನ್ನ ತೋರಿಸಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಂತಹಾ ಮನೆ ನಾವೂ ಕಟ್ಟಬಹುದ ಎಂಬ ಮನೆ ಕಟ್ಟುವ ಮನಸ್ಸುಳ್ಳವರು ಈ ಬಗ್ಗೆ ಚಿಂತನೆಮಾಡಿ.

Leave A Reply

Your email address will not be published.