ಮಹಿಳೆಯ ಮಾನಭಂಗಕ್ಕೆ ಯತ್ನ, ಜೀವ ಬೆದರಿಕೆ..ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹಿಮಾನ್ ವಿರುದ್ಧ ಪ್ರಕರಣ ದಾಖಲು.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿ ಮಹಿಳೆಯೋರ್ವರು ನೀಡಿದ ದೂರಿನ ಮೇರೆಗೆ ಕನ್ಯಾನ ಗ್ರಾ.ಪಂ ಅಧ್ಯಕ್ಷನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕನ್ಯಾನ ಗ್ರಾಮದ ಪಿಲಿಚಂಡಿಗುಡ್ಡೆ ನಿವಾಸಿ ದೂರು ನೀಡಿದ ಮಹಿಳೆ. ತನ್ನ ಮನೆಗೆ ನೀರಿನ ಸಂಪರ್ಕದ ಬಗ್ಗೆ ವಿಚಾರಿಸಲು ಪಂಚಾಯತ್ ನ ಪಿಡಿಓ ಮತ್ತು ಸಿಬ್ಬಂದಿ ಬಂದಿದ್ದರು. ಈ ವೇಳೆ ಮನೆ ನೀರಿನ ಸಂಪರ್ಕ ಕಡಿತಗೊಳಿಸುವ ಬಗ್ಗೆ ಅಧ್ಯಕ್ಷರು ತಿಳಿಸಿರುತ್ತಾರೆ ಎಂದು ಪಿಡಿಓ ಹೇಳಿದಾಗ,ನೀರಿನ ಬಿಲ್ ಪಾವತಿಸಿರುವುದಾಗಿ ನಾನು ಹೇಳಿದ ಕಾರಣ ಕಡಿತಗೊಳಿಸದೇ ಅವರು ತೆರಳಿದ್ದರು.


ಆದರೆ ಸಂಜೆ ಹೊತ್ತಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಬಂದ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ರಹಿಮಾನ್ ಅವರು ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದಲ್ಲದೆ, ನೆಲಕ್ಕೆ ದೂಡಿ ಹಾಕಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave A Reply

Your email address will not be published.