ಸುಬ್ರಹ್ಮಣ್ಯ:ಪಿಡಿಓ ಗೆ ಬೆದರಿಕೆ ಒಡ್ಡಿದ ಯುವಕನ ವಿರುದ್ಧ ಪ್ರಕರಣ ದಾಖಲು
ಸುಬ್ರಹ್ಮಣ್ಯ :ಕೊರೋನ ಪಾಸಿಟಿವ್ ಬಂದ ಯುವಕನೋರ್ವನನ್ನು ಪಂಚಾಯತ್ ಸದಸ್ಯರು ಒತ್ತಾಯಪೂರ್ವಕವಾಗಿ ಕೋವಿಡ್ ಸೆಂಟರ್ ಗೆ ಸೇರಿಸಿದ್ದರು.
ಇದರಿಂದ ಅಸಮಾಧಾನಗೊಂಡ ಯುವಕ ಪಿಡಿಓ ಗೆ ಬೆದರಿಕೆ ಒಡ್ದಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಯುವಕನೋರ್ವನಿಗೆ ಕೊರೋನ ಪಾಸಿಟಿವ್ ಬಂದಿದ್ದು, ಹೋಂ ಐಸೋಲೇಷನ್ ನಲ್ಲಿರುವ ಸಂದರ್ಭದಲ್ಲಿ ಹೊರಗಡೆ ತಿರುಗಾಡುವುದನ್ನು ಸಾರ್ವಜನಿಕರು ಗಮನಿಸಿ ಪಂಚಾಯತ್ ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವಕನ ಮನೆಗೆ ದೇವಚಳ್ಳ ಪಿಡಿಓ ಗುರುಪ್ರಸಾದ್, ತಾಲೂಕು ಆಡಳಿತ ಅಧಿಕಾರಿಗಳು ಹಾಗೂ ಪೊಲೀಸ್ ಸಹಾಯದೊಂದಿಗೆ ಆತನನ್ನು ಹೋಂ ಐಸೋಲೇಷನಿಂದ ಪಂಜದ ಕೋವಿಡ್ ಸೆಂಟರ್ ಗೆ ಸೇರಿಸಿದ್ದಾರೆ.ಇದೇ ವಿಚಾರವಾಗಿ ನನ್ನನ್ನು ಒತ್ತಾಯಪೂರ್ವಕವಾಗಿ ಸೇರಿಸಿದ್ದಾರೆಂದು ಯುವಕನು ಪಿಡಿಓ ಗೆ ಬೆದರಿಕೆ ಹಾಕಿದ್ದು ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಬೆದರಿಕೆ ಪ್ರಕರಣ ದಾಖಲಾಗಿದೆ.